ಒಂದು ವರ್ಷವಯಸ್ಸಿನ ಮಗುವನ್ನು ನಿರಾಶ್ರಿತರ ಬಂಧಿಖಾನೆಗೆ ಕಳುಹಿಸಿದ ಆಸ್ಟೇಲಿಯ!
ಮೆಲ್ಬರ್ನ್: ನಿರಾಶ್ರಿತಳಾಗಿ ಬಂದ ಒಂದು ವರ್ಷ ವಯಸ್ಸಿನ ಹೆಣ್ಣು ಮಗುವಿಗೂ ಆಸ್ಟ್ರೇಲಿಯ ಕರುಣೆ ತೋರಿಸಲಿಲ್ಲ. ಗಂಭೀರವಾಗಿ ಸುಟ್ಟಗಾಯಗಳಿಂದ ಚಿಕಿತ್ಸೆಯಲ್ಲಿದ್ದ ಮಗುವನ್ನು ಮತ್ತು ಕುಟುಂಬವನ್ನು ಬಿಡುಗಡೆಗೊಳಿಸಬೇಕೆಂಬ ನಿರಂತರ ಒತ್ತಡವನ್ನು ನಿರ್ಲಕ್ಷಿಸಿ ಜೈಲೆಂದೇ ಹೇಳಲಾಗುವ ನೌರೂವಿನ ನಿರಾಶ್ರಿತ ಕ್ಯಾಂಪ್‌ಗೆ ಸ್ಥಳಾಂತರಿಸಲು ಆಸ್ಟ್ರೇಲಿಯನ್ ಸರಕಾರ ತೀರ್ಮಾನಿಸಿದೆ. ನೌರೊ ದ್ವೀಪ ನಿರಾಶ್ರಿತರ ಬಂಧಿಖಾನೆ ಎಂದು ಕುಖ್ಯಾತವಾಗಿದೆ. ಮಗು ರೋಗ ಗುಣಮುಖವಾಗುವವರೆಗೆ ತಾತ್ಕಾಲಿಕವಾಗಿ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಿ ರೋಗ ಗುಣಮುಖವಾದೊಡನೆ ನೌರೊ ದ್ವೀಪಕ್ಕೆ ಸ್ಥಳಾಂತರಿಸಲುಆಸ್ಟ್ರೇಲಿಯ ಸರಕಾರ ಆದೇಶಿಸಿದೆ.
ಬೇಬಿ ಆಶಾ ಎಂಬ ಹೆಸರಿನಲ್ಲಿ ಮಾಧ್ಯಮಗಳಲ್ಲಿ ಸುದ್ದಿಯಾದ ಮಗು ಎರಡುವಾರಗಳೊಳಗೆ ಆಸ್ಟ್ರೇಲಿಯಾದ ನಿರಾಶ್ರಿತರ ವಿರೋಧಿ ಕಾನೂನಿನ ಪ್ರತೀಕವಾಗಿ ಬದಲಾಗಿದ್ದಾಳೆ. ಮಗುವನ್ನು ನೌರೊ ದ್ವೀಪಕ್ಕೆ ಕಳುಹಿಸುವುದು ಉದ್ದೇಶವಾಗಿದ್ದರೆ ಮಗುವನ್ನು ಬಿಟ್ಟುಕೊಡುವುದಿಲ್ಲ ಎಂದು ಬ್ರಿಸ್ಬೆನ್‌ನ ಆಸ್ಪತ್ರೆ ಅಧಿಕಾರಿಗಳು ಹೇಳಿದ್ದಾರೆ. ಆಸ್ಪತ್ರೆ ಹೊರಗೆ ಮಾನವಹಕ್ಕುಗಳ ಕಾರ್ಯಕರ್ತರು ಸೇರಿದ್ದಾರೆ. ಇದರಿಂದ ಒತ್ತಡಕ್ಕೊಳಗಾದ ಸರಕಾರ ಮುಖವುಳಿಸಲಿಕ್ಕಾಗಿ ಪುನರ್ವಸತಿ ಕೇಂದ್ರಕ್ಕೆ ಮಗುವನ್ನು ರವಾನಿಸಲು ತೀರ್ಮಾನಿಸಿತು. ಆಸ್ಟ್ರೇಲಿಯದಲ್ಲಿ ನಿರಾಶ್ರಿತರನ್ನು ನೌರೊ ದ್ವೀಪದಲ್ಲಿ ವಾಸಿಸುವಂತೆ ಮಾಡುವುದರ ವಿರುದ್ಧ ಬಲವಾದ ವಿರೋಧ ವ್ಯಕ್ತವಾಗುತ್ತಿರುವ ಸಂದರ್ಭದಲ್ಲಿಯೇ ಬೇಬಿ ಆಶಾಪ್ರಕರಣ ಪ್ರಕಟವಾಗಿದೆ. 37 ಮಕ್ಕಳು ಸಹಿತ 267 ಮಂದಿಯನ್ನು ಈ ದ್ವೀಪಕ್ಕೆ ಕಳುಹಿಸಲಾಗಿದೆ. ಅವರಿಗೆ ಆಸ್ಟ್ರೇಲಿಯ ಪೌರತ್ವ ನೀಡುವುದಿಲ್ಲ. ಮಾತ್ರವಲ್ಲ ಹುಟ್ಟಿದೂರಿಗೆ ಹೋಗಲು ಸರಕಾರ ಅನುಮತಿ ನೀಡುವುದಿಲ್ಲ. ಇಲ್ಲಿ ಮಾನವಹಕ್ಕು ಉಲ್ಲಂಘನೆ ನಡೆಯುತ್ತಿೆ ಎಂದು ವಿರೋಧ ವ್ಯಕ್ತವಾಗಿತ್ತು.
ಕೃಪೆ ಮಾಧ್ಯಮಂ