ಕಾರ್ಕಳ : ಜಿಲ್ಲಾ ಪಂಚಾಯತ್ ಬಿ,ಜೆ,ಪಿ ಕ್ಲೀನ್ ಸ್ವೀಪ್.. , ಕಾಂಗ್ರೆಸ್ ಗೆ ಕೈ ಕೊಟ್ಟ ಮತದಾರರು
ಕಾರ್ಕಳ : ತಾಲೂಕಿನ ಜಿ.ಪಂ.ನ ಐದು ಕ್ಷೇತ್ರಗಳ ಪೈಕಿ 5 ಸ್ಥಾನಗಳನ್ನು ಗೆಲ್ಲುವುದರ ಮೂಲಕ ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ. ಹೆಬ್ರಿ ಜಿ.ಪಂ. ಕ್ಷೇತ್ರ ದಿಂದ ಬಿ,ಜೆ,ಪಿ ಯ ಜ್ಯೋತಿ ಹರೀಶ್ ( 14591)ರವರು ತಮ್ಮ ಸಮೀಪದ ಪ್ರತಿಸ್ಪರ್ಥಿ ಕಾಂಗ್ರೆಸ್ ನ
ಯಶೋಧ ಸಂತೋಷ್ ಶೆಟ್ಟಿ( 10021) ರವರ ವಿರುದ್ದ 4570 ಮತಗಳ ಅಂತರದಲ್ಲಿ ಜಯ ಗಳಿಸಿದ್ದಾರೆ.
ಬೆಳ್ಮಣ್ಣು ಜಿ.ಪಂ. ಕ್ಷೇತ್ರ ದಿಂದ ಬಿ,ಜೆ,ಪಿಯ ರೇಶ್ಮಾ ಉದಯ ಶೆಟ್ಟಿ ( 11405 )ರವರು ತಮ್ಮ ಸಮೀಪದ ಪ್ರತಿಸ್ಪರ್ಥಿ ಕಾಂಗ್ರೆಸ್ ನ
ಚಿತ್ರಾ ದಿವಾಕರ ಶೆಟ್ಟಿ ( 9315) ರವರ ವಿರುದ್ದ 2090 ಮತಗಳ ಅಂತರದಲ್ಲಿ ಜಯ ಗಳಿಸಿದ್ದಾರೆ.
ಮಿಯ್ಯರು ಜಿ.ಪಂ. ಕ್ಷೇತ್ರ ದಿಂದ ಬಿ,ಜೆ,ಪಿ ಯ ದಿವ್ಯಾಶ್ರೀ ಗಿರೀಶ್ ಅಮೀನ್ (11813)ರವರು ತಮ್ಮ ಸಮೀಪದ ಪ್ರತಿಸ್ಪರ್ಥಿ ಕಾಂಗ್ರೆಸ್ ನ ಭಾನು ಭಾಸ್ಕರ್ ( 10445) ರವರ ವಿರುದ್ದ 2798 ಮತಗಳ ಅಂತರದಲ್ಲಿ ಜಯ ಗಳಿಸಿದ್ದಾರೆ.
ಬೈಲೂರು : ಕ್ಷೇತ್ರ ದಿಂದ ಬಿ,ಜೆ,ಪಿ ಯ ಸುಮಿತ್ ಶೆಟ್ಟಿ ( 11381 )ರವರು ತಮ್ಮ ಸಮೀಪದ ಪ್ರತಿಸ್ಪರ್ಥಿ ಕಾಂಗ್ರೆಸ್ ನ
ನೀರೆ ಕೃಷ್ಣ ಶೆಟ್ಟಿ (10445) ರವರ ವಿರುದ್ದ 936 ಮತಗಳ ಅಂತರದಲ್ಲಿ ಜಯ ಗಳಿಸಿದ್ದಾರೆ. ಪಕ್ಷೇತರ ಅಭ್ಯರ್ಥಿ ಬಾಬ ರಾಮ್ ದೇವ್ ಕಟ್ಟ ಅನುಯಾಯಿ ವಿವೇಕನಂದ ಮಲ್ಯ 262 ಮತಗಳನ್ನು ಪಡೆದಿದು ಠೇವಣಿಯನ್ನು ಕಳೆದುಕೊಂಡಿದ್ದಾರೆ.
ಬಜಗೋಳಿ ಕ್ಷೇತ್ರ ದಿಂದ ಬಿ,ಜೆ,ಪಿ ಯ ಉದಯ ಕೋಟ್ಯಾನ್ (11916 )ರವರು ತಮ್ಮ ಸಮೀಪದ ಪ್ರತಿಸ್ಪರ್ಥಿ ಕಾಂಗ್ರೆಸ್ ನ
ಮಂಜುನಾಥ ಪೂಜಾರಿ ( 9589 ) ರವರ ವಿರುದ್ದ 2327 ಮತಗಳ ಅಂತರದಲ್ಲಿ ಜಯ ಗಳಿಸಿದ್ದಾರೆ. ಪಕ್ಷೇತರ ಅಭ್ಯರ್ಥಿ ತನ್ವೀರ್ ಸಾಹೇಬ್ 258 ಮತಗಳನ್ನು ಪಡೆದಿದು ಠೇವಣಿಯನ್ನು ಕಳೆದುಕೊಂಡಿದ್ದಾರೆ. ವಿಶೇಷವೆಂದರೆ ಉದಯ ಕೋಟ್ಯಾನ್ ಹಾಗೂ ಮಂಜುನಾಥ ಪೂಜಾರಿ ಉಡುಪಿ ಜಿಲ್ಲಾ ಪಂಚಾಯತ್ ನ ಸದಸ್ಯರಾಗಿದ್ದು ಮಿಸಲಾತಿಯಿಂದಾಗಿ ಸ್ವಕ್ಷೇತ್ರ ವನ್ನು ಬಿಟ್ಟು ಬಜಗೋಳಿಯಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದರು. ಉದಯ ಕೋಟ್ಯಾನ್ ರವರು ಗೆಲ್ಲುವುದರ ಮೂಲಕ ಮತ್ತೋಮ್ಮೆ ಜಿಲ್ಲಾ ಪಂಚಾಯತ್ ಗೆ ಆಯ್ಕೆಯಾಗಿದ್ದಾರೆ.
ಮತ್ತೆ ತಾ,ಪಂ ಅಧಿಕಾರಕ್ಕೆ ಏರಿದ ಬಿ.ಜೆ.ಪಿ ಕಾರ್ಕಳ ತಾಲೂಕಿನ 20 ತಾ.ಪಂ ಕ್ಷೇತ್ರಗಳ ಪೈಕಿ 19 ಸ್ಥಾನಗಳನ್ನು ಗೆಲ್ಲುವುದರ ಮೂಲಕ ಮತ್ತೋಮ್ಮೆ ಆದಿಕಾರಕ್ಕೆ ಏರಿದೆ.
ಕಳೆದ ಬಾರಿ 19 ಸ್ಥಾನಗಳಲ್ಲಿ 14 ಸ್ಥಾನವನ್ನು ಗೆದ್ದಿದ್ದ ಬಿ,ಜೆ,ಪಿ ಈ ಬಾರಿ ಹೂಸದಾಗಿ ಸೇರ್ಪಡೆಗೊಂಡ ಕೆರ್ವಾಶೆ ಗ್ರಾ,ಪಂ ಸೇರಿದಂತೆ ಚಾರ,ನಾಡ್ಪಾಲು, ಹೆಬ್ರಿ, ಮುದ್ರಾಡಿ, ವರಂಗ, ಮರ್ಣೆ, ಹಿರ್ಗಾನ, ಮಾಳ, ನಲ್ಲೂರು, ಈದು ,ಮಿಯಾರು,
ಸಾಣೂರು, ಮುಂಡ್ಕೂರು, ಬೆಳ್ಮಣ್ಣು, ನಿಟ್ಟೆ, ಬೋಳ ,ಕುಕ್ಕುಂದೂರು, ಯರ್ಲಪ್ಪಾಡಿ ,ಕಲ್ಯಾ ಸೇರಿದಂತೆ 19 ಸ್ಥಾನಗಳಲ್ಲಿ ಗೆಲುವಿನ ನಗೆ ಬಿರಿದರೆ. ಕಳೆದ ಬಾರಿ 5 ಸ್ಥಾನಗಳಿಲ್ಲಿ ಗೆದ್ದಿದ್ದ ಕಾಂಗ್ರೆಸ್ ಈ ಬಾರಿ ಮುಡಾರು 1 ಸ್ಥಾನ ಗೆಲ್ಲುವುದರ ಮೂಲಕ ತೀವೃ ಮುಖಭಂಗಕ್ಕೀಡಾಗಿದೆ. ಮುಡಾರು ಕ್ಷೇತ್ರ ಕಳೆದ ಬಾರಿ ಬಿ,ಜೆ,ಪಿ ಯ ವಶದಲ್ಲಿದ್ದ ತಾ,ಪಂ ಅದ್ಯಕ್ಷರಾಗಿದ್ದ ವಿಜಯಕುಮಾರಿಯವರ ಕ್ಷೇತ್ರವಾಗಿತ್ತು. ಆದರೆ ಈ ಬಾರಿ ಕೈ ವಶವಾಗಿದ್ದು ವಿಶೇಷವಾಗಿದೆ.
ಚಾರ : ಬಿ,ಜೆ,ಪಿಯ ಅಮೃತ್ ಕುಮಾರ್ ಶೆಟ್ಟಿ (2662)ರವರು ಕಾಂಗ್ರೆಸ್‌ನ ಹೆಚ್.ದಿನೇಶ್ ಕುಮಾರ್ (1904)ರವರಿಗಿಂತ 158 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.
ನಾಡ್ಪಾಲು :ಬಿ,ಜೆ,ಪಿಯ ಜಯಶ್ರೀ ವೆಂಕಟೇಶ್ ಶೆಟ್ಟಿ(2265)ರವರು ಕಾಂಗ್ರೆಸ್‌ನ ಲಕ್ಷ್ಮೀ ದಯಾನಂದ( 1572)ರವರಿಗಿಂತ 693 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.
ಹೆಬ್ರಿ : ಬಿ,ಜೆ,ಪಿಯ ಚಂದ್ರಶೇಖರ್ ಶೆಟ್ಟಿ (1757) ಕಾಂಗ್ರಸ್‌ನ ಜಯಕರ ಪೂಜಾರಿ (1572)ರವರಿಗಿಂತ 26 ಮತಗಳ ಅಂತರದ ಗೆಲುವು ಸಾಧಿಸಿದ್ದು ಇಲ್ಲಿ ಸಂತೋಷ್ ನಾಯ್ಕಿ (ಪಕ್ಷೇತರ) ರವರು 223 ಮತಗಳಿಸಿದ್ದಾರೆ.
ಮುದ್ರಾಡಿ: ಬಿ,ಜೆ,ಪಿಯ ರಮೇಶ್ ಪೂಜಾರಿ, (2801) ಕಾಂಗ್ರೆಸ್‌ನ ರವಿಪೂಜಾರಿರವರಿಗಿಂತ 220 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.
ವರಂಗ : ಬಿ,ಜೆ,ಪಿಯ ಸುಲತಾ ರಾಮಕೃಷ್ಣ ನಾಯ್ಕ (4292)ರವರು ಕಾಂಗ್ರೆಸ್‌ನ ಗೀತಾ ಗುಣಪಾಲ ನಾಯ್ಕ ( 2932) ರವರಿಗಿಂತ 1360 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.
ಮರ್ಣೆ : ಬಿ,ಜೆ,ಪಿಯ ಹರೀಶ್ ನಾಯಕ್ (3393) ಕಾಂಗ್ರಸ್‌ನ ಪ್ರಕಾಶ್ ಶೆಟ್ಟಿ (2898)ರವರಿಗಿಂತ 495 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.
ಹಿರ್ಗಾನ : ಬಿ,ಜೆ,ಪಿಯ ಮಾಲಿನಿ ಜೆ.ಶೆಟ್ಟಿ (2001)ಕಾಂಗ್ರೆಸ್‌ನ ಲೀಲಾವತಿ ನಾಯಕ್ (1983)ರವರಿಗಿಂತ 18 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.
ಮಾಳ : ಬಿ,ಜೆ,ಪಿಯ ಸೌಬಾಗ್ಯ (3099) ಕಾಂಗ್ರಸ್‌ನ ಗೀತಾ ಸುರೇಶ್ ಪೂಜಾರಿ (2768),ರವರಿಗಿಂತ 331 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.
ಮುಡಾರು : ಕಾಂಗ್ರಸ್‌ನ ಸುಧಾಕರ ಶೆಟ್ಟಿ, (2802) ಬಿ,ಜೆ,ಪಿಯ ಹಿತೇಶ್ ಕುಮಾರ್ ಶೆಟ್ಟಿ (2774)ರವರಿಗಿಂತ 28 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.
ನಲ್ಲೂರು : ಬಿ.ಜೆ.ಪಿಯ ಸುರೇಶ್ ಶೆಟ್ಟಿ (2823) ಕಾಂಗ್ರಸ್‌ನ ಕೃಷ್ಣ ಶೆಟ್ಟಿ (2483),ರವರಿಗಿಂತ 340 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.
ಈದು : ಬಿಜೆಪಿಯ ಮಂಜಳ (2408) ಕಾಂಗ್ರೆಸ್‌ನ ಮೋಹಿನಿ ನಾರಾಯಣ ಸುವರ್ಣ (2046)ರವರಿಗಿಂತ 362 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.
ಮಿಯಾರು : ಬಿ,ಜೆ,ಪಿಯ ಪ್ರಮೀಳ 3090 ಕಾಂಗ್ರಸ್‌ನ ಕವಿತಾ ತಾರನಾಥ ಕೋಟ್ಯಾನ್ (2813),ರವರಿಗಿಂತ 283 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.
ಸಾಣೂರು : ಬಿ.ಜೆ.ಪಿಯ ಪ್ರವೀಣ್ ಕೋಟ್ಯಾನ್ ( 2872) ಕಾಂಗ್ರಸ್‌ನ ಜಗದೀಶ್ ಶೆಟ್ಟಿಗಾರ್( 2408)ರವರಿಗಿಂತ 464 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.
ಮುಂಡ್ಕೂರು : ಬಿ.ಜೆ.ಪಿಯ ಗೋಪಾಲ ಮೂಲ್ಯ(2843), ಕಾಂಗ್ರೆಸ್‌ನ ಶ್ರೀಧರ್ ಸನಿಲ್ (2539)ರವರಿಗಿಂತ 304 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.
ಬೆಳ್ಮಣ್ಣು : ಬಿ.ಜೆ.ಪಿಯ ಆಶಾ ದೇವೆಂದ್ರ ಶೆಟ್ಟಿ (2852) ಕಾಂಗ್ರೆಸ್‌ನ ಅನಿತಾ ಕಾಸ್ತೋಲಿನೂ (1825)ರವರಿಗಿಂತ 1027 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.
ನಿಟ್ಟೆ : ಬಿ.ಜೆ.ಪಿಯ ಹರಿಶ್ಚಂದ್ರ (3200) ಕಾಂಗ್ರೆಸ್‌ನ ರಮೇಶ್ ಬಿ. (2875),ರವರಿಗಿಂತ 325 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.
ಬೋಳ ; ಬಿ.ಜೆ.ಪಿಯ ಪುಷ್ಪಾ ಸತೀಶ್ ಪೂಜಾರಿ( 2770), ಕಾಂಗ್ರೆಸ್‌ನ ಯಶೋಧ ಮೊಯ್ಲಿ (1980)ರವರಿಗಿಂತ 790 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.
ಕುಕ್ಕುಂದೂರು : ಬಿ.ಜೆ.ಪಿಯ ಅಶೋಕ್ ಶೆಟ್ಟಿ (4028), ಕಾಂಗ್ರಸ್‌ನ ಉದಯ ಶೆಟ್ಟಿ (3342)ರವರಿಗಿಂತ 686 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.
ಯರ್ಲಪ್ಪಾಡಿ : ಬಿ.ಜೆ.ಪಿಯ ನಿರ್ಮಲ (4015), ಕಾಂಗ್ರಸ್‌ನ ಆಶ್ವಿನಿ ಕುಮಾರಿ (3556)ರವರಿಗಿಂತ 449 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.
ಕಲ್ಯಾ : ಬಿ.ಜೆ.ಪಿಯ ವಿದ್ಯಾ ಎಂ.ಸಾಲ್ಯಾನ್ (3582) ಕಾಂಗ್ರೆಸ್‌ನ ಜಯಂತಿ ಆಚಾರ್ಯ(3469) ರವರಿಗಿಂತ 113 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ