×
Ad

ಮೋದಿ ಸೂಟ್ ಖರೀದಿಸಿದ ಉದ್ಯಮಿಯಿಂದ ಹೆಣ್ಣು ಮಕ್ಕಳಿಗೆ 200 ಕೋಟಿ ಕೊಡುಗೆ

Update: 2016-02-23 17:18 IST

ಆಗ್ರಾ, ಫೆ. 23 : ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ಚಿನ್ನದಿಂದ ಕೆತ್ತಲಾಗಿದ್ದ ವಿವಾದಾತ್ಮಕ ಸೂಟನ್ನು 4.21 ಕೋಟಿ ರೂಪಾಯಿಗೆ ಖರೀದಿಸಿ ಸುದ್ದಿ ಮಾಡಿದ್ದ ಸೂರತ್ ನ ವಜ್ರದ ವ್ಯಾಪಾರಿ ಲವ್ ಜಿ ಭಾಯ್ ಬಾದ್ ಶಾಹ್ ಈಗ  ಮತ್ತೆ ಸುದ್ದಿಯಲ್ಲಿದ್ದಾರೆ. ದೇಶದ ವಿವಿಧೆಡೆಗಳಿಂದ ಆಯ್ದ ಹತ್ತು ಸಾವಿರ ಹೆಣ್ಣು ಮಕ್ಕಳಿಗೆ ತಲಾ 2 ಲಕ್ಷ ರೂಪಾಯಿಯಂತೆ ಒಟ್ಟು 200 ಕೋಟಿ ರೂಪಾಯಿ ನೀಡಲಿದ್ದಾರೆ ಈ ಬಾದ್ ಶಾಹ್. 

ಮಂಗಳವಾರ ವೃಂದಾವನದಲ್ಲಿ ಈ ವಿಷಯವನ್ನು ತಿಳಿಸಿರುವ ಬಾದ್ ಶಾಹ್ ಪಟೇಲ್ ಮಾರ್ಚ್ 3 ರಂದು ಸೂರತ್ ನಲ್ಲಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದಿದ್ದಾರೆ. ಹೆಣ್ಣು ಹೆತ್ತವರು ಅವರನ್ನು ಬೆಳೆಸುವ ಕುರಿತು ಚಿಂತಿತರಾಗದಂತೆ ಮಾಡುವುದು ಈ ಯೋಜನೆಯ ಉದ್ದೇಶವಂತೆ.

ಸಾಧ್ವಿ ಋತಾಂಬರ ಅವರಿಂದ ತಾನು ಸ್ಫೂರ್ತಿ ಪಡೆದಿರುವುದಾಗಿ ಹೇಳುವ ಪಟೇಲ್ ಕೇಂದ್ರ ಸರಕಾರದ ' ಬೇಟಿ ಬಚಾವೋ, ಬೇಟಿ ಪಡಾವೋ' ಅಭಿಯಾನಕ್ಕೆ ಇದು ನನ್ನ ಪುಟ್ಟ ಕೊಡುಗೆ ಎಂದು ಹೇಳಿದ್ದಾರೆ. 

ಈ ಹಿಂದೆಯೂ ಪಟೇಲ್ ಇದೇ ರೀತಿಯ ಕೊಡುಗೆಗಳನ್ನು ನೀಡಿದ್ದರು. ಕಳೆದ ವರ್ಷ ತಮ್ಮ ಪಾತಿದಾರ್ ಸಮುದಾಯದ 5000 ಹೆಣ್ಣು ಶಿಶುಗಳಿಗೆ ತಲಾ 2 ಲಕ್ಷ ರೂಪಾಯಿಯ ಬಾಂಡ್ ಅನ್ನು ಅವರು ವಿತರಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News