ಮುಹಮ್ಮದ್ ಆಮಿರ್ ಪಾಕ್ ತಂಡಕ್ಕೆ ವಾಪಸ್: ಕೊಹ್ಲಿಗೆ ಸಂತಸ

Update: 2016-02-23 12:15 GMT

ಕೊಲಂಬೊ, ಫೆ.23: ಪ್ರತಿಭಾವಂತ ಎಡಗೈ ವೇಗದ ಬೌಲರ್ ಮುಹಮ್ಮದ್ ಆಮಿರ್ ಪಾಕಿಸ್ತಾನ ತಂಡಕ್ಕೆ ವಾಪಸಾಗಿರುವುದಕ್ಕೆ ಭಾರತದ ಉಪ ನಾಯಕ ವಿರಾಟ್ ಕೊಹ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.
 
2010ರ ಇಂಗ್ಲೆಂಡ್‌ನ ಪ್ರವಾಸದ ವೇಳೆ ಸ್ಪಾಟ್ ಫಿಕ್ಸಿಂಗ್ ನಡೆಸಿದ ಆರೋಪದಲ್ಲಿ ಆಮಿರ್ 5 ವರ್ಷಗಳ ಕಾಲ ನಿಷೇಧಕ್ಕೆ ಒಳಗಾಗಿದ್ದರು. ಐದು ವರ್ಷಗಳ ಶಿಕ್ಷೆಯ ಅವಧಿ ಮುಗಿದ ನಂತರ ಈ ವರ್ಷ ಆಮಿರ್ ಕ್ರಿಕೆಟ್‌ಗೆ ವಾಪಸಾಗಿದ್ದರು. ‘‘ಪಾಕಿಸ್ತಾನ ವಿರುದ್ಧದ ಪಂದ್ಯ ನನಗೆ ಭಿನ್ನವಾಗಿ ಕಾಣುತ್ತಿಲ್ಲ. ಇದು ಕ್ರಿಕೆಟ್‌ನ ಒಂದು ಪಂದ್ಯವಷ್ಟೇ. ನಾವು ಎದುರಾಳಿಗಳನ್ನು ಒಂದೇ ದೃಷ್ಟಿಯಿಂದ ನೋಡುತ್ತೇವೆ. ಪಾಕ್ ವಿರುದ್ಧದ ಪಂದ್ಯ ಖಂಡಿತವಾಗಿಯೂ ಸ್ಪರ್ಧಾತ್ಮಕವಾಗಿರುತ್ತದೆ. ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿರುತ್ತಾರೆ. ಆಮಿರ್ ಪಾಕ್ ತಂಡಕ್ಕೆ ವಾಪಸಾಗಿದ್ದಕ್ಕೆ ಸಂತೋಷವಾಗುತ್ತಿದೆ. ಅವರಿಗೆ ತನ್ನ ತಪ್ಪಿನ ಅರಿವಾಗಿದೆ. ಆಮಿರ್ ವಿಶ್ವ ದರ್ಜೆಯ ಬೌಲರ್. ಅವರು ಐದು ವರ್ಷ ನಿಷೇಧಕ್ಕೆ ಒಳಗಾಗದೇ ಇರುತ್ತಿದ್ದರೆ ಇದೀಗ ವಿಶ್ವದ ಅಗ್ರ ಬೌಲರ್ ಆಗುತ್ತಿದ್ದರು. ಅವರಲ್ಲಿ ತುಂಬಾ ಪ್ರತಿಭೆಯಿದೆ. ಅವರ ಬೌಲಿಂಗ್‌ನಲ್ಲಿ ವೇಗ, ಬೌನ್ಸ್ ಹಾಗೂ ಯಾರ್ಕರ್‌ಗಳಿರುತ್ತದೆ’’ ಎಂದು ಕೊಹ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News