ಮೂಡುಬಿದಿರೆ ಬಿಜೆಪಿ ವಿಜಯೋತ್ಸವ; ಶಾಸಕ,ಸಚಿವ ಹಾಗೂ ಅಧಿಕಾರಿಗಳ ಸಹಕಾರದೊಂದಿಗೆ ಕ್ಷೇತ್ರದ ಅಭಿವೃದ್ಧಿ: ಸುಚರಿತ ಶೆಟ್ಟಿ
ಮೂಡುಬಿದಿರೆ : ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಐದು ಕ್ಷೇತ್ರಗಳಲ್ಲಿ ಬಿಜೆಪಿ ಜಯ ಗಳಿಸುವ ಮೂಲಕ ವಿಶೇಷ ಸಾಧನೆ ಮಾಡಿದೆ. ಪಕ್ಷದ ಕಾರ್ಯಕರ್ತರ ಸಂಘಟಿತ ಹೋರಾಟ, ನಾಯಕರ ಸಹಕಾರದಿಂದ ಗೆಲುವು ಸಾಧ್ಯವಾಗಿದೆ. ಶಾಸಕ, ಮಂತ್ರಿಗಳು ಮತ್ತು ಅಧಿಕಾರಿಗಳ ಸಹಕಾರದೊಂದಿಗೆ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದು ಜಿ.ಪಂ ಸದಸ್ಯ ಸುಚರಿತ ಶೆಟ್ಟಿ ತಿಳಿಸಿದ್ದಾರೆ. ಅವರು ಮಂಗಳವಾರದಂದು ಪುತ್ತಿಗೆ, ಶಿರ್ತಾಡಿ ಜಿ. ಪಂ ಹಾಗೂ ನೆಲ್ಲಿಕಾರು, ಪಾಲಡ್ಕ, ಬೆಳುವಾಯಿ, ಶಿರ್ತಾಡಿ ತಾ. ಪಂ ಕ್ಷೇತ್ರಗಳಲ್ಲಿ ವಿಜೇತರಾದ ಬಿಜೆಪಿ ಅಭ್ಯರ್ಥಿಗಳ ವಿಜಯೋತ್ಸವ ಮೆರವಣಿಗೆಯಲ್ಲಿ ಭಾಗವಹಿಸಿ ನಂತರ ಪತ್ರಕರ್ತರೊಂದಿಗೆ ಮಾತನಾಡಿದರು. ಜನರು ಬಿಜೆಪಿಯನ್ನು ನಂಬಿದ್ದಾರೆ. ಮೋದಿ ಸರಕಾರದ ಅಭಿವೃದ್ಧಿ ಕಾರ್ಯಗಳನ್ನು ಗಮನಿಸಿದ್ದಾರೆ. ಹಾಗೂ ಕ್ಷೇತ್ರದ ಜನರು ತನಗೆ ಸಹಕರಿಸಿದ್ದಾರೆ. ಮುಂದಿನ ದಿನಗಳಲ್ಲಿ ಕೇಂದ್ರದ ಸರ್ಕಾರದ ಜನಪರ ಯೋಜನೆಗಳನ್ನು ಜನರಿಗೆ ಪ್ರಾಮಾಣಿಕವಾಗಿ ತಲುಪಿಸಲು ಪ್ರಯತ್ನಿಸುತ್ತೇವೆ ಎಂದರು.
ಶಿರ್ತಾಡಿ ಕ್ಷೇತ್ರದ ವಿಜೇತ ಅಭ್ಯರ್ಥಿ ಸುಜಾತ ಕೆ.ಪಿ, ತಾ. ಪಂ ವಿಜೇತ ಅಭ್ಯರ್ಥಿಗಳಾದ ರೇಖಾ ಸಾಲ್ಯಾನ್ ನೆಲ್ಲಿಕಾರು, ನಾಗವೇಣಿ ಶಿರ್ತಾಡಿ, ಸಂತೋಷ್ ಬೆಳುವಾಯಿ, ವನಿತಾ ನಾಯ್ಕಾ ಪಾಲಡ್ಕ, ಬಿಜೆಪಿ ಮುಖಂಡರಾದ ಕೆ.ಪಿ ಜಗದೀಶ ಅಧಿಕಾರಿ, ಕೃಷ್ಣರಾಜ ಹೆಗ್ಡೆ, ಭುವನಾಭಿರಾಮ ಉಡುಪ, ಸುದರ್ಶನ್ ಎಂ, ದೇವಿ ಪ್ರಸಾದ್ ಪುನರೂರು, ನಾಗರಾಜ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು. ಮೊದಲಿಗೆ ಮೂಡುಬಿದಿರೆ ನಗರದೆಲ್ಲೆಡೆ ನೂರಾರು ಕಾರ್ಯಕರ್ತರು ಮೆರವಣಿಗೆಯಲ್ಲಿ ತೆರಳಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.