×
Ad

ಕುಗ್ಗದ ಬಿಜೆಪಿ, ಹಿಗ್ಗಿದ ಕಾಂಗ್ರೆಸ್; ತಾ.ಪಂನಲ್ಲಿ ಅಧಿಕಾರ ಉಳಿಸಿಕೊಂಡ ಬಿಜೆಪಿ, ಜಿ.ಪಂನಲ್ಲಿ ಸಮಬಲ

Update: 2016-02-23 17:50 IST

ಪುತ್ತೂರು: ಪುತ್ತೂರು ತಾ.ಪಂನಲ್ಲಿ ಕಳೆದ ಬಾರಿ ಅಧಿಕಾರ ನಡೆಸಿದ ಬಿಜೆಪಿಯು ಹಿಂದಿನ ಬಾರಿಯಂತೆ 16 ಕ್ಷೇತ್ರಗಳನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಕಳೆದ ಬಾರಿ 22 ಕ್ಷೇತ್ರಗಳಿದ್ದು, ಈ ಪೈಕಿ 16 ಸ್ಥಾನವನ್ನು ಬಿಜೆಪಿ, 5 ಸ್ಥಾನವನ್ನು ಕಾಂಗ್ರೆಸ್ ಮತ್ತು 1 ಸ್ಥಾನವನ್ನು ಜೆಡಿಎಸ್ ಪಡೆದುಕೊಂಡಿತ್ತು. ಈ ಬಾರಿ 24 ಸ್ಥಾನಗಳಿಗೆ ಏರಿಕೆಯಾಗಿದ್ದು, 16 ಸ್ಥಾನವನ್ನು ಪಡೆದುಕೊಂಡ ಬಿಜೆಪಿ ಕುಗ್ಗದೆ ಮುಂದುವರಿದಿದೆ. ಕಾಂಗ್ರೆಸ್ ತನ್ನ 5 ಸ್ಥಾನಗಳಿಂದ 9 ಸ್ಥಾನಕ್ಕೆ ಹಿಗ್ಗಿದೆ. 6 ಜಿ.ಪಂ ಕ್ಷೇತ್ರದಲ್ಲಿ ಕಳೆದ ಬಾರಿ ಬಿಜೆಪಿ 5 ಸ್ಥಾನಗಳನ್ನು ಪಡೆದುಕೊಂಡಿತ್ತು. 1 ಸ್ಥಾನ ಕಾಂಗ್ರೆಸ್‌ಗೆ ಸಿಕ್ಕಿತ್ತು. ಈ ಬಾರಿ ಬಿಜೆಪಿ 3 ಸ್ಥಾನವನ್ನು ಮಾತ್ರ ಪಡೆದುಕೊಂಡಿದ್ದು, ಕಾಂಗ್ರೆಸ್ 3 ಸ್ಥಾನವನ್ನು ಪಡೆದುಕೊಳ್ಳುವ ಮೂಲಕ ಹಿಗ್ಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News