×
Ad

ಕಡಬ: ಜಿಲ್ಲಾ ಪಂಚಾಯತ್ ಕ್ಷೇತ್ರ ಕಾಂಗ್ರೆಸ್ ತೆಕ್ಕೆಗೆ

Update: 2016-02-23 17:52 IST

ಕಡಬ, ಫೇ.23. ಕಡಬ ಜಿಲ್ಲಾ ಪಂಚಾಯತ್ ಕ್ಷೇತ್ರವು ಕಾಂಗ್ರೆಸ್ ಪಾಲಾಗಿದ್ದು ಎರಡನೇ ಬಾರಿಗೆ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ. ನೂಜಿಬಾಳ್ತಿಲ ಗ್ರಾಮ ಪಂಚಾಯತ್ ಅಧ್ಯಕ್ಷ ಪಿ.ಪಿ.ವರ್ಗೀಸ್‌ರವರು ತನ್ನ ಎದುರಾಳಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಪುತ್ತೂರು ಎಪಿಎಂಸಿ ಅಧ್ಯಕ್ಷ ಕೃಷ್ಣಶೆಟ್ಟಿಯವರನ್ನು 151 ಮತಗಳ ಅಂತರದಿಂದ ಸೋಲಿಸಿದರು. ತೀವ್ರ ಕುತೂಹಲ ಕೆರಳಿಸಿದ್ದ ಈ ಕ್ಷೇತ್ರದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಸಯ್ಯದ್ ಮೀರಾ ಸಾಹೇಬ್ ಜೆಡಿಎಸ್ ಪಕ್ಷದಿಂದ ಮತ್ತು ಪಕ್ಷೇತರರಾಗಿ ಗಣಪಯ್ಯ ಗೌಡ ಹಾಗೂ ಮಹಾವೀರ ಎಂಬವರು ಸ್ಪರ್ಧಿಸಿದ್ದರು. ಮೀರಾ ಸಾಹೇಬರು ಈ ಹಿಂದೆ ತನ್ನ ಆಡಳಿತಾವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳಿಂದಾಗಿ ಮತ್ತು ಗಣಪಯ್ಯ ಗೌಡರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಸಕ್ರಿಯರಾಗಿದ್ದರಿಂದಾಗಿ ಅವರೀರ್ವರು ಪಡೆಯುವ ಮತಗಳು ನಿರ್ಣಾಯಕ ಪಾತ್ರ ವಹಿಸಬಹುದೆನ್ನುವ ಮಾತು ಕೂಡ ಕೇಳಿ ಬಂದಿತ್ತು. ಅದೃಷ್ಟವಶಾತ್ ಪಿ.ಪಿ.ವರ್ಗೀಸ್ ಚುನಾಯಿತರಾದರು.
ಕಡಬ ತಾಲೂಕು ಪಂಚಾಯತ್ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಫಝಲ್ ಕೋಡಿಂಬಾಳರವರು ಬಿಜೆಪಿಯ ಸತೀಶ್ ನಾಯ್ಕೆರನ್ನು ಸೋಲಿಸಿದರು. ಬಿಳಿನೆಲೆ ತಾಲೂಕು ಪಂಚಾಯತ್ ಕ್ಷೇತ್ರದಲ್ಲಿ ವಿಹಿಂಪ ಮುಖಂಡ ಬಿಜೆಪಿಯ ಪ್ರಕಾಶ್ ಎನ್.ಕೆ. ಯವರನ್ನು ಕಾಂಗ್ರೆಸ್‌ನ ಆಶಾರವರು ಸೋಲಿಸಿದರು. ಐತ್ತೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಕುಮಾರಿ ವಾಸುದೇವನ್‌ರವರನ್ನು ಬಿಜೆಪಿಯ ಕುಸುಮಾರವರು ಸೋಲಿಸಿದರು. ಕುಟ್ರುಪ್ಪಾಡಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಗಣೇಶ್ ಕೈಕುರೆಯವರು ವಿಜಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News