×
Ad

"ಕ್ಲೀನ್ ಗಂಗಾ" ಟೀ ಶರ್ಟ್ ಹಾಕಿಕೊಂಡು ತ್ರಿವೇಣಿ ಸಂಗಮದಲ್ಲೇ ಮೂತ್ರ ಮಾಡಿದ ಹೆಚ್ಚುವರಿ ಜಿಲ್ಲಾಧಿಕಾರಿ

Update: 2016-02-23 18:35 IST

ಹೊಸದಿಲ್ಲಿ , ಫೆ. 23 : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಸ್ವಚ್ಛ ಭಾರತ ಯೋಜನೆ ಅನುಷ್ಠಾನ ಮಾಡಬೇಕಾದ ಅಧಿಕಾರಿಯೇ ಅಲಹಾಬಾದ್ ಸಂಗಮ್ ನ ದಡದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿರುವಾಗ ಸಿಕ್ಕಿ ಬಿದ್ದಿದ್ದಾರೆ. 

ವಿಶೇಷವೆಂದರೆ ಅಲ್ಲಲ್ಲಿ ಮೂತ್ರ ವಿಸರ್ಜನೆ ಮಾಡುವವರ ವೀಡಿಯೋವನ್ನು ಯೂಟೂಬ್ ನಲ್ಲಿ ಪ್ರಸಾರ ಮಾಡಲಾಗುವುದು ಎಂದು ಉತ್ತರ ಪ್ರದೇಶ ಸರಕಾರ ಘೋಷಿಸಿದ ಬೆನ್ನಲ್ಲೇ ಅಲಹಾಬಾದ್ ನ ಹೆಚ್ಚುವರಿ ಜಿಲ್ಲಾಧಿಕಾರಿ ಒ.ಪಿ. ಶ್ರೀವಾಸ್ತವ ಅವರು ತ್ರಿವೇಣಿ ಸಂಗಮದಲ್ಲೇ  ಮೂತ್ರ ವಿಸರ್ಜನೆ ಮಾಡುತ್ತಿರುವ ಮಾಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಡಿದೆ. ಗಂಗಾ , ಯಮುನಾ ಹಾಗು ಸರಸ್ವತಿ ನದಿಗಳ ಸಂಗಮ ತಾಣವಾಗಿರುವ ತ್ರಿವೇಣಿ ಸಂಗಮ ಹಿಂದೂಗಳಿಗೆ ಅತ್ಯಂತ ಪವಿತ್ರ ಸ್ಥಳವಾಗಿದೆ. 

ಸಾಲದ್ದಕ್ಕೆ , ಈ ಅಧಿಕಾರಿ " ಕ್ಲೀನ್ ಗಂಗಾ " ಎಂಬ ಟೀ ಶರ್ಟ್ ಕೂಡ ಧರಿಸಿದ್ದ ಎಂದು ಟೈಮ್ಸ್ ನೌ ವರದಿ ಮಾಡಿದೆ. ಸರಕಾರ ಈ ಅಧಿಕಾರಿಯ ವಿರುದ್ಧ ಏನು ಕ್ರಮ ಕೈಗೊಂಡಿದೆ ಎಂದು ತಿಳಿದು ಬಂದಿಲ್ಲ. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News