ಬೆಳ್ತಂಗಡಿ: 26 ತಾ.ಪಂ. ಕ್ಷೇತ್ರಗಳಲ್ಲಿ ಬಿಜೆಪಿ 14, ಕಾಂಗ್ರೇಸ್ ಪಕ್ಷ 12 ಸ್ಥಾನ
ಬೆಳ್ತಂಗಡಿ: 26 ತಾ.ಪಂ. ಕ್ಷೇತ್ರಗಳನ್ನು ಹೊಂದಿರುವ ಬೆಳ್ತಂಗಡಿ ತಾಲೂಕಿನಲ್ಲಿ ಈ ಬಾರಿ ಬಿಜೆಪಿ 14 ಕ್ಷೇತ್ರಗಳಲ್ಲಿ ಜಯಭೇರಿ ಭಾರಿಸಿದ್ದು ಅಧಿಕಾರ ಉಳಿಸಿಕೊಂಡಿದೆ. ಕಾಂಗ್ರೇಸ್ ಪಕ್ಷ 12 ಸ್ಥಾನವನ್ನು ಪಡೆದು ಈ ಬಾರಿಯೂ ಪ್ರತಿಪಕ್ಷ ಸ್ಥಾನದಲ್ಲಿ ಕುಳಿತುಕೊಳ್ಳಲಿದೆ. ಈ ಸಲ ಫಲಿತಾಂಶದಲ್ಲಿ ಬಿಜೆಪಿ 5 ಸ್ಥಾನವನ್ನು ಕಳೆದುಕೊಂಡಿದ್ದು ಕಾಂಗ್ರೇಸ್ 7 ಹೆಚ್ಚುವರಿ ಸ್ಥಾನವನ್ನು ಪಡೆದುಕೊಂಡಿರುವುದಲ್ಲದೆ 2 ಹೊಸ ಕ್ಷೇತ್ರಗಳನ್ನೂ ಗೆದ್ದುಕೊಂಡಿದೆ.ಕಳೆದ ಬಾರಿ 24 ಕ್ಷೇತ್ರಗಳಲ್ಲಿ ಬಿಜೆಪಿ 19, ಕಾಂಗ್ರೇಸ್ 5 ಸ್ಥಾನಗಳನ್ನು ಪಡೆದುಕೊಂಡಿತ್ತು.
ಹಿಂದುಳಿದ ವರ್ಗ ಎ ಮಹಿಳೆ ಮೀಸಲಾತಿಇರುವ ನಾರಾವಿ ತಾ.ಪಂ. ಕ್ಷೇತ್ರದಲ್ಲಿ ಕಾಂಗ್ರೇಸ್ ಅಭ್ಯರ್ಥಿ ರೂಪಲತಾ 3,026 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಪ್ರತಿಸ್ಪರ್ಧಿ ಬಿಜೆಪಿಯ ಯಶೋದ ವಿ ಅವರು 2754 ಮತಗಳನ್ನು ಪಡೆದಿದ್ದಾರೆ. ರೂಪಲತಾ ಅವರು 272 ಮತಗಳ ಅಂತರದಿಂದ ಗೆಲುವನ್ನು ಪಡೆದಿದ್ದಾರೆ. ಇಲ್ಲಿ 83 ನೋಟಾ ಮತಗಳು ದಾಖಲಾಗಿವೆ.
ಸಾಮಾನ್ಯಕ್ಷೇತ್ರವಾಗಿದ್ದ ವೇಣೂರಿನಲ್ಲಿ ತಾ.ಪಂ. ಸದಸ್ಯರಾಗಿದ್ದ ವಿಜಯಗೌಡ ಅವರು ಇದೀಗ ಮೂರನೇ ಬಾರಿಗೆ ಗೆಲುವನ್ನು ಕಂಡಿದ್ದಾರೆ.ಅವರಿಗೆ 2676 ಮತಗಳು ಲಭಿಸಿದರೆ, ಪ್ರತಿಸ್ಪರ್ಧಿ ಕಾಂಗ್ರೇಸ್‌ನ ಸತೀಶ್ ಹೆಗ್ಡೆ ಅವರಿಗೆ 2,627 ಮತಗಳು ದೊರೆತವು. 49 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿಗೆಲುವನ್ನುಕಂಡರೆ 99 ನೋಟಾ ಮತಗಳು ಚಲಾವಣೆಯಾಗಿವೆ.
ಪರಿಶಿಷ್ಟ ಜಾತಿ ಮೀಸಲಾತಿ ಇರುವ ಹೊಸಂಗಡಿ ಕ್ಷೇತ್ರದಲ್ಲಿ ಕಾಂಗ್ರೇಸ್‌ನ ಓಬಯ್ಯ ಅವರು 3,696 ಮತಗಳನ್ನು ಗಳಿಸಿ ಜಯಗಳಿಸಿದ್ದಾರೆ. ಪ್ರತಿಸ್ಪರ್ಧಿ ಬಿಜೆಪಿಯ ದೇವಪ್ಪ ಅವರಿಗೆ 3,444ಮತಗಳು ದೊರೆತಿದ್ದು 152 ಮತಗಳ ಅಂತರಿಂದ ಗೆಲುವನ್ನು ಪಡೆದಿದ್ದಾರೆ.ಇಲ್ಲಿ 112 ನೋಟಾಚಲಾವಣೆಯಾಗಿವೆ.
ಹಿಂದುಳಿದ ವರ್ಗ ಎ. ಮಹಿಳಾ ಮೀಸಲಾತಿಯ ಅಳದಂಗಡಿ ಕ್ಷೇತ್ರದಲ್ಲಿ ಕಾಂಗ್ರೇಸ್ ವಿನೂಷಾ ಪ್ರಕಾಶ್ 2,791 ಮತಗಳನ್ನು ಗಳಿಸಿ ಗೆಲುವನ್ನು ಪಡೆದಿದ್ದಾರೆ. ಇವರ ಪ್ರತಿಸ್ಪರ್ಧಿ ಬಿಜೆಪಿಯ ಪುಷ್ಪಾವತಿ ಅವರಿಗೆ 2,665 ಮತಗಳನ್ನು ಗಳಿಸಿ 126 ಮತಗಳ ಅಂತರದಿಂದ ಸೋಲನ್ನು ಕಂಡರು.ಇಲ್ಲಿ 218 ನೋಟಾಚಲಾವಣೆಯಾಗಿದ್ದು ಫಲಿತಾಂಶದ ಮೇಲೂ ಪ್ರಭಾವ ಬೀರಿದೆ.
ಸಾಮಾನ್ಯ ಕ್ಷೇತ್ರವಾಗಿರುವ ಅಂಡಿಂಜೆಯಲ್ಲಿ ಬಿಜೆಪಿ ಸುಧೀರ್ ಸುವರ್ಣಅವರು 2,397 ಮತಗಳನ್ನು ಗಳಿಸಿ ಎರಡನೇ ಬಾರಿಗೆಆಯ್ಕೆಯಾಗಿದ್ದಾರೆ. ಪ್ರತಿಸ್ಪರ್ಧಿಕಾಂಗ್ರೇಸ್‌ನ ಶುಭಕರ ಪೂಜಾರಿ 2,200 ಮತಗಳನ್ನು ಗಳಿಸಿ 197 ಮತಗಳ ಅಂತರದಿಂದ ಸೋಲನ್ನುಕಂಡಿದ್ದಾರೆ. ಜೆಡಿಯು ಅಭ್ಯರ್ಥಿಜೇಮ್ಸ್ 52 ಮತಗಳನ್ನು ಗಳಿಸಿದ್ದಾರೆ. 42 ನೋಟಾ ಮತಗಳು ಚಲಾವಣೆಯಾಗಿವೆ.
ಹಿಂದುಳಿದ ವರ್ಗ ಬಿ ಮಹಿಳಾ ಮೀಸಲಾತಿಯ ಶಿರ್ಲಾಲುವಿನಲ್ಲಿ ಕಾಂಗ್ರೇಸ್‌ನ ಜಯಶೀಲ ಕುಶಲಪ್ಪಗೌಡಅವರು 2,450 ಮತಗಳನ್ನು ಗಳಿಸಿ ಪ್ರತಿಸ್ಪರ್ಧಿ ಬಿಜೆಪಿಯ ವೇದಾವತಿ ವಸಂತಗೌಡ (2348 ಮತ) ಅವರನ್ನು 102 ಮತಗಳ ಅಂತರದಿಂದ ಸೋಲಿಸಿದರು.ಇಲ್ಲಿ 129 ನೋಟಾಗಳು ಚಲಾವಣೆಯಾಗಿವೆ.
ಸಮಾನ್ಯ ಮಹಿಳಾ ಮೀಸಲಾತಿಇರುವ ಪಡಂಗಡಿ ಕ್ಷೇತ್ರದಲ್ಲಿ ಕಾಂಗ್ರೇಸ್‌ನ ಸುಶೀಲಾ ಅವರು 3409 ಮತಗಳನ್ನು ಗಳಿಸಿ ವಿಜೇತರಾಗಿದ್ದಾರೆ.ಇಲ್ಲಿ ಬಿಜೆಪಿಯಉಮಾವತಿ ಅವರಿಗೆ 2,683 ಮತಗಳನ್ನು ಲಭಿಸಿದ್ದು ಗೆಲುವಿನ ಅಂತರ 726 ಮತಗಳಾಗಿವೆ. ಇಲ್ಲಿ 132 ನೋಟಾಚಲಾವಣೆಯಾಗಿವೆ.
ಸಾಮಾನ್ಯ ಮೀಸಲಾತಿ ಇರುವ ಲಾಯಿಲ ಕ್ಷೇತ್ರದಲ್ಲಿ ಬಿಜೆಪಿಯ ಸುಧಾಕರ ಬಿ.ಎಲ್. ಅವರು 2040 ಮತಗಳನ್ನು ಗಳಿಸಿ ವಿಜೇತರಾಗಿದ್ದುಕಾಂಗ್ರೇಸ್‌ನ ವಸಂತ ಸುವರ್ಣಅವರಿಗೆ 1615 ಮತಗಳು ಮಾತ್ರ ಲಭಿಸಿದ್ದು ಗೆಲುವಿನ ಅಂತರ 425 ಮತಗಳಾಗಿವೆ. ಇಲ್ಲಿ 50 ಮತಗಳು ಚಲಾವಣೆಯಾಗಿದೆ.ಜೆಡಿಯುವಿನ ಹರಿಶ್ಚಂದ್ರತಾಮನ್‌ಕಾರ್ ಅವರಿಗೆ41 ಮತಗಳು ಲಭಿಸಿವೆ. ಪಕ್ಷೇತರಅಭ್ಯರ್ಥಿ ಅಶ್ರಫ್‌ಅವರಿಗೆ 160 ಮತಗಳು ಲಭಿಸಿವೆ. ಮಹಿಳಾ ಮೀಸಲಾತಿಇರುವ ನಡದಲ್ಲಿ ಬಿಜೆಪಿಯ ವೇದಾವತಿ ಅವರು 3,236 ಮತಗಳನ್ನು ಪಡೆದು ಪ್ರತಿಸ್ಪರ್ಧಿ ಹೇಮಾವತಿ ಪಿ.ಗೌಡ (2947 ಮತ) ಅವರನ್ನು 284 ಮತಗಳ ಅಂತರದಿಂದ ಸೋಲಿಸಿದ್ದಾರೆ. ಇಲ್ಲಿ 219 ನೋಟಾ ಮತಗಳು ಚಲಾವಣೆಯಾಗಿವೆ.
ಪರಿಶಿಷ್ಟ ಪಂಗಡ ಮೀಸಲಾತಿಇರುವ ಮಿತ್ತಬಾಗಿಲುವಿನಲ್ಲಿ ಕಾಂಗ್ರೇಸ್‌ನ ಜಯರಾಂಆಲಂಗಾರು ಅವರು 2523 ಮತಗಳನ್ನು ಗಳಿಸಿ ಗೆಲುವನ್ನು ಕಂಡಿದ್ದಾರೆ. ಬಿಜೆಪಿಯ ಆನಂದ ನಾಯ್ಕ ಅವರಿಗೆ 2504 ಮತಗಳು ಲಭಿಸಿದ್ದು 19 ಮತಗಳ ಅಂತರದಿಂದ ಸೋತಿದ್ದಾರೆ. ಇಲ್ಲಿ ಸಿಪಿಎಂನ ಚನಿಯಪ್ಪ ಅವರು 115 ಮತಗಳನ್ನು ಮಾತ್ರ ಪಡೆದಿದ್ದಾರೆ.ಇಲ್ಲಿ 109 ನೋಟಾ ಮತಗಳು ಚಲಾವಣೆಯಾಗಿದ್ದು ಫಲಿತಾಂಶವನ್ನು ನಿರ್ಧರಿಸುವಲ್ಲಿ ಮಹತ್ವದ ಮಾತ್ರ ವಹಿಸಿದೆ.
ಹಿಂದುಳಿದ ವರ್ಗ ಎ ಮೀಸಲಾತಿಯ ಉಜಿರೆಯಲ್ಲಿ ಬಿಜೆಪಿಯ ಎಂ.ಶಶಿಧರ್ ಅವರು 2291 ಮತಗಳನ್ನು ಗಳಿಸಿ ವಿಜೇತರಾಗಿದ್ದಾರೆ. ಪ್ರತಿಸ್ಪರ್ಧಿ ಕಾಂಗ್ರೇಸ್‌ನ ಇಬ್ರಾಹಿಂಯು.ಎಚ್.ಅವರು 1948 ಮತಗಳನ್ನು ಗಳಿಸಿ 343 ಮತಗಳಿಂದ ಸೋಲನ್ನು ಕಂಡಿದ್ದಾರೆ.ಪಕ್ಷೇತರ ರವಿಕುಮಾರ್ ಬರಮೇಲು ಅವರು 1920 ಮತಗಳನ್ನು ಗಳಿಸಿ ಪ್ರಬಲ ತ್ರಿಕೋನ ಸ್ಪರ್ಧೆ ನೀಡಿದ್ದಾರ.ಇಲ್ಲಿ 128 ನೋಟಾಚಲಾವಣೆಯಾಗಿವೆ.
ಪರಿಶಿಷ್ಟ್ ಪಂಗಡ ಮಹಿಳಾ ಮೀಸಲಾತಿ ಇರುವ ಮುಂಡಾಜೆ ಕ್ಷೇತ್ರದಲ್ಲಿ ಬಿಜೆಪಿಯ ಲೀಲಾವತಿ ಬಾಲಕೃಷ್ಣ 1327 ಮತಗಳನ್ನು ಗಳಿಸಿ ಪ್ರತಿಸ್ಪರ್ಧಿ ಕಾಂಗ್ರೇಸ್‌ನ ಪದ್ಮಾವತಿ ಪ್ರಭಾಕರ್ ಅವರನ್ನು 46 ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ.ಇಲಿ ್ಲಕಾಂಗ್ರೇಸ್ ಅಭ್ಯರ್ಥಿಗೆ 1331 ಮತಗಳು ಲಭಿಸಿವೆ. ಜನತಾ ದಳದ ಅರುಣಾಕುಮಾರಿ ಅವರು 178 ಮತಗಳನ್ನು ಗಳಿಸಿದ್ದಾರೆ.ಇಲ್ಲಿ 121 ಚಲಾವಣೆಯಾಗಿದ್ದು ಫಲಿತಾಂಶದ ಮೇಲೆ ಪ್ರಭಾವ ಬೀರಿದೆ.
ಸಾಮಾನ್ಯ ಕ್ಷೇತ್ರ ಚಾರ್ಮಾಡಿಯಲ್ಲಿ ಬಿಜೆಪಿಯ ಕೊರಗಪ್ಪಗೌಡ ಅವರು 2314 ಮತಗಳನ್ನು ಗಳಿಸಿ ಕಾಂಗ್ರೇಸ್‌ನ ಯಶೋದರ (1967 ಮತಗಳು) ಅವರನ್ನು 347 ಮತಗಳ ಅಂತರದಿಂದ ಸೋಲಿಸಿದ್ದಾರೆ. ಪಕ್ಷೇತರಅಬ್ದುಲ್‌ರಹೀಮ್ ಅವರಿಗೆ 679 ಮತಗಳು ದೊರೆತರೆ ಎಸ್‌ಡಿಪಿಐಅಭ್ಯರ್ಥಿ ಹೈದರ್ ಅವರಿಗೆ 457 ಮತಗಳು, ಇನ್ನೊಬ್ಬ ಪಕ್ಷೇತರ ಆನಂದ ಮೊಗೇರ 101 ಮತಗಳನ್ನು ಗಳಿಸಿದ್ದಾರೆ. 39 ನೋಟಾ ಚಲಾವಣೆಯಾಗಿವೆ.
ಸಾಮಾನ್ಯಕ್ಷೇತ್ರವಾಗಿರುವ ನೆರಿಯದಲ್ಲಿ ಕಾಂಗ್ರೇಸ್‌ನ ವಿ.ಟಿ.ಸೆಬಾಸ್ಪಿನ್ ಅವರು 2711 ಮತಗಳನ್ನು ಗಳಿಸಿ ಬಿಜೆಪಿಯ ಸುಲೋಚನಾ (1609 ಮತಗಳು) ಅವರನ್ನು 1106 ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ. ಇದುತಾಲೂಕಿನಲ್ಲಿಅತೀ ಹೆಚ್ಚು ಅಂತರದ ಗೆಲುವಾಗಿದೆ. ಸಿಪಿಐಎಂನ ವಸಂತ ನಡಅವರಿಗೆ 584 ಮತಗಳು ಲಭಿಸಿವೆ. ಇಲ್ಲಿ 86 ನೋಟಾ ಮತಗಳು ಚಲಾವಣೆಯಾಗಿವೆ.
ಹಿಂದುಳಿದ ವರ್ಗ ಎ ಮಹಿಳಾ ಮೀಸಲಾತಿ ಇರುವ ಧರ್ಮಸ್ಥಳ ಕ್ಷೇತ್ರದಲ್ಲಿಜಿ.ಪಂ. ಮಾಜಿ ಉಪಧ್ಯಕ್ಷೆ ಧನಲಕ್ಷ್ಮೀಜನಾರ್ದನಅವರು 1769 ಮತಗಳನ್ನು ಗಳಿಸಿ ತಾ.ಪಂ.ಗೆ ಆಯ್ಕೆಯಾಗಿದ್ದಾರೆ. ಅವರುತಮ್ಮ ಪ್ರತಿಸ್ಪರ್ಧಿಕಾಂಗ್ರೇಸ್‌ನ ಸುರೇಖಾಅವರನ್ನು( 1339 ಮತ) 430 ಮತಗಳ ಅಂತರದಿಂದ ಸೋಲಿಸಿದ್ದಾರೆ. ಪಕ್ಷೇತರಅಭ್ಯರ್ಥಿ ಸುನಿತಾ 798 ಮತಗಳನ್ನು ಗಳಿಸಿದ್ದಾರೆ.ಸಿಪಿಎಂಐ ಅಭ್ಯರ್ಥಿ 497 ಮತಗಳನ್ನು ಪಡೆದಿದ್ದಾರೆ.
ಹಿಂದುಳಿದ ವರ್ಗ ಎ ಮೀಸಲಾತಿ ಇರುವ ಕೊಕ್ಕಡದಲ್ಲಿ ಬಿಜೆಪಿಯ ಲಕ್ಷ್ಮೀನಾರಾಯಣ 2945 ಮತಗಳನ್ನು ಗಳಿಸಿ ವಿಜೇತರಾಗಿದ್ದಾರೆ. ಇವರ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೇಸ್‌ನ ದಯಾನಂದ ಅವರಿಗೆ 2267 ಮತಗಳು ಲಭಿಸಿದ್ದು 678 ಮತಗಳ ಅಂತರದಿಂದ ಸೋಲನ್ನುಕಂಡಿದ್ದಾರೆ. ಸಿಪಿಐಎಂನ ಮಹಮ್ಮದ್‌ಅನಸ್ 1037 ಮತಗಳನ್ನು ಗಳಿಸಿದ್ದಾರೆ.ಇಲ್ಲಿ 161 ನೋಟಾ ಮತಗಳು ಚಲಾವಣೆಯಾಗಿವೆ.
ಸಮಾನ್ಯ ಮಹಿಳಾ ಮೀಸಲಾತಿ ಇರುವ ಕಳೆಂಜ ಕ್ಷೇತ್ರದಲ್ಲಿ ಬಿಜೆಪಿಯ ಸುಶೀಲಾ ವಸಂತಗೌಡ ಅವರು 1644 ಮತಗಳನ್ನು ಗಳಿಸಿ ವಿಜೇತರಾಗಿದ್ದಾರೆ. ಪ್ರತಿಸ್ಪರ್ಧಿ ಕಾಂಗ್ರೇಸ್‌ನ ಯಶೋದಾ ಅವರಿಗೆ 1512 ಮತಗಳು ಲಭಿಸಿದ್ದು 132 ಮತಗಳ ಅಂತರದಿಂದ ಸೋಲನ್ನುಕಂಡರು.ಸಿಪಿಐಎಂನ ಜಯಂತಿ ಅವರಿಗೆ 645 ಮತಗಳು ಲಭಿಸಿವೆ. ಇಲ್ಲಿ 101 ನೋಟಾಚಲಾವಣೆಯಾಗಿವೆ.
ಅನಸೂಚಿತ ಜಾತಿ ಮಹಿಳಾ ಮೀಸಲಾತಿ ಇರುವ ಅರಸಿನಮಕ್ಕಿಯಲ್ಲಿ ಕಾಂಗ್ರೇಸ್‌ನ ದಿವ್ಯಜ್ಯೋತಿಅವರು 2143 ಮತಗಳನ್ನು ಗಳಿಸಿ ವಿಜೇತರಾಗಿದ್ದಾರೆ. ಬಿಜೆಪಿಯ ಬೇಬಿ ರಾಣ್ಯಅವರಿಗೆ 2062 ಮತಗಳು ಲಭಿಸಿವೆ. ಸಿಪಿಐಎಂನ ಮಮತಾ ಅವರಿಗೆ 293 ಮತಗಳು ಲಭಿಸಿವೆ. 118 ನೋಟಾ ಮತಗಳು ಚಲಾವಣೆಯಾಗಿವೆ.
ಮಹಿಳಾ ಮೀಸಲಾತಿಯ ಉರುವಾಲು ವಿನಲ್ಲಿ ಬಿಜೆಪಿಯ ಅಮಿತಾ ಕುಶಾಲಪ್ಪಗೌಡಅವರು 2210 ಮತಗಳನ್ನು ಗಳಿಸಿ ಕಾಂಗ್ರೇಸ್‌ನ ಹೇಮಲತಾ ನಾರಾಯಣಗೌಡ ಅವರನು 352 ಮತಗಳ ಅಂತರದಿಂದ ಸೋಲಿಸಿದ್ದಾರೆ. ಹೇಮಲತಾ ಅವರಿಗೆ 1853 ಮತಗಳು ಲಭಿಸಿವೆ. ಇಲ್ಲಿ 85 ನೋಟಾ ಮತಗಳು ಚಲಾವಣೆಯಾಗಿವೆ. ಹಿಂದುಳಿದ ವರ್ಗ ಎ ಮೀಸಲಾತಿ ಇರುವ ಇಳಂತಿಲದಲ್ಲಿ ಬಿಜೆಪಿಯ ಕೃಷ್ಣಯ್ಯ ಅವರು 3446 ಮತಗಳನ್ನು ಗಳಿಸಿ ಕಾಂಗ್ರೇಸ್‌ನ ಮನೋಹರಕುಮಾರ್ 2858 ಮತಗಳನ್ನು ಗಳಿಸಿ 588 ಮತಗಳ ಅಂತರದಿಂದ ಸೋಲನ್ನುಕಂಡಿದ್ದಾರೆ.ಇಲ್ಲಿ 144 ನೋಟಾಚಲಾವಣೆಯಾಗಿದೆ.
ಮಹಿಳಾ ಮೀಸಲಾತಿಯ ತಣ್ಣೀರುಪಂತದಲ್ಲಿ ಕಾಂಗ್ರೇಸ್‌ನ ಕೇಶವ ಟಿ. 2155 ಮತಗಳನ್ನುಗಳಿಸಿ ವಿಜೇತರಾಗಿದ್ದಾರೆ. ಪ್ರತಿಸ್ಪರ್ಧಿ ತಾ.ಪಂ. ಅಧ್ಯಕ್ಷೆ ಜಯಂತಿ ಪಾಲೇದು ಅವರಿಗೆ ಕೇವಲ 1695 ಮತಗಳು ಮಾತ್ರ ಲಭಿಸಿದ್ದು 640 ಮತಗಳ ಅಂತರದಿಂದ ಸೋಲನ್ನುಕಂಡರು. ಎಸ್‌ಡಿಪಿಐಯ ಮರಿಯಮ್ಮಅವರಿಗೆ 630 ಮತಗಳು ಲಭಿಸಿವೆ. ಇಲ್ಲಿ 53 ನೋಟಾಗಳು ಚಲಾವಣೆಯಾಗಿವೆ.
ಮಹಿಳಾ ಮೀಸಲಾತಿಯ ಬಾರ್ಯದಲ್ಲಿ ಕಾಂಗ್ರೇಸ್‌ನ ಸುಜಾತಾ ನವೀನ ರೈಅವರು 2990 ಮತಗಳನ್ನು ಗಳಿಸಿ ವಿಜೇತರಾಗಿದ್ದಾರೆ. ಪ್ರತಿಸ್ಪರ್ಧಿ ಹೇಮಾವತಿ ಅವರಿಗೆ 2028 ಮತಗಳು ಲಭಿಸಿದ್ದು 962 ಮತಗಳ ಅಂತರದಿಂದ ಸೋಲನ್ನುಕಂಡಿದ್ದಾರೆ.ಇಲ್ಲಿ 91 ನೋಟಾ ಮತಗಳು ಚಲಾವಣೆಯಾಗಿವೆ.
ಸಾಮಾನ್ಯಕ್ಷೇತ್ರವಾಗಿರುವ ಮಾಲಾಡಿಯಲ್ಲಿ ಬಿಜೆಪಿಯ ಜೊಯೆಲ್ ಮೆಂಡೊನ್ಸಾ ಅವರು 2066 ಮತಗಳನ್ನು ಗಳಿಸಿ ಕಾಂಗ್ರೇಸ್‌ನ ಪದ್ಮನಾಭ ಸಾಲಿಯಾನ್1610 ಮತ ಸಿಕ್ಕಿದ್ದು ಅವರು 1456 ಮತಗಳ ಅಂತರದಿಂದ ಸೋಲಿಸಿದ್ದಾರೆ. ಎಸ್‌ಡಿಪಿಐಯ ಶಬೀರ್‌ಅವರಿಗೆ 78 ಮತಗಳು ಲಭಿಸಿದ್ದು 44 ನೋಟಾ ಚಲಾವಣೆಯಾಗಿವೆ.
ಹಿಂದುಳಿದ ವರ್ಗ ಎ ಮಹಿಳಾ ಮೀಸಲಾತಿಯ ಮಡಂತ್ಯಾರುವಿನಲ್ಲಿ ಬಿಜೆಪಿಯ ವಸಂತಿ ಲಕ್ಷ್ಮಣಕುಲಾಲ್ 3156 ಮತಗಳನ್ನುಗಳಿಸಿ ಗೆಲುವನ್ನು ಕಂಡಿದ್ದಾರೆ. ಪ್ರತಿಸ್ಪರ್ಧಿ ಕಾಂಗ್ರೇಸ್‌ನ ಬೇಬಿ ವಸಂತ ಪೂಜಾರಿ ಅವರಿಗೆ 2672 ಮತಗಳು ಲಭಿಸಿದ್ದು 484 ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದಾರೆ.ಇಲ್ಲಿ 107 ನೋಟಾ ಮತಗಳು ಬಿದ್ದಿವೆ.
ಸಾಮಾನ್ಯಕ್ಷೇತ್ರ ಕುವೆಟ್ಟುವಿನಲ್ಲಿ ಕಾಂಗ್ರೇಸ್‌ನ ಗೋಪಿನಾಥ್ ನಾಯಕ್ 2323 ಮತಗಳಿಂದ ಪ್ರತಿಸ್ಪರ್ಧಿ ಬಿಜೆಪಿಯ ಪ್ರಭಾಕರ ಉಪ್ಪಡ್ಕ ಅವರನ್ನು 39 ಮತಗಳ ಅಂತರದಿಂದ ಪರಾಜಿತಗೊಳಿಸಿದ್ದಾರೆ ಇಲ್ಲಿ ಉಪ್ಪಡ್ಕ ಅವರಿಗೆ 2284 ಮತಗಳು ಲಭಿಸಿವೆ.ಎಸ್‌ಡಿಪಿಐನ ಅಬ್ದುಲ್‌ರಜಾಕ್ ಅವರಿಗೆ 879 ಮತಗಳು ಲಭಿಸಿವೆ. 63 ನೋಟಾ ಚಲಾವಣೆಯಾಗಿವೆ. ಹಿಂದುಳಿದ ವರ್ಗ ಬಿ ಮೀಸಲಾತಿಯ ಕಳಿಯದಲ್ಲಿ ಕಾಂಗ್ರೇಸ್‌ನ ಪ್ರವೀಣ್‌ಗೌಡ ಅವರು 2812 ಮತಗಳನ್ನು ಗಳಸಿ ಪ್ರತಿಸ್ಪರ್ಧಿ ಬಿಜೆಪಿಯ ದಾಮೋದರಗೌಡ ಅವರಿಗೆ 2521 ಮತಗಳು ಲಭಿಸಿದ್ದು ಅವರು 291 ಮತಗಳ ಅಂತರದಿಂದ ಸೋತಿದ್ದಾರೆ. ಇಲ್ಲಿ 138 ನೋಟಾಚಲಾವಣೆಯಾಗಿವೆ.