ಮಂಗಳೂರು : ‘ಅರಿಯಿರಿ ಮನುಕುಲದ ಪ್ರವಾದಿಯನ್ನು’ 26ರಂದು ಅಭಿಯಾನದ ಸಮಾರೋಪ
ಮಂಗಳೂರು, ಫೆ. 23: ಯುನಿವೆಫ್ ಕರ್ನಾಟಕ (ಯುನಿವರ್ಸಲ್ ವೆಲ್‌ಫೇರ್ ಫೋರಂ) ವತಿಯಿಂದ ‘ಅರಿಯಿರಿ ಮನುಕುಲದ ಪ್ರವಾದಿಯನ್ನು’ ಪ್ರವಾದಿ ಮುಹಮ್ಮದ್ (ಸ)ರ ಸಂದೇಶ ಪ್ರಚಾರ ಅಭಿಯಾನದ ಅಂಗವಾಗಿ ಕಳೆದ ಜನವರಿ 15ರಿಂದ ಆರಂಭಗೊಂಡಿರುವ ಜನಜಾಗೃತಿ ಕಾರ್ಯಕ್ರಮವು ಫೆಬ್ರವರಿ 26ರಂದು ನಗರದ ಪುರಭವನದಲ್ಲಿ ಸಮಾರೋಪಗೊಳ್ಳಲಿದೆ.ಜನವರಿ 15 ರಂದು ನಗರದ ಜಮೀಯತುಲ್ ಫಲಾಹ್‌ನಲ್ಲಿ ಉದ್ಘಾಟನೆಗೊಂಡ ಈ ಅಭಿಯಾನದ ಸಾರ್ವಜನಿಕ ಕಾರ್ಯಕ್ರಮಗಳು ತೊಕ್ಕೊಟ್ಟು, ದೇರಳಕಟ್ಟೆ, ಉಳ್ಳಾಲ, ಮಾರಿಪಳ್ಳ, ಕೃಷ್ಣಾಪುರ, ಕುದ್ರೋಳಿ ಸಹಿತ ಐದು ವಿಧಾನಸಭಾ ಕ್ಷೇತ್ರಗಳ 15 ಕೇಂದ್ರಗಳಲ್ಲಿ ಆಯೋಜಿಸಲಾಗಿತ್ತು. ಫೆ.26ರಂದು ಸಂಜೆ 4:30ರಿಂದ 6:30ರ ವರೆಗೆ ನಡೆಯುವ ಪ್ರಥಮ ಅಧಿವೇಶನದಲ್ಲಿ ‘ಸಮುದಾಯದ ಸವಾಲುಗಳು ಮತ್ತು ಪರಿಹಾರ’ ವಿಷಯದಲ್ಲಿ ಚರ್ಚೆ ನಡೆಯಲಿದೆ.
ಮುಸ್ಲಿಮ್ ಸೆಂಟ್ರಲ್ ಕಮಿಟಿ ದ.ಕ. ಮತ್ತು ಉಡುಪಿ ಇದರ ಅಧ್ಯಕ್ಷ ಕೆ.ಎಸ್. ಮುಹಮ್ಮದ್ ಮಸೂದ್, ಕೆರಿಯರ್ ಗೈಡೆನ್ಸ್ ಮತ್ತು ಇನ್ಫಾರ್ಮೇಶನ್ ಸೆಂಟರ್‌ನ ಅಧ್ಯಕ್ಷ ಉಮರ್ ಯು. ಎಚ್., ಪಿಎಫ್‌ಐ ಜಿಲ್ಲಾಧ್ಯಕ್ಷ ಮುಹಮ್ಮದ್ ಹನೀಫ್, ಮುಸ್ಲಿಮ್ ಲೇಖಕರ ಸಂಘದ ಉಪಾಧ್ಯಕ್ಷ ಬಿ.ಎ. ಮುಹಮ್ಮದ್ ಅಲಿ, ಮುಸ್ಲಿಮ್ ಸಂಘಟನೆಗಳ ಐಕ್ಯತಾ ವೇದಿಕೆಯ ಅಧ್ಯಕ್ಷ ಮುಸ್ತಫಾ ಕೆಂಪಿ, ದ.ಕ. ಜಿಲ್ಲಾ ಮುಸ್ಲಿಮ್ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಅಶ್ರಫ್ ಕೆ., ಜಮೀಯತುಲ್ ಫಲಾಹ್ ಜಿಲ್ಲಾಧ್ಯಕ್ಷ ಅಬ್ದುಲ್ ಲತೀಫ್, ಮಂಗಳೂರು ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಅಲಿ ಹಸನ್, ಟಿ.ಸಿ. ವೆಲ್‌ಫೇರ್ ಫೌಂಡೇಶನ್‌ನ ಅಧ್ಯಕ್ಷ ಅಬ್ದುಸ್ಸಲಾಮ್, ಯುನಿವೆಫ್‌ನ ಅಧ್ಯಕ್ಷ ರಫೀವುದ್ದೀನ್ ಕುದ್ರೋಳಿ ಭಾಗವಹಿಸಲಿದ್ದಾರೆ.ಸಂಜೆ 7 ಗಂಟೆಯಿಂದ ನಡೆಯುವ ದ್ವಿತೀಯ ಅಧಿವೇಶನದಲ್ಲಿ ‘ಪ್ರಸಕ್ತ ಸವಾಲುಗಳಿಗೆ ಪ್ರವಾದಿಗಳ ಪರಿಹಾರ’ ವಿಷಯದಲ್ಲಿ ವಿಚಾರ ವಿನಿಮಯ ನಡೆಯಲಿದೆ. ಸಕಲೇಶಪುರದ ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್, ಪುತ್ತೂರಿನ ಸುದಾನ ದೇವಾಲಯ ಧರ್ಮಗುರು ಫಾ. ವಿಜಯ್ ಹಾರ್ವಿನ್, ಜೆಸಿಐನ ರಾಷ್ಟ್ರೀಯ ತರಬೇತುದಾರ ಮಂಜುನಾಥ್ ಡಿ., ಯುನಿವೆಫ್‌ನ ಅಧ್ಯಕ್ಷ ರಫೀವುದ್ದೀನ್ ಕುದ್ರೋಳಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.