ಉಳ್ಳಾಲ: ಕಾರ್ ಡಿಕ್ಕಿ ಹೊಡೆದು ರಿಕ್ಷಾ ಚಾಲಕ ಮೃತ್ಯು
Update: 2016-02-23 19:20 IST
ಉಳ್ಳಾಲ: ಪಾದಚಾರಿ ರಿಕ್ಷಾ ಚಾಲಕರೊಬ್ಬರಿಗೆ ಕಾರ್ ಡಿಕ್ಕಿ ಹೊಡೆದ ಪರಿಣಾಮ ಅವರು ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟ ಘಟನೆ ಸೋಮವಾರ ತಡರಾತ್ರಿ ನಡೆದಿದೆ. ಮೃತ ವ್ಯಕ್ತಿಯನ್ನು ಕೋಟೆಕಾರ್ ನಿವಾಸಿ ರಾಧಾಕೃಷ್ಣ(45) ಎಂದು ಹೆಸರಿಸಲಾಗಿದೆ. ಅವರು ನಿನ್ನೆ ರಾತ್ರಿ ಕೋಟೆಕಾರ್ ನೂರುಮಹಲ್ ಹಾಲ್ ಬಳಿ ರಸ್ತೆ ದಾಟುತ್ತಿದ್ದ ಸಂದರ್ಭ ಅತೀ ವೇಗದಿಂದ ಬಂದ ಕಾರ್ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ರಸ್ತೆಗೆಸೆಯಲ್ಪಟ್ಟ ರಾಧಾಕೃಷ್ಣ ಅವರು ಸ್ಥಳದಲ್ಲೇ ಮೃತರಾಗಿದ್ದಾರೆ. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.