ಮಂಗಳೂರು : ತಾ.ಪಂ.ನ 3 ಕ್ಷೇತ್ರಗಳಲ್ಲಿ ಎಸ್‌ಡಿಪಿಐ ಪ್ರಬಲ ಸ್ಪರ್ಧೆ!

Update: 2016-02-23 14:33 GMT

ಮಂಗಳೂರು, ಫೆ. 23: ದ.ಕ. ಜಿಲ್ಲೆಯಲ್ಲಿ 18 ತಾಲೂಕು ಪಂಚಾಯತ್ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಎಸ್‌ಡಿಪಿಐ ಮಂಗಳೂರಿನ ಎರಡು ಹಾಗೂ ಬಂಟ್ವಾಳದ ಎರಡು ಕ್ಷೇತ್ರಗಳಲ್ಲಿ ಪ್ರಬಲ ಸ್ಪಧೆಯನ್ನು ಒಡ್ಡಿದೆ.
ಮಂಗಳೂರು ತಾಲೂಕಿನ ಬಜಪೆ ಕ್ಷೇತ್ರದಲ್ಲಿ ವಿಜಯಿ ಅಭ್ಯರ್ಥಿ ಬಿಜೆಪಿಯ ಉಷಾ ಸುವರ್ಣ 1777 ಮತಗಳನ್ನು ಪಡೆದಿದ್ದರೆ, ಎಸ್‌ಡಿಪಿಐಯ ಶಹನಾಝ್ ಮನ್ನೂರುರು 1497 ಮತಗಳನ್ನು ಪಡೆದಿದ್ದಾರೆ. ಇಲ್ಲಿ ಜಯದ ಮತಗಳ ಅಂತರ 280.
ಮಂಗಳೂರು ತಾಲೂಕಿನ ಪಾವೂರು ಕ್ಷೇತ್ರದಲ್ಲಿ ವಿಜಯಿ ಅಭ್ಯರ್ಥಿ ಮುಹಮ್ಮದ್ ಮೋನು 1377 ಮತಗಳನ್ನು, ಎಸ್‌ಡಿಪಿಐಯ ಮುಹಮ್ಮದ್ ಮುಸ್ತಫಾ ಇನೋಳಿ 741 ಮತಗಳನ್ನು ಪಡೆದು ಪ್ರಬಲ ಸ್ಪರ್ಧೆಯೊಡ್ಡಿದ್ದಾರೆ. ಈ ಕ್ಷೇತ್ರದ ಜಯದ ಮತಗಳ ಅಂತರ 636.
ಬಂಟ್ವಾಳ ತಾಲೂಕಿನ ಪುದು ಕ್ಷೇತ್ರದಲ್ಲಿ ಕಾಂಗ್ರೆಸ್‌ನ ವಿಜಯಿ ಅಭ್ಯರ್ಥಿ ಪದ್ಮಶ್ರೀ ದುರ್ಗೇಶ್ ಶೆಟ್ಟಿ 2860 ಮತಗಳನ್ನು, ಎಸ್‌ಡಿಪಿಐಯ ಫೌಝಿಯಾ ನೌಶಾದ್ 2144 ಮತಗಳನ್ನು ಪಡಿದ್ದಾರೆ. ಇಲ್ಲಿ ಜಯದ ಮತಗಳ ಅಂತರ 716.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News