ಭಾರತೀಯ ವಾಯು ಪಡೆ ಪಾತ್ರ ಶ್ಲಾಘಿಸಿದ ಬಾಂಗ್ಲಾ ಪ್ರಧಾನಿ
Update: 2016-02-23 23:54 IST
ಢಾಕಾ, ಫೆ. 23: 1971ರ ಬಾಂಗ್ಲಾದೇಶ ವಿಮೋಚನಾ ಯುದ್ಧದಲ್ಲಿ ಭಾರತೀಯ ವಾಯುಪಡೆ ವಹಿಸಿದ ಪಾತ್ರವನ್ನು ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಇಂದು ಶ್ಲಾಘಿಸಿದ್ದಾರೆ.
ಭಾರತೀಯ ವಾಯು ಪಡೆಯಿಂದಾಗಿ ಪಾಕಿಸ್ತಾನಿ ಸೈನಿಕರ ಶರಣಾಗತಿ ಪ್ರಕ್ರಿಯೆ ಬಿರುಸು ಪಡೆದುಕೊಂಡಿತು ಎಂದರು.
ಬಾಂಗ್ಲಾದೇಶ ಪ್ರಧಾನಿಯನ್ನು ಇಂದು ಇಲ್ಲಿನ ಅವರ ಕಚೇರಿಯಲ್ಲಿ ಭಾರತದ ವಾಯು ಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಶಲ್ ಅನೂಪ್ ರಾಹ ಭೇಟಿಯಾದಾಗ ಹಸೀನಾ ಹಳೆಯ ನೆನಪುಗಳನ್ನು ಸ್ಮರಿಸಿಕೊಂಡರು.