ಪಿಲಿಕುಳ ನಿಸರ್ಗಧಾಮ: ತಡೆಗೋಡೆ ನಿರ್ಮಾಣಕ್ಕೆ ಎದುರುಪದವು ಗ್ರಾಮಸ್ಥರಿಂದ ತಡೆ
Update: 2016-02-25 11:03 IST
ಮಂಗಳೂರು, ಫೆ.25: ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದಲ್ಲಿ ಎದುರುಪದವಿಗೆ ತೆರಳುವ ರಸ್ತೆಗೆ ತಡೆಗೋಡೆ ನಿರ್ಮಿಸಲು ಮುಂದಾದ ದ.ಕ. ಜಿಲ್ಲಾಡಳಿತದ ವಿರುದ್ಧ ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಘಟನೆ ಗುರುವಾರ ಬೆಳಗ್ಗೆ ನಡೆದಿದೆ.
ನಿಸರ್ಗಧಾಮದಲ್ಲಿರುವ ವಿಜ್ಞಾನ ಪಾರ್ಕ್‌ಗೆ ಹೊಂದಿಕೊಂಡು ರಸ್ತೆಗೆ ತಡೆಗೋಡೆ ನಿರ್ಮಾಣಕ್ಕೆ ಜಿಲ್ಲಾಡಳಿತ ಇಂದು ಬೆಳಗ್ಗೆ ಮುಂದಾಗಿತ್ತು. ಇದಕ್ಕಾಗಿ ಸುಮಾರು 150 ಪೊಲೀಸ್ ಸಿಬ್ಬಂದಿಯ ಸಹಕಾರದೊಂದಿಗೆ ಕಾಮಗಾರಿಯನ್ನು ಆರಂಭಿಸಿತ್ತು. ಆದರೆ ಈ ವೇಳೆ ಜಮಾಯಿಸಿದ ಸುಮಾರು 300ರಷ್ಟು ಎದುರುಪದವು ಗ್ರಾಮಸ್ಥರು ಸ್ಥಳದಲ್ಲಿ ಪ್ರತಿಭಟನೆ ನಡೆಸಿದರು. ಕಾಮಗಾರಿಯನ್ನು ಅರ್ಧದಲ್ಲಿ ತಡೆಹಿಡಿದರು.