ಸೀತಾಂಗೋಳಿ: ಬಸ್ ಢಿಕ್ಕಿ; ಬೈಕ್ ಸವಾರ ಮೃತ್ಯು
Update: 2016-02-25 14:27 IST
ಕಾಸರಗೋಡು, ಫೆ.25: ಖಾಸಗಿ ಬಸ್ಸೊಂದು ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಯುವಕ ಮೃತಪಟ್ಟ ಘಟನೆ ಸೀತಾಂಗೋಳಿ ಅಂಗಡಿಮೊಗರು ನಾಟೇಕಲ್ಲು ರಸ್ತೆಯಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ.
ಪೆರ್ಲ ಶೇಣಿ ನಡುಬೈಲ್ನ ಸಂಪತ್(28) ಮೃತಪಟ್ಟವರಾಗಿದ್ದಾರೆ. ಇವರು ಸೀತಾಂಗೋಳಿ ಕಡೆಗೆ ಬರುತ್ತಿದ್ದಾಗ ಕುಂಬಳೆಯಿಂದ ಪೆರ್ಲಕ್ಕೆ ತೆರಳುತ್ತಿದ್ದ ಖಾಸಗಿ ಬಸ್ಸು ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಈ ವೇಳೆ ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದ ಸಂಪತ್‌ರನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟರೆನ್ನಲಾಗಿದೆ.
ಸಂಪತ್ ಎರ್ನಾಕುಲಂನಲ್ಲಿ ವೆಲ್ಡರ್ ಆಗಿ ದುಡಿಯುತ್ತಿದ್ದರು.
ಅಪಘಾತದ ಬಗ್ಗೆ ಕುಂಬಳೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.