ಬಿಎನ್‌ವೈಎಸ್ ಫಲಿತಾಂಶ : ಆಳ್ವಾಸ್ ಕಾಲೇಜ್‌ಗೆ ಏಳು ರ್ಯಾಂಕ್
ಮೂಡುಬಿದಿರೆ: ರಾಜೀವ್ ಗಾಂಧಿ ಆರೋಗ್ಯ ವಿ.ವಿಯಡಿಯಲ್ಲಿ 2014ರ ಜೂನ್ ತಿಂಗಳಲ್ಲಿ ನಡೆದ ಅಂತಿಮ ವರ್ಷದ ಬಿಎನ್‌ವೈಎಸ್ ಪರೀಕ್ಷೆಯಲ್ಲಿ ಆಳ್ವಾಸ್ ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ವಿಜ್ಞಾನ ಕಾಲೇಜು ಮೊದಲ ರ್ಯಾಂಕ್ ಸಹಿತ 7 ರ್ಯಾಂಕ್‌ಗಳನ್ನು ಪಡೆದುಕೊಂಡಿದೆ.
ಆಳ್ವಾಸ್ ಬಿಎನ್‌ವೈಎಸ್ ವಿದ್ಯಾರ್ಥಿನಿ ಪೂಜಾ.ಜಿ ಮೊದಲ ರ್ಯಾಂಕ್ ಪಡೆದಿದ್ದಾರೆ. ಸುಶ್ಮಿತಾ ವಿ.ಎಲ್ 4ನೇ ರ್ಯಾಂಕ್, ಎಲಿಜಬೆತ್ ಒಯ್ನಿಂ 5ರ್ಯಾಂಕ್, ಗ್ಯಾಲಸಿ ಖೋಡ್ರಮ್ ಹಾಗೂ ಲಾವಣ್ಯ ಉಪಾಧ್ಯಾಯ 7 ರ್ಯಾಂಕ್, ದಿಶಾ ಜಿ. ಪುತ್ರನ್, ಯುಮ್ನಂ ಸೂಸನ್ ದೇವಿ 8 ರ್ಯಾಂಕ್ ಪಡೆದುಕೊಳ್ಳುವ ಮೂಲಕ ಒಟ್ಟು ಹತ್ತು ರ್ಯಾಂಕ್‌ಗಳಲ್ಲಿ 7 ರ್ಯಾಂಕ್‌ಗಳು ಆಳ್ವಾಸ್ ಪಾಲಾಗಿರುವುದು ಗಮನಾರ್ಹ ಸಾಧನೆಯಾಗಿದೆ.
ಸಾಧನೆಯಿಂದ ತೃಪ್ತಿ:
ಬಿಎನ್‌ವೈಎಸ್‌ನಲ್ಲಿ ಮೊದಲ ರ್ಯಾಂಕ್ ಸಹಿತ 7 ರ್ಯಾಂಕ್ ಪಡೆದಿರುವುದು ಅಪ್ರತಿಮ ಸಾಧನೆ. ಈ ಬಾರಿಯ ರಾಜೀವ್ ಗಾಂಧಿ ವಿ.ವಿ ಕ್ರೀಡಾಕೂಟದಲ್ಲಿಯೂ ನಮ್ಮ ಸಂಸ್ಥೆ ಚಾಂಪಿಯನ್ ಆಗಿದೆ. ಮಂಗಳೂರು ವಿ.ವಿ, ವಿಶ್ವೇಶ್ವರಯ್ಯ ತಾಂತ್ರಿಕ ವಿ.ವಿ.ಗಳಲ್ಲೂ ಶೈಕ್ಷಣಿಕ, ಕ್ರೀಡೆ, ಸಾಂಸ್ಕೃತಿಕ ಸಹಿತ ವಿವಿಧ ಮಗ್ಗುಲಲ್ಲಿ ಸಾಧನೆ ತೃಪ್ತಿ ತಂದಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ತಿಳಿಸಿದ್ದಾರೆ.
ಸುಶ್ಮಿತಾ
ಎಲಿಜಬೆತ್
ಗ್ಯಾಲಸಿ
ಲಾವಣ್ಯ
ದಿಶಾ
ಯುಮ್ನಾಂ