ಮಂಗಳೂರು : ಬೋಟಿಗೆ ಕಟ್ಟುವ ಹಗ್ಗ ಎದೆಗೆ ಬಡಿದು ವ್ಯಕ್ತಿ ಸಾವು
Update: 2016-02-25 22:07 IST
ಮಂಗಳೂರು,ಫೆ.25: ನಗರದ ಮೀನುಗಾರಿಕ ಧಕ್ಕೆಯಲ್ಲಿ ಬೋಟು ಕಟ್ಟುವ ಸಂದರ್ಭದಲ್ಲಿ ಬೋಟಿಗೆ ಕಟ್ಟುವ ಹಗ್ಗ ಎದೆಗೆ ಬಡಿದು ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಮೃತ ವ್ಯಕ್ತಿಯನ್ನು ಆಂಧ್ರಪ್ರದೇಶ ಮೂಲದ ಹರೀಶ್ (30) ಎಂದು ಗುರುತಿಸಲಾಗಿದೆ. ಘಟನೆ ನಡೆದ ತಕ್ಷಣವೆ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.