ಸವಣೂರು: ಹಲ್ಲೆ ಪ್ರಕರಣ ; ಇತ್ತಂಡಗಳ 23 ಮಂದಿಯ ವಿರುದ್ದ ಪ್ರಕರಣ ದಾಖಲು-ಇಬ್ಬರ ಬಂಧನ
ಕಡಬ, ಫೆ.25.ಕಡಬ ಠಾಣಾ ವ್ಯಾಪ್ತಿಯ ಸವಣೂರು ಎಂಬಲ್ಲಿ ದ್ವಿಚಕ್ರವಾಹನದಲ್ಲಿ ತೆರಳುತ್ತಿದ್ದಾಗ ತಾಗಿತ್ತೆನ್ನಾಲಾಗಿ ಉಂಟಾದ ಘರ್ಷಣೆಯಲ್ಲಿ ಇತ್ತಂಡದ 23 ಮಂದಿಯ ವಿರುದ್ದ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳೆದ ಮಂಗಳವಾರ ಗಿರಿಧರ ಹಾಗೂ ಜಯರಾಮ ಎಂಬುವವರು ಬೈಕಿನಲ್ಲಿ ತೆರಳುತ್ತಿದ್ದಾಗ ವ್ಯಕ್ತಿಯೋರ್ವರಿಗೆ ಬೈಕ್ ತಾಗಿದೆ ಎಂಬ ವಿಚಾರದಲ್ಲಿ ಘರ್ಷಣೆ ಉಂಟಾಗಿತ್ತು. ಈ ಬಗ್ಗೆ ಸಮೀರ್ ಅರ್ತಿಕೆರೆ ಎಂಬವರ ದೂರಿನ ಮೇರೆಗೆ ಮಾಡವು ನಿವಾಸಿ ಗಿರಿಧರ ಗೌಡ, ಜಯಪ್ರಕಾಶ್, ರಾಕೇಶ್ ರೈ ಕೆಡೆಂಜಿ, ಪ್ರಕಾಶ್ ಅರಳ್ತಡಿ, ಸುರೇಶ್ ಸೂಡಿಮಜಲು, ಪ್ರಶಾಂತ್, ಪ್ರಜ್ವಲ್, ಮೋಹನ್, ಉದಯ, ನವೀನ, ಗಂಗಾಧರ, ಹರೀಶ್, ಜಿತೇಶ್ ಹಾಗೂ ಗಿರಿಧರರವರ ದೂರಿನ ಮೇರೆಗೆ ಸಮೀರ್ ಅರ್ತಿಕೆರೆ, ಉಸ್ಮಾನ್ ಅರ್ತಿಕೆರೆ, ಬಶೀರ್ ಕಾಯರ್ಗ,ಇಕ್ಬಾಲ್, ಬಶೀರ್ ಕೆನರಾ, ಆಸೀಫ್, ಲತೀಫ್, ಶಮೀರ್ ಕುಡ್ತಲ, ರಜಾಕ್, ಫಯಾಜ್ ಎಂಬವರ ವಿರುದ್ದ ಪ್ರಕರಣ ದಾಖಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಜಯಪ್ರಕಾಶ್ ಹಾಗೂ ಗಿರಿಧರರವರನ್ನು ಬಂಧಿಸಿದ ಪೋಲಿಸರು ಫೆ.25ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.