×
Ad

ನೌಕಾದಳ ಭರ್ತಿಗೆ ರ್ಯಾಲಿ

Update: 2016-02-25 23:45 IST

ಮಂಗಳೂರು, ಫೆ.25: ಭಾರತೀಯ ನೌಕಾದಳದ ಐಎನ್‌ಎಸ್ ಕದಂಬ, ಕಾರವಾರ ಮಾರ್ಚ್ 10ರಂದು ರಾಜ್ಯದಿಂದ ಪುರುಷ ಅಭ್ಯರ್ಥಿಗಳ ನೇಮಕಾತಿ ರ್ಯಾಲಿ ಆಯೋಜಿಸಿದೆ. ಅಭ್ಯರ್ಥಿಗಳು 01-8-1995 ರಿಂದ 31-7-1999ರ ನಡುವೆ ಜನಿಸಿದವರಾಗಿರಬೇಕು, ದ್ವಿತೀಯ ಪಿಯುಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಗಣಿತ ಮತ್ತು ಭೌತಶಾಸ್ತ್ರಗಳೊಂದಿಗೆ ಕನಿಷ್ಠ ರಸಾಯನ ಶಾಸ್ತ್ರ ಅಥವಾ ಜೀವಶಾಸ್ತ್ರ ಅಥವ ಕಂಪ್ಯೂಟರ್ ವಿಜ್ಞಾನದೊಂದಿಗೆ ಉತ್ತೀರ್ಣರಾಗಿರಬೇಕು. ಇತ್ತೀಚಿನ 12 ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳೊಂದಿಗೆ ಬೆಳಗ್ಗೆ 6 ಗಂಟೆಗೆ ಕಾರವಾರದ ಅರಗಾ ದಲ್ಲಿರುವ ನೌಕಾದಳ ಮೇನ್ ಗೇಟ್‌ನಲ್ಲಿ ಹಾಜರಾಗಬೇಕು. ಹೆಚ್ಚಿನ ಮಾಹಿತಿಗಾಗಿ ದೂ.ಸಂ.: 0824-2450933 ಅಥವಾ http://www.nausena-bharti.nic.in/ ಸಂಪರ್ಕಿಸುವಂತೆ ಜಂಟಿ ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಉರ್ವಸ್ಟೋರ್ಸ್‌ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News