ಮಾರ್ಚ್ 23ರಂದು ‘ಬೆಳದಿಂಗಳ ಸಾಹಿತ್ಯ ಸಮ್ಮೇಳನ’
Update: 2016-02-25 23:58 IST
ಮಂಗಳೂರು, ಫೆ.25: ಅಖಿಲ ಕರ್ನಾಟಕ ‘ಬೆಳದಿಂಗಳ ಸಾಹಿತ್ಯ ಸಮ್ಮೇಳನ’ ಸಮಿತಿ ವತಿಯಿಂದ ಏಳನೆ ಅಖಿಲ ಕರ್ನಾಟಕ ‘ಬೆಳದಿಂಗಳ ಸಾಹಿತ್ಯ ಸಮ್ಮೇಳನ’ ಮಾ.23ರಂದು ಕಾರ್ಕಳ ಸಾಣೂರು ಪ್ರಕೃತಿ ಗ್ರೂಪ್ ಆ್ ಇನ್‌ಸ್ಟಿಟ್ಯೂಶನ್‌ನಲ್ಲಿ ನಡೆಯಲಿದೆ.
ಸಮಿತಿ ಅಧ್ಯಕ್ಷ ಶೇಖರ ಅಜೆಕಾರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಬಾರಿ ನೂರು ಕವಿಗಳನ್ನು ಒಟ್ಟು ಸೇರಿಸಿ ‘ಶತ ಕವಿಗೋಷ್ಠಿ’ ಆಯೋಜಿಸಲಾಗಿದೆ ಎಂದರು.
ಹಿರಿಯ ಸಾಹಿತಿ ಅಂಬಾತನಯ ಮುದ್ರಾಡಿ ಸಮ್ಮೇಳ ನಾಧ್ಯಕ್ಷತೆ ವಹಿಸಲಿದ್ದು, ಬೆಳದಿಂಗಳ ಬೆಳಕಿನಲ್ಲಿ ರಾತ್ರಿಯಿಂದ ಮುಂಜಾನೆವರೆಗೆ ಮಕ್ಕಳ ಪ್ರತಿಭಾ ಪ್ರದರ್ಶನ, ಗೌರವಾರ್ಪಣೆ, ಯುವ ಸಾಧಕರಿಗೆ ಗೌರವ, ನಾನಾ ಕ್ಷೇತ್ರದ ಸಾಧಕರಿಗೆ ಸನ್ಮಾನ, ಗೋಷ್ಠಿ ನಡೆಯಲಿದೆ ಎಂದು ಅವರು ಹೇಳಿದರು.
ಸಮಿತಿಯ ಗೌರವಾಧ್ಯಕ್ಷ ಹರಿಕೃಷ್ಣ ಪುನರೂರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.