×
Ad

ಇಂದಿನಿಂದ ಉಡುಪಿ ನಗರ ವ್ಯಾಪ್ತಿಗೆ ದಿನ ಬಿಟ್ಟು ದಿನ ನೀರು ಸರಬರಾಜು

Update: 2016-02-25 23:59 IST

 ಉಡುಪಿ, ಫೆ.25: ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಸರಬ ರಾಜಾಗುತ್ತಿರುವ ಕುಡಿಯುವ ನೀರಿಗೆ ಮುಖ್ಯ ಸಂಗ್ರಹ ಮೂಲವಾದ ಶಿರೂರಿನ ಅಣೆಕಟ್ಟಿನಲ್ಲಿ ನೀರಿನ ಒಳ ಹರಿವು ಕಡಿಮೆಯಾಗಿದೆ. ಶಿರೂರು ಹಾಗೂ ಬಜೆ ಅಣೆಕಟ್ಟಿನಲ್ಲಿ ಸಂಗ್ರಹವಾದ ನೀರನ್ನು ಉಡುಪಿ ನಗರ ಹಾಗೂ ಆಸುಪಾಸಿನ ಎಂಟು ಪಂಚಾಯತ್‌ಗಳಿಗೆ ಮುಂದಿನ ಮಳೆಗಾಲ ಆರಂಭಗೊಳ್ಳುವವರೆಗೆ ಸಾರ್ವಜನಿಕರಿಗೆ ಒದಗಿಸಬೇಕಾಗಿದೆ. ಆದ್ದರಿಂದ ಫೆ.26ರಿಂದ ನಗರಸಭಾ ವ್ಯಾಪ್ತಿಯಲ್ಲಿ ದಿನ ಬಿಟ್ಟು ದಿನ ನೀರು ಸರಬರಾಜು ಮಾಡಲಾಗುವುದು ಎಂದು ಉಡುಪಿ ನಗರಸಭಾ ಅಧ್ಯಕ್ಷ ಯುವರಾಜ್ ಪಿ. ಹಾಗೂ ಪೌರಾಯುಕ್ತ ಡಿ. ಮಂಜುನಾಥಯ್ಯ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಸಾರ್ವಜನಿಕರು ಕುಡಿಯುವ ನೀರನ್ನು ಮಿತವಾಗಿ ಬಳಸಿ ನಗರಸಭೆಯೊಂದಿಗೆ ಸಹಕರಿಸುವಂತೆ ಅವರು ಸಾರ್ವಜನಿಕರನ್ನು ಕೋರಿದ್ದಾರೆ. ಕುಡಿಯುವ ನೀರನ್ನು ತೋಟಗಳಿಗೆ, ಕಟ್ಟಡ ನಿರ್ಮಾಣಕ್ಕೆ, ವಾಹನ ತೊಳೆಯಲು ಮತ್ತಿತರ ಕಾರ್ಯಗಳಿಗೆ ಬಳಸದಂತೆ ಮನವಿ ಮಾಡಿರುವ ಅವರು, ನೀರಿನ ದುರ್ಬಳಕೆ ಕಂಡುಬಂದಲ್ಲಿ ಅಂತಹ ನೀರಿನ ಜೋಡಣೆಯನ್ನು ಕಡಿತಗೊಳಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ನೀರು ಸರಬರಾಜಾಗುವ ವಾರ್ಡ್‌ಗಳ ವಿವರ ಹೀಗಿದೆ.
1. ಅಜ್ಜರಕಾಡು, ಇಂದಿರಾನಗರ, ಎಸ್.ಪಿ.ಟ್ಯಾಂಕ್, ಉದ್ದಿನಹಿತ್ಲು ಹಾಗೂ ಬೊಬ್ಬರ್ಯಪಾದೆ, ಈಶ್ವರನಗರ, ಚಿಟ್ಪಾಡಿ, ತೆಂಕಪೇಟೆ, ಒಳಕಾಡು, ಬೈಲೂರು, ಕಿನ್ನಿಮುಲ್ಕಿ, ಇಂದಿರಾನಗರ, ಬಡಗುಬೆಟ್ಟು, ಕಸ್ತೂರ್ಬಾನಗರ, ಕುಂಜಿಬೆಟ್ಟು, ಬನ್ನಂಜೆ, ಶಿರಿಬೀಡು, ಅಂಬಲಪಾಡಿ, ಕೊಳ, ವಡಬಾಂಡೇಶ್ವರ, ಮಲ್ಪೆ ಸೆಂಟ್ರಲ್, ಕೊಡವೂರು, ಕಲ್ಮಾಡಿ, ಸರಳೆಬೆಟ್ಟು, ಈಶ್ವರನಗರ.
2.ದೊಡ್ಡಣಗುಡ್ಡೆ, ಪುತ್ತೂರು, ವಿ.ಪಿ.ನಗರ, ಮಣಿಪಾಲ- ಅನಂತನಗರ, ಹೆರ್ಗ, ನಿಟ್ಟೂರು, ಕಕ್ಕುಂಜೆ, ಕರಂಬಳ್ಳಿ, ಮೂಡುಪೆರಂಪಳ್ಳಿ, ಸಗ್ರಿ, ಮೂಡುಬೆಟ್ಟು, ಕೊಡಂಕೂರು, ಸುಬ್ರಹ್ಮಣ್ಯ ನಗರ, ಗೋಪಾಲಪುರ, ಕಡಿಯಾಳಿ, ಗುಂಡಿಬೈಲು, ಇಂದ್ರಾಳಿ, ಮಣಿಪಾಲ, ಶೆಟ್ಟಿಬೆಟ್ಟು, ಪರ್ಕಳ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News