×
Ad

ಪತ್ರಕರ್ತನಿಗೆ ತಂಡದಿಂದ ಹಲ್ಲೆ : ದೂರು

Update: 2016-02-27 11:47 IST

ಉಪ್ಪಿನಂಗಡಿ, ಫೆ.27: ಸರಳಿಕಟ್ಟೆ ಎಂಬಲ್ಲಿ ನಿನ್ನೆ ರಾತ್ರಿ  ಅಝೀಝ್, ಸಿನಾನ್ , ಸಿದ್ದಿಕ್ ಬಾಜಾರ್ , ನವಾಝ್, ಇಮ್ರಾನ್ ಮತ್ತು ಇತರರು ಕಾರಿನಲ್ಲಿ ಬಂದು ಬೆಳ್ತಂಗಡಿಯ ಪತ್ರಕರ್ತ ಅಸಿಫ್ ಸರಳಿಕಟ್ಟೆ ಎಂಬವರು ತನ್ನ ಮನೆಗೆ ಹೋಗುತ್ತಿದ್ದ ವೇಳೆ ಬೆದರಿಕೆ ಹಾಕಿ ಹಲ್ಲೆ ಮಾಡಿದ್ದಾರೆ ಎಂದು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹಲ್ಲೆ ಮಾಡಿದ ತಂಡವು ಎಸ್ ಡಿ ಪಿ ಐ ಕಾರ್ಯಕರ್ತರು ಎಂದು ಅಸಿಫ್ ಪತ್ರಿಕೆಗೆ ಹೇಳಿಕೆ ನೀಡಿದ್ದಾರೆ.  

ಗಾಯಗೊಂಡ ಅಸಿಫ್ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲ್ಲೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಆರೋಪಿಗಳು ಎಸ್ ಡಿ ಪಿ ಐ ಕಾರ್ಯಕರ್ತರಲ್ಲ ಎಂದು ಪಕ್ಷದ ಮುಖಂಡರು ಪ್ರತಿಕ್ರಿಯಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News