ಫೆ. 28ರಂದು ತುಂಬೆಯಲ್ಲಿ "ಮಜ್ಲಿಸುನ್ನೂರ್’ ಉದ್ಘಾಟನೆ
Update: 2016-02-27 13:57 IST
ಬಂಟ್ವಾಳ: ತುಂಬೆ ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ಪ್ರತಿ ತಿಂಗಳ ಕೊನೆಯ ರವಿವಾರದಂದು ಮಗ್ರಿಬ್ ನಮಾಝ್ ಬಳಿಕ ನಡೆಯುವ ಬದ್ರ್ ಶುಅದಾಗಳ ಸ್ಮರಣೀಯ "ಮಜ್ಲಿಸುನ್ನೂರ್’ ಇದರ ಉದ್ಘಾಟನಾ ಸಮಾರಂಭ ಫೆ. 28ರಂದು ಮಗ್ರಿಬ್ ನಮಾಝ್ ಬಳಿಕ ತುಂಬೆ ಜುಮಾ ಮಸೀದಿಯಲ್ಲಿ ನಡೆಯಲಿದೆ.
ಕಾರ್ಯಕ್ರಮದ ನೇತೃತ್ವವನ್ನು ಅಸೈಯದ್ ಝೈನುಲ್ ಆಬಿದೀನ್ ಜಿಫ್ರಿ ತಂಙಳ್ ವಹಿಸುವರು. ಅಸೈಯದ್ ಸಿರಾಜುದ್ದೀನ್ ಪೂಕುಂಞಿ ತಂಙಳ್, ತುಂಬೆ ಜುಮಾ ಮಸೀದಿಯ ಖತೀಬ್ ಇಸ್ಮಾಯೀಲ್ ಫೈಝಿ ತುಂಬೆ, ಅಬ್ದುಲ್ ರಝಾಕ್ ಅರ್ಶದಿ, ಅಧ್ಯಕ್ಷ ಟಿ.ಎಂ.ಮೂಸಬ್ಬ ಹಾಗೂ ಇತರರು ಈ ಸಂದರ್ಭ ಉಪಸ್ಥಿತರಿರುವರು ಎಂದು ತುಂಬೆ ಜುಮಾ ಮಸೀದಿಯ ಪ್ರಕಟನೆ ತಿಳಿಸಿದೆ.