×
Ad

ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ/ ಉಪಾಧ್ಯಕ್ಷ ಹುದ್ದೆಗೆ ಮೀಸಲಾತಿ ಪ್ರಕಟ

Update: 2016-02-27 14:16 IST

ಮಂಗಳೂರು, ಫೆ. 27: ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ /ಉಪಾಧ್ಯಕ್ಷ ಹುದ್ದೆಗಳ 8ನೆ ಅವಧಿ (2013ರ 2ನೆ ಅವಧಿ)ಗೆ ಮೀಸಲಾತಿಯನ್ನು ನಿಗದಿಪಡಿಸಿದೆ. ಅದರಂತೆ ಜಿಲ್ಲೆಯಲ್ಲಿ 30 ತಿಂಗಳ ಅಧ್ಯಕ್ಷ / ಉಪಾಧ್ಯಕ್ಷ ಹುದ್ದೆಗಳ ಪದಾವಧಿಯು ಮುಕ್ತಾಯಗೊಂಡಿರುವ ನಗರ ಸ್ಥಳೀಯ ಸಂಸ್ಥೆಗಳಿಗೆ ನಮೂದಿತ ದಿನಾಂಕದೊಳಗೆ ಚುನಾವಣೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ತಿಳಿಸಿದರು.


ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಅವರು, ಪುತ್ತೂರು ನಗರ ಸಭೆ  ಉಳ್ಳಾಲ ನಗರಸಭೆ ಹಾಗೂ ಬೆಳ್ತಂಗಡಿ ಪಟ್ಟಣ ಪಂಚಾಯತ್‌ನ ಪ್ರಸಕ್ತ ಅಧ್ಯಕ್ಷ, ಉಪಾಧ್ಯಕ್ಷರ ಅವಧಿ ಮಾರ್ಚ್ 10ರಂದು ಕೊನೆಗೊಳ್ಳಲಿದ್ದು, ಬಂಟ್ವಾಳ ಪುರಸಭೆಯ ಅಧ್ಯಕ್ಷ ಉಪಾಧ್ಯಕ್ಷರ ಅವಧಿ ಮಾ. 11ರಂದು ಕೊನೆಗೊಳ್ಳಲಿದೆ ಎಂದರು.
ಪುತ್ತೂರು ನಗರ ಸಭೆ ಅಧ್ಯಕ್ಷ ಸ್ಥಾನಕ್ಕೆ ಅನುಸೂಚಿತ ಪಂಗಡ (ಮಹಿಳೆ), ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮೀಸಲಾತಿ ನಿಗದಿಪಡಿಸಲಾಗಿದೆ.


ಉಳ್ಳಾಲ ನಗರಸಭೆ ಅಧ್ಯಕ್ಷ -ಹಿಂದುಳಿದ ವರ್ಗ ಎ, ಉಪಾಧ್ಯಕ್ಷ -ಸಾಮಾನ್ಯ (ಮಹಿಳೆ), ಬೆಳ್ತಂಗಡಿ ಪಟ್ಟಣ ಪಂಚಾಯತ್‌ಗೆ ಅಧ್ಯಕ್ಷ - ಸಾಮಾನ್ಯ, ಉಪಾಧ್ಯಕ್ಷ - ಹಿಂದುಳಿದ ವರ್ಗ ಎ, ಬಂಟ್ವಾಳ ಪುರಸಭೆ ಅಧ್ಯಕ್ಷ -ಸಾಮಾನ್ಯ, ಉಪಾಧ್ಯಕ್ಷ - ಸಾಮಾನ್ಯ ಮೀಸಲಾತಿ ನಿಗದಿಗೊಂಡಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News