ಸಿಆರ್‌ಝಡ್ ಪ್ರದೇಶ ಹೊರತು ಪಡಿಸಿ ಮರಳುಗಾರಿಕೆಗೆ ಟೆಂಡರ್: ಜಿಲ್ಲಾಧಿಕಾರಿ
Update: 2016-02-27 14:25 IST
ಮಂಗಳೂರು, ಫೆ. 27: ಜಿಲ್ಲೆಯಲ್ಲಿ ಕಾಡುತ್ತಿರುವ ಮರಳು ಅಭಾವವನ್ನು ನೀಗಿಸುವ ಸಲುವಾಗಿ ಸಿಆರ್‌ಝೆಡ್ ಪ್ರದೇಶ ಹೊರತು ಪಡಿಸಿ 23 ಬ್ಲಾಕ್‌ಗಳಲ್ಲಿ ಮರುಳುಗಾರಿಕೆ ಗುತ್ತಿಗೆದಾರರಿಂದ ಇ ಟೆಂಡರ್ ಆಹ್ವಾನಿಸಲಾಗಿದ್ದು, ಸೋಮವಾರ ಕೊನೆಯ ದಿನವಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ರಾಜ್ಯ ಸರಕಾರದ ಅಧಿಸೂಚನೆ ಪ್ರಕಾರ ಗುರುಪುರ, ನೇತ್ರಾವತಿ ಮತ್ತು ಕುಮಾರದಾರಾ ತಟಗಳಲ್ಲಿನ 23 ಬ್ಲಾಕ್‌ಗಳಲ್ಲಿ ಮರಳು ಶೇಖರಣಾ ಸ್ಥಳಗಳನ್ನು ಗುರುತಿಸಿ ಟೆಂಡರ್ ಕರೆಯಲಾಗಿದೆ. ನೋಂದಣಿ ಮಾಡಿದ ಗುತ್ತಿಗೆದಾರರು ಇ ಟೆಂಡರ್‌ನಲ್ಲಿ ಭಾಗವಹಿಸಬಹುದಾಗಿದೆ. ಮಾರ್ಚ್ 2ರಂದು ಟೆಂಡರ್ ತೆರೆಯಲಾಗುವುದು ಎಂದು ಅವರು ಹೇಳಿದರು.