×
Ad

‘ಪಾಕಿಸ್ತಾನಿ ಏಜಂಟ್’ ಪರವಾಗಿ ಏಕೆ ವಾದಿಸುತ್ತೀರಿ, ಎಂದು ಕನ್ಹಯ್ಯಾ ವಕೀಲರನ್ನು ಪ್ರಶ್ನಿಸಿದ್ದ ಪೊಲೀಸರು

Update: 2016-02-27 16:15 IST

ನವದೆಹಲಿ : ಪಟಿಯಾಲ ಹೌಸ್ ಕೋರ್ಟ್ ಆವರಣದಲ್ಲಿ ಇತ್ತೀಚೆಗೆ ವಕೀಲರ ಗುಂಪೊಂದರ ಗೂಂಡಾಗಿರಿಗೆ ಬಲಿಪಶುವಾದ ಜೆಎನ್‌ಯು ವಿದ್ಯಾರ್ಥಿ ಯೂನಿಯನ್ ನಾಯಕ ಕನ್ಹಯ್ಯಾ ಕುಮಾರ್ತಮ್ಮನ್ನು ವಕೀಲರು ಹೇಗೆ ಕೆಳಕ್ಕೆ ಬೀಳಿಸಿದರು ಹಾಗೂ ಮೇಲೇಳಲು ಪ್ರಯತ್ನಿಸಿದಾಗ ಮತ್ತೆ ಕೆಲವು ‘ವಕೀಲರುಗಳು’ಗೇಟನ್ನು ಪ್ರವೇಶಿಸಿ ತನ್ನನ್ನು ಬೆನ್ನತ್ತಿ ಹಲ್ಲೆ ಮಾಡಿದರು ಎಂದು ಆ ಘಟನೆಯನ್ನು ನೆನಪಿಸಿಕೊಂಡಿರುವುದನ್ನು ಸಿಎನ್‌ಎನ್-ಐಬಿಎನ್ ವರದಿಯೊಂದು ಹೇಳಿದೆ.

ಪೊಲೀಸರು ಈ ಕೃತ್ಯವನ್ನು ಪ್ರಶ್ನಿಸಿದಾಗ ಆ ವ್ಯಕ್ತಿ ಧೈಂರ್ದಿಂದ ಪೊಲೀಸರಿಗೇ ಸವಾಲು ಹಾಕಿ ಅಲ್ಲಿಂದ ಹೊರನಡೆದು ಬಿಟ್ಟ ಎಂದು ಕನ್ಹಯ್ಯಿ ನೆನಪಿಸಿಕೊಂಡಿದ್ದಾರೆ.

‘‘ಆತ ನನ್ನನ್ನು ಹೊಡೆಯುತ್ತಿದ್ದಾನೆಂದು ನಾನು ಪೊಲೀಸರಿಗೆ ಹೇಳಿದರೂ ಅವರು ಏನೂ ಮಾಡಲಿಲ್ಲ. ನನಗೆ ದೇಶದ ಸಂವಿಧಾನದಲ್ಲಿ ಸಂಪೂರ್ಣ ನಂಬಿಕೆಯಿದೆ. ಇವರೆಲ್ಲಾ ಭಾರೀ ರಾಜಕೀಯ ಪ್ರಭಾವವಿರುವ ವ್ಯಕ್ತಿಗಳು,’’ ಎಂದು ಕನ್ಹಯ್ಯಿ ಹೇಳಿದ್ದಾರೆ.

‘‘ಮೈ ಇಸ್ ದೇಶ್ ಕಾ ನೌಜವಾನ್ ಹೂಂ.ಮೈ ಜೆಎನ್‌ಯು ಮೇ ಪಿಹೆಚ್‌ಡಿ ಕರ್ ರಹಾ ಹೂ. ಲೋಗ್ ಕೆಹ್ ರಹೇ ಹೇ ಕಿ ಮೈ ದೇಶ್ ದ್ರೋಹಿ ಹೂ. ಕುಚ್ ಮೀಡಿಯಾ ಮೇರಾ ಟ್ರಯಲ್ ಕರ್ ರಹೀ ಹೇ. (ನಾನು ಈ ದೇಶದ ಯುವಕ, ನಾನು ಜೆಎನ್‌ಯುವಿನ ಪಿಹೆಚ್‌ಡಿ ವಿದ್ಯಾರ್ಥಿ. ಜನರು ನನ್ನನ್ನು ದೇಶದ್ರೋಹಿ ಎಂದು ಹೇಳುತ್ತಾರೆ. ಮಾಧ್ಯಮದ ಒಂದು ಗುಂಪು ನನ್ನನ್ನು ವಿಚಾರಣೆಗೆ ಗುರಿಯಾಗಿಸಿದೆ,’’ಎಂದು ಕನ್ಹಯ್ಯಾ ಭಾವಪರವಶರಾಗಿ ಹೇಳಿದರು.

ವಕೀಲರು ನಡೆಸಿದ ಹಲ್ಲೆ ಘಟನೆಯ ವೀಡಿಯೋದಲ್ಲಿ ಎಲ್ಲವೂ ಸ್ಪಷ್ಟವಾಗಿದ್ದರೂ ಪೊಲೀಸರ ಬಳಿ ಸ್ಷಷ್ಟ ಉತ್ತರವಿಲ್ಲ.ಅಧಿಕಾರಿಗಳು ಪರಸ್ಪರ ವೈರುಧ್ಧ್ಯದ ಹೇಳಿಕೆಗಳನ್ನು ನೀಡುತ್ತಿದ್ದಾರೆ.‘‘ನನಗೆ ಯಾರು ಬಂದಿದ್ದರೆಂದು ಗೊತ್ತಿಲ್ಲ,’’ ಎಂದು ತಿಲಕ್ ಮಾರ್ಗ್ ಠಾಣೆಯ ಅಧಿಕಾರಿ ಸುಶೀಲ್ ಕುಮಾರ್ ಹೇಳುತ್ತಾರೆ. ‘‘ಆತನಿಗೆ ಹಲ್ಲೆಗೈಯ್ಯಲಾಗಿದೆಯೇ ಎಂದು ನನಗೆ ಗೊತ್ತಿಲ್ಲ,’’ಎಂದು ವಸಂತ್ ಗುಂಜ್ ಠಾಣಾಧಿಕಾರಿ ವೀರೇಂದರ್ ಜೈನ್ ಹೇಳಿದರು.

ಕನ್ಹಯ್ಯ ಪರ ವಕೀಲರಲ್ಲೊಬ್ಬರಾದ ಸುಭಾಶ್ ಚಂದ್ರನ್ ತಾನು ಪೊಲೀಸರ ಬಳಿ ಸಹಾಯಕ್ಕಾಗಿ ಅಂಗಲಾಚಿದರೂ ಅವರೇನೂ ಮಾಡಿಲ್ಲವೆಂದು ಆಪಾದಿಸುತ್ತಾರೆ.

‘‘ಅವರೆಲ್ಲಾ ಸುಮ್ಮನೆ ನಿಂತುಕೊಂಡು ನೋಡಿ ಗೂಂಡಾಗಳು ತಮಗೆ ಬೇಕಾದಂತೆ ಮಾಡುವಂತೆ ಮಾಡಿದರು,’’ಎಂದು ಅವರು ಹೇಳುತ್ತ್ತಾರೆ. ತಿಲಕ್ ನಗರ್ ಪೊಲಿಸ್ ಠಾಣಾಧಿಕಾರಿ ಬಳಿ ಸಹಾಯ ಯಾಚಿಸಿದಾಗ‘‘ನೀವೇಕೆ ಪಾಕಿಸ್ತಾನ್ ಏಜಂಟ್ ಪರ ವಾದಿಸುತ್ತೀರಿ,’’ಎಂದು ಪ್ರಶ್ನಿಸಿದರು ಎಂದು ಚಂದ್ರನ್ ವಿವರಿಸುತ್ತಾರೆ. ತಾನು ನಾಲ್ಕು ಹೆಸರುಗಳನ್ನು ತನ್ನ ದೂರಿನಲ್ಲಿ ನೀಡಿದ್ದರೂ ಎಫ್‌ಐಆರ್ ದಾಖಲಿಸಲಾಗಿಲ್ಲವೆಂದೂ ಅವರು ಆರೋಪಿಸಿದರು.

‘‘ವಿಶೇಷ ತನಿಖಾ ದಳ ಪಟಿಯಾಲ ಹೌಸ್ ಘಟನೆಯನ್ನು ತನಿಖೆ ನಡೆಸುವುದು. ದೆಹಲಿ ಪೊಲೀಸರಿಂದ ನಿಷ್ಪಕ್ಷಪಾತ ತನಿಖೆ ಅಪೇಕ್ಷಿಸುವಂತಿಲ್ಲ,’’ಎಂದು ಹಿರಿಯ ವಕೀಲ ಪ್ರಶಾಂತ್ ಭೂಷಣ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News