ವೇಶ್ಯೆವಾಟಿಕೆ ಅಪರಾಧವಲ್ಲ - ಕೇರಳ ಹೈಕೋರ್ಟ್ ತೀರ್ಫು
ಕೊಚ್ಚಿ: ಹೋಮ್‌ಸ್ಟೇ ಲಾಡ್ಜ್‌ಗಳನ್ನು ನಡೆಸುವವರನ್ನು ಇನ್ನುಮುಂದೆ ಪೊಲೀಸರಿಗೆ ಪೀಡಿಸಲು ಸಾಧ್ಯವಿಲ್ಲ. ಕೇರಳ ಹೈಕೋರ್ಟ್ ವೇಶ್ಯಾಲಯದಲ್ಲಾದರೂ ಹಣಸಂಪಾದಿಸುವ ಉದ್ದೇಶವಲ್ಲದೆ ಇಷ್ಟ ಪಟ್ಟು ಶಾರೀರಿಕ ಸಂಬಂಧ ಬೆಳೆಸಿದರೆ ಅಪರಾಧವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಕೊಚ್ಚಿ ಸಮೀಪದ ಪಾರಶಾಲ ಪೊಯಿಯೂರಿನ ಹೋಮ್‌ಸ್ಟೇಯೊಂದರಲ್ಲಿ ಅನೈತಿಕ ಚಟುವಟಿಕೆ ನಡೆಸುತ್ತಿದ್ದಾರೆಂಬ ಹಿನ್ನೆಲೆಯಲ್ಲಿ ಪೊಲೀಸರು ಬಂಧಿಸಿದ್ದ ಮೂವರ ಆರೋಪವನ್ನು ಖುಲಾಸೆಗೊಳಿಸಿದ ಕೇರಳ ಹೈಕೋರ್ಟ್ ಈ ತೀರ್ಪನ್ನು ನೀಡಿದೆ. ಇದು ಕೇರಳಾದ್ಯಂತವಿರುವ ಲಾಡ್ಜ್‌ಗಳಿಗೆ ಹೋಮ್‌ಸ್ಟೇಗಳಿಗೆ ನೆಮ್ಮದಿ ನೀಡುವಂತಹ ತೀರ್ಪಾಗಿದೆ. ಪೊಲೀಸರಿಗೂ, ಸಾಂಸ್ಕೃತಿಕ ಪೊಲೀಸ್‌ಗಿರಿಗಿಳಿಯುವವರಿಗೂ ಹೆದರಬೇಕಾಗಿಲ್ಲ. ತೀರ್ಫು ವಿರುದ್ಧ ಸುಪ್ರೀಂಕೋರ್ಟ್‌ಗೆ ಅಪೀಲು ಸಲ್ಲಿಸುವ ಸಾಧ್ಯತೆಗಳು ಸದ್ಯ ಕಂಡು ಬಂದಿಲ್ಲವಾದ್ದರಿಂದ ಲಾಡ್ಜ್ ಮಾಲಕರು ಹೋಮ್‌ಸ್ಟೇ ಮಾಲಕರು ನಿಶ್ಚಿಂತರಾಗಬಹುದು. ಜಸ್ಟಿಸ್ ಕೆ ಹರಿಲಾಲ್ ಈ ಆದೇಶವನ್ನು ನೀಡಿದ್ದಾರೆ. ಅನೈತಿಕ ಚಟುವಟಿಕೆಗಳನ್ನು ತಡೆಯುವ ಕಾನೂನಿನ ದುರುಪಯೋಗದ ವಿರುದ್ಧ ಇದು ಬಲವಾದ ಎಚ್ಚರಿಕೆಯಾಗಿದೆ ಎಂದು ತೀರ್ಪನ್ನು ವಿಶ್ಲೇಷಿಲಾಗುತ್ತಿದೆ. ಹಣದ ಉದ್ದೇಶವಿಲ್ಲದೆ ಇಬ್ಬರು ಪರಸ್ಪರ ಸಮ್ಮತಿಯಿಂದ ಶಾರೀರಿಕ ಸಂಬಂಧ ಬೆಳೆಸುವುದನ್ನು ಅನೈತಿಕ ಚಟುವಟಿಕೆ ಎಂದು ಹೇಳಲಾಗದು. ಅನೈತಿಕ ಚಟುವಟಿಕೆ ಎಂದು ಪೊಲೀಸರು ದಾಖಲಿಸಿದ್ದ ಪ್ರಕರಣದಲ್ಲಿ ಕನ್ಯಾಕುಮಾರಿಯ ಮಾಣಿಕ್ಯ ಸ್ವಾಮಿ, ವಿಜಯ ಕುಮಾರ್, ಮಾರ್ಟಿನ್ ಆರೋಗ್ಯಸ್ವಾಮಿ ಸಲ್ಲಿಸಿದ ಅರ್ಜಿಯನ್ನು ಪರಿಗಣಿಸಿ ಜಸ್ಟಿಸ್ ಕೆ. ಹರಿಲಾಲ್ ಈ ತೀರ್ಪು ನೀಡಿದ್ದಾರೆ. ಕೊಯಿಯೂರ್ ಹೋಮ್ ಸ್ಟೇಯೊಂದರಲ್ಲಿ ಅರ್ಜಿದಾರರು ಮಹಿಳೆಯರ ಜೊತೆ ಶಾರೀರಿಕ ಸಂಬಂಧವಿರಿಸಿದ್ದಾರೆಂಬುದನ್ನು ಸಾಬೀತು ಪಡಿಸಲಿಕ್ಕೂ ಪೊಲೀಸರಿಗೆ ಸಾಧ್ಯವಾಗಿಲ್ಲ. ಹೋಮ್‌ಸ್ಟೇಯಲ್ಲಿ ರೂಮ್ ಮಾಡಿದ್ದು ಇದೀಗ ನ್ಯಾಯಾಲಯ ಖುಲಾಸೆಗೊಳಿಸಿದವರ ವಿರುದ್ಧ ಪೊಲೀಸರು ವೇಶ್ಯವಾಟಿಕೆ, ವೇಶ್ಯವಾಟಿಕೆಯಿಂದ ಉಪಜೀವನ, ವ್ಯಭಿಚಾರಕ್ಕಾಗಿ ಜನರನ್ನು ಸೇರಿಸುವುದು, ಸಾರ್ವಜನಿಕ ಸ್ಥಳದಲ್ಲಿ ವೇಶ್ಯವಾಟಿಕೆ ನಡೆಸುವುದು ಮುಂತಾದ ಆರೋಪಗಳನ್ನು ಹೊರಿಸಿದ್ದರು. ಇದೀಗ ಹೈಕೋರ್ಟ್ ಎಲ್ಲ ಆರೋಪಗಳನ್ನು ವಜಾಗೊಳಿಸಿದೆ.