×
Ad

ಆ್ಯಕ್ಷನ್‌ನಲ್ಲಿ ಮಗನಿಗೆ ಸವಾಲೆಸೆದ ತಮಿಳ್‌ಸೂಪರ್‌ಸ್ಟಾರ್‌ವಿಜಯ್‌ರ ತಂದೆ ನಟನೆಯ ಸಿನೆಮಾ ನಯಾಪ್ಪಡೈ

Update: 2016-02-27 16:22 IST

 ಚೆನ್ನೈ: ತಮಿಳ್ ಸೂಪರ್‌ಸ್ಟಾರ್ ವಿಜಯ್ ತಂದೆ ನಿರ್ದೇಶಕ ನಿರ್ಮಾಪಕ ಎಸ್. ಎ. ಚಂದ್ರ ಶೇಖರ್ ನಟನೆಯ ಸಿನೆಮಾವೊಂದು ಬಿಡುಗಡೆಗೆ ಅಣಿಯಾಗಿದೆ. ವಿಜಯ್‌ರ ಅಭಿಮಾನಿಗಳು ಅವರ ಆಕ್ಷನ್ ಹಾಗೂ ಡ್ಯಾನ್ಸ್‌ಗೆ ಫಿದಾ ಆಗುತ್ತಾರೆ. ಇದೀಗ ಎಸ್ ಎ ಚಂದ್ರಶೇಖರ್ ಮಗನನ್ನೂ ಮೀರಿಸುವ ಆಕ್ಷನ್‌ನೊಂದಿಗೆ ನಟಿಸಿದ್ದಾರೆಂದು ಸುದ್ದಿಯಾಗಿದೆ. ಅಂದರೆ ಅವರು ನಟಿಸಿರುವ ಹೊಸ ಚಿತ್ರದ ಟ್ರೈಲರ್ ಈಗ ಬಿಡುಗಡೆಯಾಗಿದೆ. ತೆರಿ ಎಂಬ ಹೆಸರಿನ ವಿಜಯ್ ಚಿತ್ರಕ್ಕೂ ಮೊದಲು ನಯಾಪ್ಪಡೈ ಎಂಬ ಚಿತ್ರ ಬಿಡುಗಡೆ ಗೊಳ್ಳಲಿದೆ. ತನ್ನ ನಟನೆಯ ಚಿತ್ರಕ್ಕೆ ಸ್ವಯಂ ಚಂದ್ರಶೇಖರ್‌ರೆ ಹಣಹೂಡಿದ್ದಾರೆ. ವಿಜಯ್‌ಕಿರಣ್ ನಿರ್ದೇಶನವಿದೆ. ಪಂಚ್ ಡೈಲಾಗ್‌ಗಳು ಸಾಕಷ್ಟು ಫೈಟ್ ಇವೆ. ಇದರಲ್ಲಿ ನಿವೃತ್ತ ಸೈನಿಕನ ಪಾತ್ರವನ್ನು ಎಸ್. ಎ. ಚಂದ್ರ ಶೇಖರ್ ಮಾಡುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News