×
Ad

ಏಷ್ಯಾಕಪ್ ಟ್ವೆಂಟಿ-20: ಬೌಲಿಂಗ್ ಆಯ್ದುಕೊಂಡ ಭಾರತ

Update: 2016-02-27 18:47 IST

 ಮೀರ್ಪುರ, ಫೆ.27: ಪಾಕಿಸ್ತಾನ ವಿರುದ್ಧದ ಏಷ್ಯಾಕಪ್ ಟ್ವೆಂಟಿ-20 ಟೂರ್ನಿಯಲ್ಲಿ ಶನಿವಾರ ಟಾಸ್ ಜಯಿಸಿದ ಭಾರತದ ನಾಯಕ ಎಂಎಸ್ ಧೋನಿ ಬೌಲಿಂಗ್ ಆಯ್ದುಕೊಂಡಿದ್ದಾರೆ.

ಆರಂಭಿಕ ದಾಂಡಿಗ ಶಿಖರ್ ಧವನ್ ಗಾಯಗೊಂಡಿರುವ ಹಿನ್ನೆಲೆಯಲ್ಲಿ ಅಜಿಂಕ್ಯ ರಹಾನೆ ಅಂತಿಮ 11ರ ಬಳಗದಲ್ಲಿ ಆಡಲಿದ್ದಾರೆ. ‘‘ಮೀರ್ಪುರದ ಪಿಚ್‌ನಲ್ಲಿ ಹೆಚ್ಚು ಹುಲ್ಲು ಇದೆ. ಈ ವೇಳೆ ಹೆಚ್ಚು ಇಬ್ಬನಿಯಿಲ್ಲ. ಆದ್ದರಿಂದಾಗಿ ಬೌಲರ್‌ಗಳಿಗೆ ಮೊದಲ ಅವಕಾಶ ನೀಡಲು ಬಯಸಿದ್ದೇನೆ’’ ಎಂದು ಧೋನಿ ಪ್ರತಿಕ್ರಿಯಿಸಿದರು.

‘‘ನಾನು ಮೊದಲು ಬ್ಯಾಟಿಂಗ್ ಮಾಡಲು ಬಯಸಿದ್ದೆ. ನಮ್ಮ ತಂಡದಲ್ಲಿ ನಾಲ್ವರು ವೇಗದ ಬೌಲರ್‌ಗಳಿದ್ದಾರೆ. ಭಾರತ ತಂಡದಲ್ಲಿ ಇಬ್ಬರೇ ವೇಗಿಗಳಿದ್ದಾರೆ’’ ಎಂದು ಪಾಕ್ ನಾಯಕ ಶಾಹಿದ್ ಅಫ್ರಿದಿ ಪ್ರತಿಕ್ರಿಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News