ಇಂದು ದೇರಳಕಟ್ಟೆಯಲ್ಲಿ ರಕ್ತದಾನ ಕಾರ್ಯಕ್ರಮ
Update: 2016-02-27 19:06 IST
ಉಳ್ಳಾಲ. ಫೆ, 27: ಎಸ್ಸೆಸ್ಸೆಫ್ ಬೆಳ್ಮ ರೆಂಜಾಡಿ ಶಾಖೆಯ 21ನೇ ವಾರ್ಷಿಕದ ಪ್ರಯುಕ್ತ ಹಮ್ಮಿಕೊಂಡ 21ಕಾರ್ಯಕ್ರಮಗಳಲ್ಲಿ 16ನೇ ಕಾರ್ಯಕ್ರಮ ರಕ್ತದಾನ ಶಿಬಿರವು ದೇರಳಕಟ್ಟೆ ಯೆನೆಪೋಯ ಮೆಡಿಕಲ್ ಕಾಲೇಜ್ ಮತ್ತು ಅಸ್ಪತ್ರೆಯ ಸಹಯೋಗದೊಂದಿಗೆ ಫೆ, 28ರಂದು ದೇರಳಕಟ್ಟೆ ನೇತಾಜಿ ಸುಭಾಷ್‌ಚಂದ್ರ ಬೋಸ್ ಫ್ರೌಢ ಶಾಲಾ ವಠಾರದಲ್ಲಿ ನಡೆಯಲಿದೆ ಎಂದು ಎಸ್ಸೆಸ್ಸೆಫ್ ರೆಂಜಾಡಿ ಶಾಖೆ ಪ್ರ.ಕಾರ್ಯದರ್ಶಿ ಯು.ಎ ಮುಹಮ್ಮದ್ ಸಫೀರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.