ಉಳ್ಳಾಲ: ಸೋಲಾರ್ ಕ್ಲಬ್ ಬಳಿಯ ಸಮುದ್ರದಲ್ಲಿ ಅಪರಿಚಿತ ಗಂಡಸಿನ ಶವ ಪತ್ತೆ
Update: 2016-02-27 23:12 IST
ಉಳ್ಳಾಲ: ಉಳ್ಳಾಲ ಮೊಗವೀರಪಟ್ಣ ಸೋಲಾರ್ ಕ್ಲಬ್ ಬಳಿಯ ಸಮುದ್ರದಲ್ಲಿ ಅಪರಿಚಿತ ಗಂಡಸಿನ ಶವ ಪತ್ತೆಯಾಗಿದ್ದು, ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಮಾರು 40ರಿಂದ 45ರ ಪ್ರಾಯದ ಗಂಡಸಿನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ತಲೆ ಮತ್ತು ಬಲಕೈ ಇರಲಿಲ್ಲ ಎನ್ನಲಾಗಿದ್ದು ಎದೆಯ ಬಲ ಭಾಗದಲ್ಲಿ ಸಿ. ವಾರಿಜ ಎಂದು ಬರೆಯಲಾಗಿದೆ ಎಂದು ಉಳ್ಳಾಲ ಪೊಲೀಸ್ ಪ್ರಕಟನೆ ತಿಳಿಸಿದೆ.