ಸ್ಮತಿ ಇರಾನಿ ಉಲ್ಲೇಖಿಸಿದ ಕೈಪಿಡಿ ವಾಪಸು: ಆರ್ಚ್ ಬಿಷಪ್
Update: 2016-02-27 23:41 IST
ಹೊಸದಿಲ್ಲಿ, ಫೆ.27: ಮಹಾರಾಷ್ಟ್ರದ ಖ್ಯಾತ ಯೋಧ ಶಿವಾಜಿ ದಲಿತ ಎಂದು ಉಲ್ಲೇಖಿಸಿರುವ ಕೈಪಿಡಿಯನ್ನು ಶಿವಸೇನೆ ವಿರೋಧಿಸಿದ ಹಿನ್ನೆಲೆಯಲ್ಲಿ ಮುಂಬೈನ ಮಾಟುಂಗಾದ ಡಾನ್‌ಬಾಸ್ಕೊ ಶಾಲೆ ವಾಪಸು ಪಡೆದಿದೆ ಎಂದು ಮುಂಬೈ ಆರ್ಚ್ ಬಿಷಪ್ ಓಸ್ವಾಲ್ಡ್ ಗ್ರಾಸಿಯಾನ್ ಅವರ ವಕ್ತಾರ ಫಾದರ್ ನೈಜೆಲ್ ಬರ್ರೆಟ್ ಶನಿವಾರ ಪ್ರಕಟಿಸಿದ್ದಾರೆ.
ಪ್ರಯೋಗಾತ್ಮಕವಾಗಿ ಡಾನ್‌ಬಾಸ್ಕೊ ಆರನೆ ತರಗತಿಗೆ ಸಿದ್ಧಪಡಿಸಿದ್ದ ಕೈಪಿಡಿಯನ್ನು ಒಂದು ವರ್ಷದಿಂದ ಬಳಸಲಾಗುತ್ತಿದ್ದು, ಇದೀಗ ವಾಪಸು ಪಡೆಯಲಾಗಿದೆ. ಶಿವಾಜಿ ಬಗೆಗಿನ ಹೇಳಿಕೆಯ ಬಗ್ಗೆ ಶಿವಸೇನೆ ಆಕ್ಷೇಪಿಸಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಫಾದರ್ ಬರ್ರೆಟ್ ಹೇಳಿದ್ದಾರೆ.