ನೇಮಕಾತಿ ಹಗರಣ: ದಿಗ್ವಿಜಯ್ ಸಿಂಗ್‌ಗೆ ಜಾಮೀನು
Update: 2016-02-27 23:42 IST
ಭೋಪಾಲ, ಫೆ.27: ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್, ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿದ್ದ ವೇಳೆ ನಡೆದಿದ್ದ, ವಿಧಾನಸಭಾ ಕಾರ್ಯಾಲಯದ ನೇಮಕಾತಿ ಹಗರಣದ ಸಂಬಂಧ ಇಂದವರು ಇಲ್ಲಿನ ನ್ಯಾಯಾಲಯವೊಂದರ ಮುಂದೆ ಹಾಜರಾಗಿದ್ದು, ಅವರಿಗೆ ಜಾಮೀನು ದೊರಕಿದೆ.
ದಿಗ್ವಿಜಯ್, ವಿಶೇಷ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಾಶಿನಾಥ ಸಿಂಗ್‌ರ ಮುಂದೆ ಇಂದು ಹಾಜರಾದರು.
ಪ್ರಕರಣದ ಸಂಬಂಧ 169 ಪುಟಗಳ ಪೂರಕ ಆರೋಪ ಪಟ್ಟಿಯನ್ನೂ ದಾಖಲಿಸಲಾಗಿದೆ. ಆರೋಪಿ ದಿಗ್ವಿಜಯ್ ನ್ಯಾಯಾಲಯಕ್ಕೆ ಹಾಜರಾಗದ ಕಾರಣ ನಿನ್ನೆ ಅವರ ವಿರುದ್ಧ ಜಾಮೀನು ರಹಿತ ವಾರಂಟನ್ನು ಅದು ಹೊರಡಿಸಿತ್ತು.