ಫ್ರೀಡಂ 251ರ ಹಣ ಹಿಂದಿರುಗಿಸಲು ರಿಂಗಿಂಗ್ ಬೆಲ್ಸ್ ನಿರ್ಧಾರ: ವರದಿ
ಹೊಸದಿಲ್ಲಿ, ಫೆ.27: ವಿಶ್ವದಲ್ಲೇ ಅತ್ಯಂತ ಅಗ್ಗದ ಸ್ಮಾರ್ಟ್ ಫೋನ್ ಫ್ರೀಡಂ251ರ ತಯಾರಕ, ನೊಯ್ಡಾ ಮೂಲದ ಸ್ಟಾರ್ಟ್‌ಪ್ ರಿಂಗಿಂಗ್ ಬೆಲ್ಸ್, ಮೊದಲ ಫ್ರೀ ಬುಕಿಂಗ್ ದಿನಾಂಕದಂದು ಪಡೆದಿರುವ ಹಣವನ್ನು ಹಿಂದಿರುಗಿಸುತ್ತಿದೆಯೆಂದು ವರದಿಯಾಗಿದೆ.
ಸಂಸ್ಥೆಯು ಮೊದಲ 30 ಸಾವಿರ ಆರ್ಡರ್‌ಗಳಿಗೆ ಹಣವನ್ನು ಪಡೆದಿದೆ. ಆ ಬಳಿಕ ಜಾಲತಾಣವು ಸ್ಥಗಿತಗೊಂಡಿತೆಂದು ಅದು ಹೇಳಿದೆ.
ಕಂಪೆನಿಯು 30 ಸಾವಿರ ಗ್ರಾಹಕರಿಗೆ ಹಣವನ್ನು ಹಿಂದಿರುಗಿಸಿದೆ. ಸಂಸ್ಥೆ ಮಾಲು ಪೂರೈಸಿದಾಗಲೇ ಹಣವನ್ನು ಪಡೆಯಲಿದೆಯೆಂದು ರಿಂಗಿಂಗ್ ಬೆಲ್‌ನ ಎಂ.ಡಿ ಮೋಹಿತ್ ಗೋಯೆಲ್ ಪ್ರತಿಪಾದಿಸಿದ್ದಾರೆಂದು ಎಬಿಪಿ ನ್ಯೂಸ್ ವಾಹಿನಿ ವರದಿ ಮಾಡಿದೆ.
ಮೊದಲ 30 ಸಾವಿರ ಬುಕಿಂಗ್‌ಗಳ 24 ತಾಸುಗಳ ಕಾಲ ಜಾಲತಾಣ ಸ್ಥಗಿತಗೊಂಡಿತ್ತು. ಅದು ಮರು ಚಾಲನೆಗೊಂಡ ಮೇಲೆ ಕಂಪೆನಿಯು ಯಾವುದೇ ಬುಕಿಂಗ್ ಮೊತ್ತವನ್ನು ಕೇಳಿಲ್ಲವೆಂಬುದು ಗಮನಾರ್ಹ. ಜಾಲ ತಾಣದಲ್ಲಿ 2ನೆ ಸುತ್ತಿನ ಬುಕಿಂಗ್‌ಗೆ ಜೀವ ನೀಡಿದ ಬಳಿಕ, ಒಂದು ಇ-ಮೇಲ್ ಐಡಿ ಹಾಗೂ ಮೊಬೈಲ್ ನಂಬರ್‌ಗೆ ಒಂದು ಒಂದು ಫ್ರೀಡಂ 251 ಪೋನ್ ಬುಕ್ ಮಾಡಲಷ್ಟೇ ಕಂಪೆನಿಯು ಜನರಿಗೆ ಅವಕಾಶ ನೀಡಿದೆ.
48 ತಾಸುಗಳೊಳಗೆ ತಮ್ಮ ಬುಕಿಂಗ್‌ನ್ನು ಖಚಿತಗೊಳಿಸಲು ಗ್ರಾಹಕರು ನೋಂದಾಯಿತ ಇ-ಮೇಲ್ ಐಡಿಯಲ್ಲಿ ಪಾವತಿಯ ಲಿಂಕ್ ಒಂದನ್ನು ಪಡೆಯಲಿದ್ದಾರೆಂದು ನಿರ್ದಿಷ್ಟ ಬುಕಿಂಗ್‌ಗಳನ್ನು ಯಶಸ್ವಿಯಾಗಿ ಪಡೆದ ಮೇಲೆ ರಿಂಗಿಂಗ್ ಬೆಲ್ ತಿಳಿಸಿದೆ. ಆದಾಗ್ಯೂ ಅದು ಹಣ ಪಾವತಿಗೆ ಸಂಬಂಧಿಸಿದ ಯಾವುದೇ ಈ-ಮೇಲ್‌ನ್ನು ತನ್ನ ಗ್ರಾಹಕರಿಗೆ ಕಳುಹಿಸಿಲ್ಲ.
ಫ್ರೀಡಂ 251ಕ್ಕೆ ಬೇಡಿಕೆ ಕಳುಹಿಸಿದವರಿಗೆಲ್ಲ, ‘ಕ್ಯಾಶ್ ಆನ್ ಡೆಲಿವರಿ’ ಮಾದರಿಯ ಹಣ ಪಾವತಿ ವ್ಯವಸ್ಥೆಯನ್ನು ಮುಂದಿರಿಸಲು ಕಂಪೆನಿ ನಿರ್ಧರಿಸಿದೆ. ಇದು ಇನ್ನಷ್ಟು ಪಾರದರ್ಶಕತೆಯನ್ನು ಖಚಿತಪಡಿಸಲಿದ್ದು, ತಮ್ಮ ತಿಳುವಳಿಕೆ ದೂರ ಮಾಡಲಿವೆಯೆಂದು ರಿಂಗಿಂಗ್ ಬೆಲ್‌ನ ಅಧ್ಯಕ್ಷ ಅಶೋಕ್ ಚಂದ್ ಅಧಿಕೃತ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.