ಜೆಎನ್‌ಯು ಪ್ರಕರಣಕೇಂದ್ರದಿಂದ ದಿಲ್ಲಿ ಪೊಲೀಸರ ‘ವಿಚಾರಣೆ’?
Update: 2016-02-27 23:45 IST
ಹೊಸದಿಲ್ಲಿ, ಫೆ.27: ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾನಿಲಯದ ವಿವಾದವನ್ನು ನಿಭಾಯಿಸಿದ ರೀತಿಗೆ ವಿಪಕ್ಷಗಳಿಂದ ಹಾಗೂ ನಾಗರಿಕ ಸಮಾಜದಿಂದ ತೀವ್ರ ಟೀಕೆಗೆ ಗುರಿಯಾಗಿರುವ ಕೇಂದ್ರ ಸರಕಾರ ಈಗ ಪರಿಸ್ಥಿತಿಯನ್ನು ಸುಧಾರಿಸಲು ಯತ್ನಗಳನ್ನು ಮಾಡಲಾರಂಭಿಸಿದೆ.
ಗೃಹ ಇಲಾಖೆಯ ಉನ್ನತ ಮೂಲಗಳ ಪ್ರಕಾರ ಸಂಸತ್ ಅಧಿವೇಶನ ಆರಂಭವಾಗುವ ಮುನ್ನ ದಿಲ್ಲಿ ಪೊಲೀಸರಿಂದ ಘಟನೆಯ ವರದಿ ಕೇಳಿದ್ದ ಕೇಂದ್ರ ಇದೀಗ ಖಾಸಗಿ ಚಾನೆಲ್ ಒಂದು ಪ್ರಸಾರ ಮಾಡಿದ ವೀಡಿಯೊವನ್ನು ಪೊಲೀಸರೇಕೆ ಅವಲಂಬಿಸಿದರು ಎಂದು ಕೇಳಲಿದ್ದಾರೆಂದು ತಿಳಿದು ಬಂದಿದೆ.