ಅಂದಿನ ಸಾಮಾಜಿಕ ಹೋರಾಟಗಾರರೇ ತುಳು ದೈವಗಳು

Update: 2016-02-27 18:22 GMT

ಉಡುಪಿ, ಫೆ.27: ತುಳುನಾಡಿನ ಎಲ್ಲ ದೈವಗಳು ಸಾಮಾಜಿಕ ಹೋ ರಾಟಗಾರರು, ಸಾಮಾಜಿಕ ಪರಿವರ್ತಕರು. ಅವರನ್ನು ವಂಚನೆ, ಕುತಂತ್ರದಿಂದ ಅಳಿಸಿ ಹಾಕಲಾಯಿತು. ಆದರೆ ಅವರನ್ನು ನಂಬಿರುವ ಸಮು ದಾಯವು ಪಾಡ್ದನ, ಕೋಲದಂತಹ ಕಲೆಗಳ ಮೂಲಕ ಅವರನ್ನು ನೆನಪಿನಲ್ಲಿ ಇಟ್ಟುಕೊಂಡಿದೆ. ಆ ಸಂಸ್ಕೃತಿ ನಮಗೆ ಇಂದು ಬೇಕಾಗಿದೆ ಎಂದು ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಹೇಳಿದ್ದಾರೆ.
ಉಡುಪಿ ಕೆಮ್ಮಲಜೆ ಜಾನಪದ ಪ್ರಕಾಶನದ ವತಿಯಿಂದ ‘ಬನ್ನಂಜೆ ಬಾಬು ಅಮೀನ್ ಜಾನಪದ ಪ್ರಶಸ್ತಿ’ಯನ್ನು ಶನಿವಾರ ಹೊಟೇಲ್ ದುರ್ಗಾ ಇಂಟರ್‌ನ್ಯಾಶನಲ್ ಸಭಾಂಗಣದಲ್ಲಿ ಪ್ರದಾನ ಮಾಡಿ ಅವರು ಮಾತನಾಡುತ್ತಿದ್ದರು.
ಜಾತಿ, ಮತಗಳನ್ನು ಹೊರತು ಪಡಿಸಿದ ಸಂಸ್ಕೃತಿ ನಮ್ಮದು. ಆದರೆ ಸಾಂಸ್ಕೃತಿಕ ವಕ್ತಾರರೆಂದು ಹೇಳಿ ಕೊಂಡು ಏಕಸಂಸ್ಕೃತಿಯನ್ನು ಹೇರುವ ಕಾರ್ಯವನ್ನು ಕರಾವಳಿಯಲ್ಲಿ ಮಾಡಲಾಗುತ್ತಿದೆ. ಈ ಮೂಲಕ ಸಾಂಸ್ಕೃತಿಕ ರಾಜಕೀಯವನ್ನು ಮಾಡಲಾಗುತ್ತಿದೆ ಎಂದರು.
ಜಾನಪದ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕೇ ಎಂಬುದು ನಮ್ಮ ಮುಂದಿರುವ ಬಹಳ ದೊಡ್ಡ ಪ್ರಶ್ನೆಯಾಗಿದೆ. ಉಳಿಸುವುದಾದರೂ ಯಾರು?, ವಿದ್ವಾಂಸರೇ ಅಥವಾ ಕಲಾವಿದರೇ?. ಡೋಲು ಬಾರಿ ಸುವ, ಭೂತ ಕಟ್ಟುವವನ ಮಗ ಇನ್ನು ಕೂಡ ಅದೇ ಕಷ್ಟವನ್ನು ಅನು ಭವಿಸಿ ನಮ್ಮ ಜಾನಪದ ಸಂಸ್ಕೃತಿಯನ್ನು ಉಳಿಸಬೇಕೇ? ಇದು ಸರಿಯಾದ ಆಲೋಚನೆ ಅಲ್ಲ. ಇದು ನಾವು ನಮಗೆ ಮಾಡುವ ಆತ್ಮ ವಂಚ ನೆಯಾಗಿದೆ ಎಂದವರು ಹೇಳಿದರು.
ಜಾನಪದ ವಿದ್ವಾಂಸ ಡಾ. ಪುರುಷೋತ್ತಮ ಬಿಳಿಮಲೆಯವರಿಗೆ ‘ಜಾನಪದ ವಿದ್ವಾಂಸ’ ಹಾಗೂ ಡೋಲು ಕಲಾವಿದ ಗುರುವ ಅವರಿಗೆ ‘ಜಾನಪದ ಕಲಾವಿದ’ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಬನ್ನಂಜೆ ಬಾಬು ಅಮೀನ್‌ರ ‘ದೈವಾರಾಧನೆ: ಜಿಜ್ಞಾಸೆಗಳು’ ಕೃತಿಯನ್ನು ಬಿಡುಗಡೆಗೊಳಿಸಲಾಯಿತು.
ಉಡುಪಿ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್‌ಕುಮಾರ್, ಯುವವಾಹಿನಿ ಅಧ್ಯಕ್ಷ ರಘುನಾಥ್ ಮಾಬಿಯಾನ್, ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ ಡಾ.ವೈ.ಎನ್.ಶೆಟ್ಟಿ ಉಪಸ್ಥಿತರಿದ್ದರು. ಡಾ. ನಿಕೇತನ ಪುಸ್ತಕ ಪರಿಚಯ ಮಾಡಿದರು.
ಪ್ರಕಾಶನದ ಅಧ್ಯಕ್ಷ ಡಾ.ಗಣನಾಥ ಎಕ್ಕಾರು ಸ್ವಾಗತಿಸಿ, ನವೀನ್ ಅಮೀನ್ ತೋನ್ಸೆ ವಂದಿಸಿದರು. ಬಾಲಕೃಷ್ಣ ಕೊಡವೂರು ಕಾರ್ಯಕ್ರಮ ನಿರೂ ಪಿಸಿದರು.
ಭಾಷೆ ಅಭಿವೃದ್ಧಿಗೆ ನೀತಿಯೇ ಇಲ್ಲ
ಶಾಸ್ತ್ರೀಯ ಸ್ಥಾನಮಾನ ಪಡೆದಿರುವ ಸಂಸ್ಕೃತ ಭಾಷೆಗೆ 480 ಕೋಟಿ ರೂ., ತಮಿಳಿಗೆ 40 ಕೋ.ರೂ., ಕನ್ನಡಕ್ಕೆ 6 ಕೋ.ರೂ. ಅನುದಾನವನ್ನು ಕೇಂದ್ರ ಸರಕಾರ ಬಿಡುಗಡೆ ಮಾಡಿದೆ. ಸಂಸ್ಕೃತದಲ್ಲಿ ಪೂಜೆ ಮಾಡುವ ಪುರೋಹಿತ ಆ ಬಗ್ಗೆ ಪ್ರಮಾಣಪತ್ರ ಒದಗಿಸಿದರೆ ಆತನಿಗೆ ತಿಂಗಳಿಗೆ 5 ಸಾವಿರ ರೂ. ವೇತನ ಬರುವ ವ್ಯವಸ್ಥೆ ನಮ್ಮಲ್ಲಿ ಇದೆ. ಆದರೆ ವರ್ಷಪೂರ್ತಿ ಕಲೆ ಸಂಸ್ಕೃತಿ ಭಾಷೆಗಾಗಿ ದುಡಿಯುವ ತಳಮಟ್ಟದ ಕಲಾವಿದರಿಗೆ ಯಾವುದೇ ಮನ್ನಣೆ ಇಲ್ಲ. ಕೇಂದ್ರ ಸರಕಾರಕ್ಕೆ ಭಾಷೆ ಅಭಿವೃದ್ಧಿ ಬಗ್ಗೆ ಸರಿಯಾದ ನೀತಿ ಇಲ್ಲ. ಹಾಗಾಗಿ ನಮ್ಮಲ್ಲಿ ಭಾಷೆಗಳು ಸಾಯುತ್ತಿವೆ. ಭಾಷೆ ಸತ್ತರೆ ಸಂಸ್ಕೃತಿ ಸತ್ತಂತೆ, ಸಂಸ್ಕೃತಿ ಸತ್ತರೆ ಇಡೀ ಸಮುದಾಯವೇ ನಾಶವಾದಂತೆ.
ಧರ್ಮಾಧಾರಿತ ದೇಶವಾಗುವತ್ತ ಭಾರತ
 ಧರ್ಮಾಧಾರಿತ ದೇಶ ಉಳಿಯಲು ಸಾಧ್ಯವಿಲ್ಲ. ಭಾರತ ಇಂದು ಅತ್ತ ಕಡೆ ಸಾಗುತ್ತಿದೆ. ಭಾರತದ ರಾಷ್ಟ್ರೀಯತೆ ಎಂಬುದು ಗಡಿಗೆ ಸೀಮಿತವಾಗಬಾರದು. ದೇಶದಲ್ಲಿ ದಲಿತರಿಗೆ ಆಗು ತ್ತಿರುವ ಅನ್ಯಾಯವೇ ನಿಜವಾದ ರಾಷ್ಟ್ರದ್ರೋಹ. ಭಾರತೀಯ ಸಂಸ್ಕೃತಿ ಯನ್ನು ಮರು ಕಟ್ಟುವ ಕೆಲಸವನ್ನು ನಾವು ಮಾಡಬೇಕಾಗಿದೆ.
-ಡಾ. ಪುರುಷೋತ್ತಮ ಬಿಳಿಮಲೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News