ಪತ್ರಕರ್ತನಿಗೆ ಬೆದರಿಕೆ-ಹಲ್ಲೆ: ಖಂಡನೆ
Update: 2016-02-27 23:53 IST
ಬೆಳ್ತಂಗಡಿ, ಫೆ.27: ಪತ್ರಕರ್ತ ಇಬ್ರಾಹೀಂ ಯಾನೆ ಆಸಿಫ್ ಸರಳಿಕಟ್ಟೆ ಎಂಬವರಿಗೆ ದುಷ್ಕರ್ಮಿಗಳು ನಡೆಸಿದ ಹಲ್ಲೆಯನ್ನು ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘ ತೀವ್ರವಾಗಿ ಖಂಡಿಸಿದೆ.
ಫೆ.26ರಂದು ಅವರು ಕರ್ತವ್ಯ ಮುಗಿಸಿ ಬೆಳ್ತಂಗಡಿಯಿಂದ ಮನೆಗೆ ಹೋಗುವಾಗ ಸರಳಿಕಟ್ಟೆ ಎಂಬಲ್ಲಿ ದುಷ್ಕರ್ಮಿಗಳು ಅಡ್ಡಕಟ್ಟಿ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆಯನ್ನು ಖಂಡಿಸಿರುವ ಸಂಘದ ಸದಸ್ಯರು ಶನಿವಾರ ರಾಜ್ಯ ಗೃಹಸಚಿವರಿಗೆ, ತಹಶೀಲ್ದಾರರಿಗೆ ಹಾಗೂ ಶಾಸಕರಿಗೆ ಮನವಿ ಸಲ್ಲಿಸಿದ್ದಾರೆ. ಪೊಲೀಸ್ ಇಲಾಖೆ ಕೂಡಲೇ ದುಷ್ಕರ್ಮಿಗಳನ್ನು ಬಂಧಿಸಿ ತಾಲೂಕಿನ ಪತ್ರಕರ್ತರು ನಿರ್ಭೀತಿಯಿಂದ ಕೆಲಸ ಮಾಡಲು ಅವಕಾಶ ಮಾಡಿಕೊಡುವಂತೆ ಮನವಿಯಲ್ಲಿ ವಿನಂತಿಸಲಾಗಿದೆ.