ಪೂಜಾರಿಯ ಉಡಾಫೆ ಉತ್ತರದಿಂದ ಹೊರನಡೆದ ಪತ್ರಕರ್ತರು
Update: 2016-02-28 00:42 IST
ಜನಾರ್ದನ ಪೂಜಾರಿಯವರು ಸುದ್ದಿಗೋಷ್ಠಿ ಮುಗಿಸಿದ ನಂತರ ಪತ್ರಕರ್ತರೊಬ್ಬರು ಪ್ರಶ್ನೆ ಕೇಳಲು ಮುಂದಾದಾಗ ಉಡಾಫೆಯಾಗಿ ವರ್ತಿಸಿದ ಘಟನೆ ಇಂದು ನಡೆಯಿತು. ಪತ್ರಕರ್ತ ಪ್ರಶ್ನೆ ಕೇಳಲು ಆರಂಭಿಸಿದ ಕೂಡಲೆ ಪತ್ರಕರ್ತನಿಗೆ ಅವಮಾನವಾಗುವ ರೀತಿಯಲ್ಲಿ ಪ್ರಶ್ನೆ ಕೇಳಲು ಬಿಡದೆ ಬೇರೆಯವರಲ್ಲಿ ಪ್ರಶ್ನೆ ಕೇಳಿ ಎಂದರು. ಈ ಸಂದರ್ಭ ಪತ್ರಕರ್ತ ಮತ್ತು ಜನಾರ್ದನ ಪೂಜಾರಿ ನಡುವೆ ಮಾತಿನ ಚಕಮಕಿ ನಡೆಯಿತು. ಜನಾರ್ದನ ಪೂಜಾರಿಯವರ ನಡವಳಿಕೆಯಿಂದ ಅಸಮಾಧಾನಗೊಂಡ ಅಲ್ಲಿದ್ದ ಎಲ್ಲ ಪತ್ರಕರ್ತರು ಗೋಷ್ಠಿಯಿಂದ ಎದ್ದು ಹೊರನಡೆದರು.