ಕಾಸರಗೋಡು: ಮೆಗಾ ಉದ್ಯೋಗ ಮೇಳ
Update: 2016-02-28 10:54 IST
ಕಾಸರಗೋಡು, ಫೆ.28: ಕೇಂದ್ರ ಉದ್ಯೋಗ ಸಚಿವಾಲಯ ಮತ್ತು ಕಾಸರಗೋಡು ವಿವೇಕಾನಂದ ಎಜುಕೇಶನಲ್ ಹಾಗೂ ಚಾರಿಟೇಬಲ್ ಟ್ರಸ್ಟ್ , ಯುವ ಕಿರಣ್ ಜಂಟಿ ಆಶ್ರಯದಲ್ಲಿ ವಿದ್ಯಾನಗರ ಚಿನ್ಮಯ ವಿದ್ಯಾಲಯದಲ್ಲಿ ಇಂದು ಮೆಗಾ ಉದ್ಯೋಗ ಮೇಳ ಅಯೋಜಿಸಿದ್ದು , ಸಾವಿರಾರು ನಿರುದ್ಯೋಗಿಗಳು ಭಾಗವಹಿಸಿದ್ದಾರೆ.
ವಿವಿಧ ಶಿಕ್ಷಣ ಅರ್ಹತೆ ಹೊಂದಿದವರು ಹಾಗೂ ಇತರರು ಆಗಮಿಸಿ ಸಂದರ್ಶನದಲ್ಲಿ ಪಾಲ್ಗೊಂಡಿದ್ದಾರೆ .
ಖಾಸಗಿ , ಸಾರ್ವಜನಿಕ ವಲಯದ ಸಂಸ್ಥೆಗಳು ಉದ್ಯೋಗಾ ಕಾಂಕ್ಷಿ ಗಳನ್ನು ಆಹ್ವಾನಿಸಿದೆ. 2100 ರಷ್ಟು ಮಂದಿಗೆ ಉದ್ಯೋಗಗಳು ಕಾಯ್ದಿರಿಸಲಾಗಿದೆ.
ರಾಜ್ಯ ಹಾಗೂ ಹೊರ ರಾಜ್ಯದ ಸಂಸ್ಥೆಗಳು ಇದರಲ್ಲಿ ಒಳಗೊಂಡಿದೆ.