ಅಮಲು ಭರಿಸುವ ಔಷಧ ಹಾಕಿ ಅತ್ಯಾಚಾರ: ಮಹಿಳೆಯಿಂದ ದೂರು
Update: 2016-02-28 11:55 IST
ಫಾಜಿಲ್ಕಾ, ಫೆ.28: ಪತೆಹಾಬಾದ್(ಹರಿಯಾಣ) ಮಹಿಳೆಯೊಬ್ಬರು ಇಬ್ಬರು ಅಪರಿಚಿತ ವ್ಯಕ್ತಿಗಳು ಅತ್ಯಾಚಾರವೆಸಗಿದ್ದಾರೆ ಎಂದು ದೂರು ನೀಡಿದ್ದಾರೆ.
ಮಹಿಳೆ ಸ್ಥಳೀಯ ನಾಗರಿಕ ಆಸ್ಪತ್ರೆಯೊಂದಕ್ಕೆ ಮೆಡಿಕಲ್ ಚೆಕಪ್‌ಗಾಗಿ ಬಂದಿದ್ದರು. ಪೊಲೀಸರಿಗೆ ನೀಡಿದ ದೂರಿನಲ್ಲಿ ತಾನು ಜಲಲಾಬಾದ್‌ನ ಆರಾಯಿಯ ಗ್ರಾಮದವಳಾಗಿದ್ದು ಸಂಬಂಧಿಕರಲ್ಲಿಗೆ ಹೋಗಿದ್ದೆ. ನಿನ್ನೆ ಸಾಯಂಕಾಲ ಫತೆಹಾಬಾದ್‌ಗೆ ಹೋಗಲು ಫಾಜಿಲ್ಕಾ ರೈಲ್ವೆ ಸ್ಟೇಶನ್‌ನಲ್ಲಿ ನಿಂತಿದ್ದಾಗ ಇಬ್ಬರು ಅಪರಿಚಿತ ವ್ಯಕ್ತಿಗಳು ಬಳಿಗೆ ಬಂದು ಮಾತಾಡಿದ್ದು ನಂತರ ಚಾ ಕುಡಿಸಿದ್ದರು. ಅದರಲ್ಲಿ ಯಾವುದೋ ಅಮಲು ಬರುವ ಔಷಧ ಹಾಕಿ, ತಾನು ಪ್ರಜ್ಞಾಹೀನ ಳಾದಾಗ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ. ಪ್ರಜ್ಞೆ ಬಂದಾಗ ನಾನು ಬೊಬ್ಬೆ ಹೊಡೆದಿದ್ದು, ಈ ಸಂದರ್ಭ ಅಪರಿಚಿತರು ತನ್ನನ್ನು ಬಿಟ್ಟು ಓಡಿಹೋಗಿದ್ದರು ಎಂದು ಪೊಲೀಸರಿಗೆ ತಿಳಿಸಿದ್ದಾರೆ.