×
Ad

ಶಾಸಕಿಯೊಂದಿಗೆ ಅಶ್ಲೀಲ ವರ್ತನೆ: ಒಪಿ ಶರ್ಮರ ಶಾಸಕತ್ವ ರದ್ದಾಗುವ ಸಾಧ್ಯತೆ!

Update: 2016-02-28 12:06 IST

ಹೊಸದಿಲ್ಲಿ, ಫೆ.28: ಮಹಿಳಾ ಎಂಎಲ್‌ಎ ಅಲ್ಕಾ ಲಾಂಬಾ ವಿರುದ್ಧ ಅಶ್ಲೀಲ ವರ್ತನೆ ನಡೆಸಿದ ದಿಲ್ಲಿ ಬಿಜೆಪಿ ಎಂಎಲ್‌ಎ ಒಪಿ ಶರ್ಮರ ವಿಧಾನಸಭಾ ಸದಸ್ಯತನ ರದ್ದುಗೊಳ್ಳುವ ಎಲ್ಲ ಸಾಧ್ಯತೆಗಳು ಸೃಷ್ಟಿಯಾಗಿದೆ.

ವಿಧಾನಸಭೆಯ ಎತಿಕ್ಸ್ ಸಮಿತಿ ಶರ್ಮರ ವಿಧಾನಸಭಾ ಸದಸ್ಯತನವನ್ನು ರದ್ದುಗೊಳಿಸಲು ಶಿಫಾರಸು ಮಾಡಿದೆ. ಸಮಿತಿಯ ಶಿಫಾರಸು ವಿಧಾನಸಭೆಯ ಮುಂದಿನ ಅಧಿವೇಶನದಲ್ಲಿ ಚರ್ಚೆಗೆ ಬರಲಿದೆ.

ಅಲ್ಕಾ ಲಾಂಬಾರ ವಿರುದ್ಧ ಅಶ್ಲೀಲ ಪರಾಮರ್ಶೆ ನಡೆಸಿದ ಹೆಸರಿನಲ್ಲಿ ಒಪಿ ಶರ್ಮರನ್ನು ಚಳಿಗಾಲದ ಅಧಿವೇಶನದ ವೇಳೆ ಸ್ಪೀಕರ್ ಅಮಾನತುಗೊಳಿಸಿದ್ದರು.

ಎರಡೂವರೆ ತಿಂಗಳ ತನಿಖೆಯ ನಂತರ ಸ್ಪೀಕರ್ ರಾಂ ನಿವಾಸ್ ಗೋಯಲ್‌ರಿಗೆ ಎತಿಕ್ಸ್ ಸಮಿತಿ ವರದಿ ಸಲ್ಲಿಸಿದೆ. ಕೆಟ್ಟ ಪರಾಮರ್ಶೆಗಾಗಿ ಹಲವಾರು ಬಾರಿ ಶರ್ಮರಲ್ಲಿ ಕ್ಷಮೆ ಕೇಳಲು ಹೇಳಿದರೂ ಅವರು ಸಿದ್ಧರಾಗಿಲ್ಲ. ಆದ್ದರಿಂದ ಅವರನ್ನು ವಿಧಾನಸಭಾ ಸದಸ್ಯತನಕ್ಕೆ ಅಯೋಗ್ಯಗೊಳಿಸಲು ಸಮಿತಿ ಶಿಫಾರಸು ಮಾಡಿದೆ ಎಂದು ಸೂಚನೆ ಲಭಿಸಿದೆ.

ಶರ್ಮರಿಗೆ ವಿಷಾದ ಸೂಚಿಸಲು ಇನ್ನೊಂದು ಅವಕಾಶವನ್ನು ಸ್ಪೀಕರ್ ನೀಡಲಿದ್ದಾರೆ. ಜೆಎನ್‌ಯು ಪ್ರಕರಣದಲ್ಲಿ ಕನ್ಹಯ್ಯಾ ಕುಮಾರ್‌ರನ್ನು ಪಟಿಯಾಲ ಕೋರ್ಟ್‌ನಲ್ಲಿ ಹಾಜರುಪಡಿಸಿದಾಗ ಕೋರ್ಟ್ ಪರಿಸರದಲ್ಲಿ ಹಲ್ಲೆ ನಡೆಸಿದ ಆರೋಪದಲ್ಲಿ ಕೂಡ ಪೊಲೀಸರು ಈ ಹಿಂದೆ ಶರ್ಮರನ್ನು ಬಂಧಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News