ಅವರಲ್ಲೊಬ್ಬನ ತಾಯಿಯ ಸ್ನಾನದ ದೃಶ್ಯವೇ ಕಂಡಾಗ ಜಗಳ: ಚೂರಿ ಇರಿತ, ಆಸ್ಪತ್ರೆಗೆ ದಾಖಲು!
ತೊಡುಪುಯ, ಫೆ.28: ಸ್ನಾನ ಮಾಡುವ ಸ್ಥಳದಲ್ಲಿ ಕ್ಯಾಮರಾವನ್ನು ಅಡಗಿಸಿಟ್ಟು ಅದರಲ್ಲಿ ದಾಖಲಾದ ದೃಶ್ಯಗಳನ್ನು ನೋಡಲು ಬಂದ ಯುವಕನಿಗೆ ಸ್ವತಃ ತನ್ನ ತಾಯಿ ಸ್ನಾನ ಮಾಡುವ ದೃಶ್ಯ ಕಂಡು ಬಂದಾಗ ಜಗಳಕ್ಕಿಳಿದಿದ್ದಾನೆ.
ಜಗಳ ತಾರಕಕ್ಕೇರಿ ಕೊನೆಗೆ ಚಾಕು ಇರಿತ ನಡೆಯಿತು. ಗಾಯಗೊಂಡ ಯುವಕನನ್ನು ತೊಡುಪುಯದ ಆಸ್ಪತ್ರೆಗೆ ಸೇರಿಸಲಾಗಿದ್ದು, ಅವನೀಗ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ತೊಡುಪುಯಕ್ಕೆ ಸಮೀಪದ ಪಂಚಾಯತ್‌ವೊಂದರ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದ್ದು, ಇಲ್ಲಿಗೆ ಸಮೀಪದ ಸ್ನಾನ ಮಾಡುವ ಸ್ಥಳವೊಂದರ ಸಮೀಪದ ತೆಂಗಿನ ಮರದಲ್ಲಿ ಕ್ಯಾಮರಾವನ್ನು ಅಡಗಿಸಿಟ್ಟು ಕೆಲವು ಯುವಕರು ಸ್ನಾನಕ್ಕೆ ಬರುವವರ ದೃಶ್ಯಗಳನ್ನು ದಾಖಲಿಸುತ್ತಿದ್ದರು. ಅದನ್ನು ದಿನಾಲೂ ಕಂಪ್ಯೂಟರ್‌ನಲ್ಲಿ ಹಾಕಿ ನೋಡುವುದು ಇಲ್ಲಿ ಕೆಲವು ಯುವಕರ ಪರಿಪಾಠವಾಗಿತ್ತು.
ರಾತ್ರಿ ವೇಳೆ ಸಮೀಪದ ಕ್ಲಬ್‌ನಲ್ಲಿರುವ ಕಂಪ್ಯೂಟರ್‌ನಲ್ಲಿ ನೋಡಿ ಮನರಂಜನೆ ಅನುಭವಿಸುತ್ತಿದ್ದರು. ದುರದೃಷ್ಟಕ್ಕೆ ಅಂದು ಅವರಲ್ಲೊಬ್ಬನ ತಾಯಿ ಸ್ನಾನ ಮಾಡುವ ದೃಶ್ಯ ಕ್ಯಾಮರಾದಲ್ಲಿ ದಾಖಲಾಗಿತ್ತು. ಅಮ್ಮ ಸ್ನಾನ ಮಾಡುವ ದೃಶ್ಯ ಕ್ಯಾಮರಾದಲ್ಲಿ ದಾಖಲಾಗಿರುವುದನ್ನು ಕಂಡ ಯುವಕ ಉರಿದೆದ್ದು ಜಗಳ ತೆಗೆದಿದ್ದಾನೆ.
ಜಗಳದಲ್ಲಿ ಚಾಕು ಪ್ರಹಾರವಾಗಿದೆ. ನಂತರ ಯುವಕನನ್ನು ಆಸ್ಪತ್ರೆಗೆ ಸೇರಿಸಲಾಯಿತು. ಸ್ಥಳೀಯ ಯುವ ಸಂಘಟನೆಯ ಸಕ್ರಿಯ ಕಾರ್ಯಕರ್ತರ ದುಷ್ಕೃತ್ಯವಿದೆಂದು ವರದಿಯಾಗಿದೆ.