ಎಸ್‌ವೈಎಸ್ ವತಿಯಿಂದ ಮುಡಿಪುವಿನಲ್ಲಿ 13 ಜೋಡಿಗಳ ಉಚಿತ ಸಾಮೂಹಿಕ ವಿವಾಹ ಸಮಾರಂಭ
ಕೊಣಾಜೆ: ಕರ್ನಾಟಕ ರಾಜ್ಯ ಸುನ್ನೀ ಯುವಜನ ಸೇವಾ ಸಂಘ (ಎಸ್‌ವೈಎಸ್) ಮುಡಿಪು ಸೆಂಟರ್ ಇದರ ಆಶ್ರಯದಲ್ಲಿ 5ನೇ ವರ್ಷದ 13 ಜೋಡಿಗಳ ಉಚಿತ ಸಾಮೂಹಿಕ ವಿವಾಹ ಸಮಾರಂಭವು ಮುಡಿಪು ಬಾಳೆಪುಣಿ ಪಂಚಾಯಿತಿ ಮೈದಾನದ ತಾಜುಲ್ ಉಲಮಾ ವೇದಿಕೆಯಲ್ಲಿ ಭಾನುವಾರ ನಡೆಯಿತು.
ವಿವಾಹ ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅಖಿಲಾ ಭಾರತ ಸುನ್ನೀ ಜಂಇಯತ್ತುಲ್ ಉಲಮಾ ಇದರ ಪ್ರದಾನ ಕಾರ್ಯದರ್ಶಿ ಸುಲ್ತಾನುಲ್ ಉಲಮಾ ಎ.ಪಿ.ಅಬೂಬಕ್ಕರ್ ಮುಸ್ಲಿಯಾರ್, ಮನುಷ್ಯ ಮನುಷ್ಯನಾಗಿ ಜೀವಿಸಬೇಕಾದರೆ ಸಮುದಾಯದಲ್ಲಿರುವ ಕಡ್ಡಾಯ ಕಾರ್ಯಗಳನ್ನು ನೆರವೇರಿಸಬೇಕು. ಉಚಿತ ಸಾಮೂಹಿಕ ವಿವಾಹದಂತಹ ಉತ್ತಮ ಸಮಾಜಮುಖೀ ಕಾರ್ಯಗಳಿಗೆ ಪ್ರೋತ್ಸಾಹ ನೀಡಬೇಕು. ಇಂತಹ ಕಾರ್ಯಕ್ರಮಗಳಿಂದ ಬಹಳಷ್ಟು ಬಡಕುಟುಂಬಗಳ ಸಮಸ್ಯೆಗಳು ನಿವಾರಣೆಯಾಗಲು ಸಾಧ್ಯ ಎಂದು ಹೇಳಿದರು.
ಸಾಮೂಹಿಕ ವಿವಾಹ ಸಮಾರಂಭದಲ್ಲಿ ಉಮ್ಮರುಲ್ ಫಾರೂಕ್ ಬೋಳಿಯಾರ್-ಜಮೀಲಾ ಕೊಳಕೆ, ಉಸ್ಮಾನ್ ಬರುವ-ರಮ್ಲತ್ ಸಾಬಿರಾ, ಮಹಮ್ಮದ್ ಅಬ್ದುಲ್ಲಾ ರಾಮನಗರ-ಝೀನತ್ ಬಡಕಜೆಕಾರು, ಮಹಮ್ಮದ್ ರಪೀಕ್ ಕಿನ್ಯಾ- ಆಯಿಶಾ ಕೆದುಮೂಲೆ, ಸಮೀರ್ ಗೋಳಿತೊಟ್ಟು ಪುತ್ತೂರು-ಅಫ್ಸಾ ಮುದುಂಗಾರು ಕಟ್ಟೆ, ಮಹಮ್ಮದ್ ಸಿರಾರ್ ಉಪ್ಪಲ-ದಿಲ್ಶಾದ್ ಉಳ್ಳಾಲ, ಇಸ್ಮಾಯಿಲ್ ಅರಸಿಕೆರೆ-ಆಮಿನಾ ಬಜಾಲ್, ಅಬ್ದುಲ್ಲಾ ಲತೀಪ್ ಬರುವ- ಸಂಶಾದ್ ಪುತ್ತೂರು, ಮಹಮ್ಮದ್ ನವಾರ್ ಪಜೀರು-ಆಸ್ಮಿನಾ ಕೊಕ್ಕಡ, ಮಹಮ್ಮದ್ ಶಬೀರ್ ರಂತಡ್ಕ-ಶಮಿನಾ ಹೂಹಾಕುವಕಲ್ಲು, ಮಹಮ್ಮದ್ ಇಕ್ಬಾಲ್ ಮಲಾರ್-ರುಬಿನಾ ಹರೇಕಳ, ಸಿದ್ದೀಕ್ ಬೆಳ್ತಂಗಡಿ-ಹಸೀನಾ ಬೆಳ್ತಂಗಡಿ, ಅಬ್ದುಲ್ ಮಜೀದ್ ತಲಕಿ-ಬುಶ್ರಾ ಮೆದು ಹೀಗೆ ಒಟ್ಟು 13 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ಯು.ಟಿ.ಖಾದರ್, ಅಲಿಕುಂಞಿ ಉಸ್ತಾದ್ ಶಿರಿಯಾ, ಸುಲ್ತಾನುಲ್ ಅಬ್ಬಾಸ್ ಉಸ್ತಾದ್ ಅಲ್‌ಮದೀನ, ಎಸ್‌ವೈಎಸ್ ರಾಜ್ಯಾಧ್ಯಕ್ಷ ಹುಸೈನ್ ಸಅದಿ ಕೆ.ಸಿ.ರೋಡ್, ದೇರಳಕಟ್ಟೆಯ ಉಂಞಿ ಹಾಜಿ, ದೇರಳಕಟ್ಟೆ ಎಸ್‌ವೈಎಸ್ ಅಧ್ಯಕ್ಷ ಏಷ್ಯನ್ ಬಾವು ಹಾಜಿ, ಮುಡಿಪು ಸೆಂಟರ್ ಎಸ್‌ವೈಎಸ್ ಅಧ್ಯಕ್ಷ ಎಸ್.ಕೆ.ಖಾದರ್ ಹಾಜಿ, ಸುನ್ನಿ ಒಕ್ಕೂಟದ ಪ್ರದಾನ ಕಾರ್ಯದರ್ಶಿ ಕೆ.ಇ.ಅಬ್ದುಲ್ ಖಾದರ್ ಸಾಲೆತ್ತೂರು, ಎಸ್‌ವೈಎಸ್ ಜಿಲ್ಲಾಧ್ಯಕ್ಷ ಉಸ್ಮಾನ್ ಸಅದಿ, ಮುಡಿಪು ಎಸ್‌ವೈಎಸ್ ಮ್ಯಾರೆಜ್ ಸಮಿತಿಯ ಸಂಘಟಕ ಸಿದ್ದೀಕ್ ಸಖಾಫಿ ಮುಳೂರು, ಅಧ್ಯಕ್ಷ ಅಬೂಬಕ್ಕರ್ ಮಧ್ಯನಡ್ಕ, ಮುಡಿಪು ಎಸ್‌ವೈಎಸ್ ಪ್ರದಾನ ಕಾರ್ಯದರ್ಶಿ ಸಿ.ಐ.ಬಾವು ಹಾಜಿ, ಮುಡಿಪು ಸುನ್ನಿ ರೇಂಜ್ ಅಧ್ಯಕ್ಷ ಕೆ.ಬಿ.ಅಬ್ದುಲ್ ರಹಿಮಾನ್ ಮದನಿ ಮಧ್ಯನಡ್ಕ, ಮುಡಿಪು ಸಂಯುಕ್ತ ಜಮಾಅತ್‌ನ ಪ್ರದಾನ ಕಾರ್ಯದರ್ಶಿ ಟಿ.ಎ.ಉಮ್ಮರ್ ಸಖಾಫಿ ತಲೆಕ್ಕಿ, ಹಸನ್ ಹಾಜಿ ಮುಡಿಪು, ಹೈದರ್ ಪರ್ತಿಪ್ಪಾಡಿ, ಸಂತೋಷ್ ಕುಮಾರ್ ಭೋಳಿಯಾರ್, ರೆಹಮಾನ್ ಕಣಚೂರು, ಡಾ.ಹುಸೈನ್ ಸಖಾಫಿ ಚುಳ್ಳಿಕ್ಕೋಡ್, ಮಹಮ್ಮದ್ ಹನೀಫ್ ಗೋಲ್ಡ್‌ಕಿಂಗ್ ಮುಂತಾದವರು ಉಪಸ್ಥಿತರಿದ್ದರು.
ಆದೂರ್ ತಂಞಳ್ ದುವಾ ನೆರವೇರಿಸಿದರು. ಸಿದ್ದೀಕ್ ಸಖಾಫಿ ಮೂಳೂರು ಕಾರ್ಯಕ್ರಮದಲ್ಲಿ ಸ್ವಾಗತಿಸಿದರು.