ಮಾ,6ರಿಂದ ಸುಳ್ಯದಲ್ಲಿ ಅಂತರಾಜ್ಯ ಕ್ರಿಕೆಟ್
ಸುಳ್ಯ: ಬ್ಲೂ ಗೈಸ್ ಜಟ್ಟಿಪಳ್ಳ ಇದರ ವತಿಯಿಂದ ಅಂತರ್ ರಾಜ್ಯ ಮಟ್ಟದ ಮುಕ್ತ ಕ್ರಿಕೆಟ್ ಪಂದ್ಯಾಟ ಮಾರ್ಚ್ 5ರಿಂದ 7ರವೆಗೆ ಸುಳ್ಯದ ಸರಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯಲಿದೆ.
ಸಂಸ್ಥೆಯ ಸಲಹೆಗಾರರಾದ ರಶೀದ್ ಜಟ್ಟಿಪಳ್ಳ ಪತ್ರಿಕಾ ಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಪಂದ್ಯಾಟದಲ್ಲಿ ಸುಮಾರು ಇಪ್ಪತ್ತಾರು ತಂಡಗಳು ಭಾಗವಹಿಸಲಿದ್ದು, ಚೆನ್ನೈ, ಕೇರಳ, ದಾವಣಗೆರೆ, ಉಡುಪಿ, ಬೆಂಗಳೂರು ಸೇರಿದಂತೆ ಪ್ರತಿಷ್ಠಿತ ತಂಡಗಳು ಭಾಗವಹಿಸಲಿವೆ. ಅರವತ್ತು ಸಾವಿರ ರೂ. ಪ್ರಥಮ ಬಹುಮಾನವಾಗಿದ್ದು, 25 ಸಾವಿರ ರೂ.ಮೌಲ್ಯದ ಆಕರ್ಷಕ ಟ್ರೋಫಿಯನ್ನು ನೀಡಲಾಗುವುದು ಎಂದವರು ಹೇಳಿದರು. ಸುಳ್ಯದಲ್ಲಿ ವ್ಯವಸ್ಥಿತವಾದ ಕ್ರಿಕೆಟ್ ಮೈದಾನವಿಲ್ಲ. ಹಾಗಾಗಿ ಈ ಕುರಿತು ಜಾಗೃತಿ ಮಾಡಿಸುವ ಕೆಲಸವನ್ನು ಈ ಸಂದರ್ಭದಲ್ಲಿ ಮಾಡಲಾಗುವುದು ಎಂದವರು ಹೇಳಿದರು.
ಬ್ಲೂ ಗೈಸ್ ಗೌರವಾಧ್ಯಕ್ಷ ಬಿ.ಎಂ.ಮಹಮ್ಮದ್, ಅಧ್ಯಕ್ಷ ರಫೀಕ್ ಜಟ್ಟಿಪಳ್ಳ, ಸಂಚಾಲಕ ತೌಹೀದ್ ರಹಮಾನ್, ಸಾಮೂಹಿಕ ವಿವಾಹ ಸ್ವಾಗತ ಸಮಿತಿ ಅಧ್ಯಕ್ಷ ಎನ್.ಎ.ಅಬ್ದುಲ್ಲಾ ಪತ್ರಿಕಾ ಗೋಷ್ಠಿಯಲ್ಲಿದ್ದರು.