ಮಾ.6ರಿಂದ ಪೇರಡ್ಕ ಗೂನಡ್ಕ ಉರೂಸ್
Update: 2016-02-28 16:10 IST
ಸುಳ್ಯ: ಪೇರಡ್ಕ-ಗೂನಡ್ಕ ವಲಿಯುಲ್ಲಾಹಿ ದರ್ಗಾ ಶರೀಪ್ ವತಿಯಿಂದ ಉರೂಸ್ ಸಮಾರಂಭ ಮತ್ತು ಮೂರು ದಿನಗಳ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮವು ಮಾರ್ಚ್ 4ರಿಂದ 6ರವರೆಗೆ ನಡೆಯಲಿದೆ. ಉರೂಸ್ ಸಮಿತಿ ಅಧ್ಯಕ್ಷ ಟಿ.ಎಂ.ಶಹೀದ್ ಹಾಗೂ ಪ್ರಧಾನ ಕಾರ್ಯದರ್ಶಿ ಜಿ.ಕೆ. ಹಮೀದ್ ಪತ್ರಿಕಾ ಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಮಾಚ್‌ರ್ ನಾಲ್ಕರಂದು ಜುಮಾ ನಮಾಜಿನ ಬಳಿಕ ಉರೂಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಮಾ.6 ರಂದು ಸಂಜೆ ನಡೆಯುವ ಸರ್ವಧರ್ಮ ಸಮ್ಮೇಳನವಮನ್ನು ನಿತ್ಯಾನಂದ ಮುಂಡೋಡಿ ಉದ್ಘಾಟಿಸಲಿದ್ದು ವಿವಿಧ ಕ್ಷೇತ್ರಗಳ ಗಣ್ಯರು ಪಾಲ್ಗೋಳ್ಳಲಿದ್ದಾರೆ. ಬಳಿಕ ಹಾಫಿಳ್ ಇ.ಪಿ. ಅಬೂಬಕ್ಕರ್ ಅಲ್ ಖಾಸಿಮಿ ಪತ್ತಾನಪುರಂ ಕೊಲ್ಲಂ ಇವರಿಂದ ಮುಖ್ಯ ಪ್ರಭಾಷಣ ನಡೆಯಲಿದೆ ಎಂದವರು ತಿಳಿಸಿದರು.