×
Ad

ಫಿಲೋಮಿನಾ ಕಾಲೇಜಿಗೆ ಇಕೊ-ಆರ್ಟ್ಸ್ ಫೆಸ್ಟ್ ನಲ್ಲಿ ಸಮಗ್ರ ಪ್ರಶಸ್ತಿ

Update: 2016-02-28 16:58 IST

ಪುತ್ತೂರು,ಫೆ28: ಇಲ್ಲಿಯ ಸಂತ ಫಿಲೋಮಿನಾ ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿಗಳ ತಂಡ ಉಜಿರೆಯ ಎಸ್‌ಡಿಎಮ್ ಕಾಲೇಜಿನ ಸ್ನಾತಕೋತ್ತರ ಅರ್ಥಶಾಸ್ತ್ರ ವಿಭಾಗದ ಆಶ್ರಯದಲ್ಲಿ ಫೆ. ರಂದು ಜರಗಿದ ಇಕೊ-ಆರ್ಟ್ಸ್ ಫೆಸ್ಟ್-2016’ ರಲ್ಲಿ ಭಾಗವಹಿಸಿ, ಸಮಗ್ರ ಪ್ರಶಸ್ತಿಯನ್ನು ಪಡೆದಿದೆ. ಕಾಲೇಜಿನ ವಿದ್ಯಾರ್ಥಿಗಳು ವಿವಿಧ ಸ್ಪರ್ಧಾ ವಿಭಾಗಗಳಲ್ಲಿ ಭಾವಹಿಸಿದ್ದು, ಪ್ರಬಂಧ ಸ್ಪರ್ಧೆಯಲ್ಲಿ ಪ್ರಕಾಶ್ ಮೆಲ್ವಿನ್ ಡಿಸೋಜ ಪ್ರಥಮ ಮತ್ತು ದೀಪಿಕಾ ಎಮ್ ದ್ವಿತೀಯ ಸ್ಥಾನ, ಭಾಷಣ ಸ್ಪರ್ಧೆಯಲ್ಲಿ ಅಕ್ಷತಾ ಶರ್ಮ ದ್ವಿತೀಯ ಸ್ಥಾನ, ರಸಪ್ರಶ್ನೆ ಸ್ಪರ್ಧೆಯಲ್ಲಿ ದೀಪಿಕಾ ಮತ್ತು ಡೋನಲ್ ತಂಡ ತೃತೀಯ ಸ್ಥಾನ ಗಳಿಸಿದ್ದು, ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕಿ ಪ್ರೊ. ಹರ್ಷಿತಾ ಪಿ ವಿ ಸ್ಪರ್ಧಾ ತಂಡವನ್ನು ಸಂಯೋಜಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News