×
Ad

ಪುತ್ತೂರು: ಫಿಲೋಮಿನಾ ಕಾಲೇಜಿಗೆ ವಿವಿ ವಲಯ ಮಟ್ಟದ ಕ್ರಿಕೆಟ್ ಚಾಂಪಿಯನ್‌ಶಿಪ್

Update: 2016-02-28 17:01 IST

ಪುತ್ತೂರು: ಇಲ್ಲಿಯ ಸಂತ ಫಿಲೋಮಿನಾ ಕಾಲೇಜಿನ ಕ್ರಿಕೆಟ್ ತಂಡವು ಮಂಗಳೂರು ಸಂತ ಅಲೋಶಿಯಸ್ ಕಾಲೇಜು ವತಿಯಿಂದ ಸಂಘಟಿಸಲ್ಪಟ್ಟ ಮಂಗಳೂರು ವಲಯ ಮಟ್ಟದ ಎಂ ದಯಾನಂದ ಕಾಮತ್ ಟ್ರೋಫಿ-2016  
     2461 54 145  36 139 61 8 ಅಂತರ್ ಕಾಲೇಜು ಕ್ರಿಕೆಟ್ ಪಂದ್ಯಾಟದಲ್ಲಿ ಚಾಂಪಿಯನ್‌ಶಿಪ್ ಪ್ರಶಸ್ತಿ ಪಡೆದುಕೊಂಡಿದೆ. ಫೆ. ರಂದು ಸುರತ್ಕಲ್ ಎನ್‌ಐಟಿಕೆ ಕ್ರೀಡಾಂಗಣದಲ್ಲಿ ಜರಗಿದ ಫೈನಲ್ ಪಂದ್ಯಾಟದಲ್ಲಿ ಫಿಲೋಮಿನಾ ಕಾಲೇಜು ತಂಡವು ಮಂಗಳೂರಿನ ಬಲಿಷ್ಟ ಎಸ್‌ಡಿಎಂ ವ್ಯವಹಾರ ನಿರ್ವಹಣೆ ಕಾಲೇಜು ತಂಡವನ್ನು ಐದು ರನ್ನುಗಳಿಂದ ರೋಮಾಂಚಕವಾಗಿ ಪರಾಭವಗೊಳಿಸಿತು. ಐವತ್ತು ಓವರ್‌ಗಳ ಈ ಟೂರ್ನಮೆಂಟ್‌ನಲ್ಲಿ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಫಿಲೋಮಿನಾ ಕಾಲೇಜು ತಂಡ ಮಧ್ಯಮ ಶ್ರೇಯಾಂಕದ ಆಲ್‌ರೌಂಡರ್ ಆಟಗಾರ ಲೋಕೇಶ್‌ರವರ ಆಕರ್ಷಕ ಬ್ಯಾಟಿಂಗ್ ನೆರವಿನಿಂದ ರನ್ ಮತ್ತು ತಂಡದ ಕಪ್ತಾನ ಆದತ್ಯ ರೈಯವರ ರನ್‌ಗಳ ನೆರವಿನಿಂದ ಗಳಿಸಿತು. ಇದಕ್ಕುತ್ತರವಾಗಿ ಬ್ಯಾಟಿಂಗ್ ಆರಂಬಿಸಿದ ಎಸ್‌ಡಿಎಂ ವ್ಯವಹಾರ ನಿರ್ವಹಣೆ ಕಾಲೇಜು ತಂಡವು ಫಿಲೋಮಿನಾ ಕಾಲೇಜಿನ ಲೋಕೇಶ್ ಅವರ ಬೌಲಿಂಗ್ ದಾಳಿಗೆ ಕೇವಲ ಓವರ್‌ಗಳಲ್ಲಿ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು ರನ್ ಗಳಿಸಿ ಸೋಲನ್ನು ಒಪ್ಪಿಕೊಂಡಿತು. ಫಿಲೋಮಿನಾ ಕಾಲೇಜು ಸವ್ಯಸಾಚಿ ಆಟಗಾರ ಲೋಕೇಶ್ ರನ್ ಮತ್ತು ವಿಕೆಟ್ ಪಡೆಯುವುದರೊಂದಿಗೆ ತಂಡದ ವಿಜಯಕ್ಕೆ ಕಾರಣಕರ್ತರಾದರು.
      ಸಮಾರೋಪ ಸಮಾರಂಭದಲ್ಲಿ ಕಸ್ತೂರಿ ಬಾಕೃಷ್ಣ ಪೈ, ಪಂದ್ಯಾಟದ ಸಂಯೋಜಕ ಸಂತ ಅಲೋಶಿಯಸ್ ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕ ಡೊನೆಟ್ ಡಿಸೋಜ, ಸಂತ ಫಿಲೋಮಿನಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಪ್ರಕಾಶ್ ಡಿಸೋಜ ಮೊದಲಾದವು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News