ಹಾರಾಡಿ ಶಾಲೆಯಲ್ಲಿ ಪ್ರಥಮ ಮಕ್ಕಳ ಸಾಹಿತ್ಯ ಸಂಭ್ರಮ
ಪುತ್ತೂರು: ಮಾನವನ ಬಹುಮುಖಿ ವಿಕಾಸದ ಹಾದಿಯಲ್ಲಿ ಕೇಳುವಿಕೆ ಹಾಗೂ ಓದುವಿಕೆ ಯಾ ಜ್ಞಾನ ಸಂರಚನಾ ಪ್ರಕ್ರಿಯೆಯು ಅತ್ಯಂತ ಪ್ರಮುಖವಾದವುಗಳು. ಶಾಲೆಗಳು ವಿದ್ಯಾರ್ಥಿಗಳಿಗೆ ಈ ಆಯಾಮಗಳು ರಚನೆಗೊಳ್ಳುವಂತೆ ಮಾಡುವಲ್ಲಿ ಅವಕಾಶ ನೀಡುತ್ತವೆ. ಇಂತಹ ಸಾಹಿತ್ಯ ಸಂಬಂಧೀ ಕಾರ್ಯಕ್ರಮಗಳಲ್ಲಿ ತೊಡಗಿಕೊಳ್ಳುವುದರಿಂದ ನಮ್ಮ ಪ್ರತಿಭೆ ಯಾ ಶಕ್ತಿಗಳು ಯುಕ್ತವಾಗಿ ಬಳಕೆಯಾಗುತ್ತವೆಎಂದುಮಂಗಳೂರು ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕ ಡಾ.ಎಚ್.ಕುಮಾರಸ್ವಾಮಿಯವರುನುಡಿದರು
ಅವರು ಶನಿವಾರ ಪುತ್ತೂರು ನಗರದ ಹಾರಾಡಿ ಸರಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆAiÀÄಲ್ಲಿನ ಡಾ.ಶಿವರಾಮ ಕಾರಂತ ಸಾಹಿತ್ಯ ವೇದಿಕೆಯ ವತಿಯಿಂದ ನಡೆದ ಮಕ್ಕಳ ಸಾಹಿತ್ಯ ಸಂಭ್ರಮ ಹಾಗೂ "ಹಾರ "ಶಾಲಾ ವಾರ್ಷಿಕ ಸಂಚಿಕೆಯ ಲೋಕಾರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹಾರ ವಾರ್ಷಿಕ ಸಂಚಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿದ ಪುತ್ತೂರು ನಗರಸಭಾ ಸದಸ್ಯೆ ಜಯಲಕ್ಷ್ಮೀ ಸುರೇಶ್ ಮಾತನಾಡಿ ಹಾರಾಡಿ ಶಾಲೆಯಲ್ಲಿ ಮಕ್ಕಳ ವಿದ್ಯಾಭ್ಯಾಸದ ಪ್ರಕ್ರಿಯೆಯಲ್ಲಿ ಎಲ್ಲಾ ತೆರನಾದ ಅವಕಾಶಗಳನ್ನು ಎಂದರು
ಸಮ್ಮೇಳನದ ಪ್ರಯುಕ್ತ ಏರ್ಪಡಿಸಲಾಗಿದ್ದ ಪುಸ್ತಕ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ ಜಿ.ಎಸ್. ಅವರು ವಿಷನ್ ಪುತ್ತೂರಿನ ಬ್ರಾಂಡೆಡ್ ಶಾಲೆಯಾಗಿರುವ ಹಾರಾಡಿ ಶಾಲೆಯು ತನ್ನ ಶೈಕ್ಷಣಿಕ ಕಾಳಜಿಯ ಬದ್ಧತೆಯಿಂದ ರಾಜ್ಯದಲ್ಲಿಯೇ ಮಾದರಿ ಶಾಲೆಯಾಗಿ ಕಾರ್ಯನಿರ್ವಹಿಸುತ್ತಿದೆ.ವಿದ್ಯಾರ್ಥಿಗಳ ಬೌದ್ಧಿಕ ವಿಕಾಸಕ್ಕೆ ಇಂತಹ ಕಾರ್ಯಕ್ರಮಗಳು ಹೆಚ್ಚು ಪೂರಕ ಎಂದರು.
ಮಕ್ಕಳ ಸಾಹಿತ್ಯ ಸಂಭ್ರಮದ ಅಧ್ಯಕ್ಷತೆಯನ್ನು ಹಾರಾಡಿ ಶಾಲಾ ಹಿರಿಯ ವಿದ್ಯಾರ್ಥಿನಿ ಹಾಗೂ ರಾಮಕೃಷ್ಣ ಪ್ರೌಢಶಾಲೆಯ ವಿದ್ಯಾರ್ಥಿನಿ ಶಿಲ್ಪಾ ಬಿ ವಹಿಸಿದ್ದರು.
ವೇದಿಕೆಯಲ್ಲಿ ತಾಲ್ಲೂಕು ದೈ.ಶಿ.ಪರಿವೀಕ್ಷಣ ಅಧಿಕಾರಿ ಸುಂದರ ಗೌಡ, ಶಿಕ್ಷಣ ಸಂಯೋಜಕ ಲೋಕಾನಂದ, ಬಿ.ಆರ್.ಪಿ.ಪ್ರದೀಪ್,ಸಿ.ಆರ್.ಪಿ.ಶಾಲಿನಿ ರೈ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಮಹೇಶ್ ನಾಯ್ಕ್, ಉದ್ಯಮಿ ಸದಾಶಿವ್ ತೆಂಕಿಲ,ಹಿರಿಯ ವಿದ್ಯಾರ್ಥಿ ಲೋಕೇಶ್ ಗೌಡ ಅಲುಂಬುಡ, ಸಾಹಿತ್ಯ ವೇದಿಕೆ ಅಧ್ಯಕ್ಷೆ ಶ್ರಾವ್ಯಾ ಮತ್ತಿತರರು ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕ ಮುದರ ಎಸ್.ಸ್ವಾಗತಿಸಿದರು. ಸಾಹಿತ್ಯ ವೇದಿಕೆಯ ಮಾರ್ಗದರ್ಶಿ ಶಿಕ್ಷಕರಾದ ಪ್ರಶಾಂತ್ ಅನಂತಾಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಹಾರ ಪತ್ರಿಕೆಯ ಕಾರ್ಯನಿರ್ವಹಣಾ ಸಂಪಾದಕರಾದ ಶಮಿತಾ ಕಾರ್ಯಕ್ರಮ ನಿರೂಪಿಸಿದರು.ದಿವಿತ್.ಯು.ರೈ ಪುಸ್ತಕ ನಮನ ಸಲ್ಲಿಸಿದರು.ನಿಶಿತಾ ವಂದಿಸಿದರು.
ಬಳಿಕ ನಡೆದ ಕವಿಸಮಯ ಗೀತಾನಮನ ವಿದ್ಯಾರ್ಥಿ ಕವಿಗೋಷ್ಠಿಯಲ್ಲಿ ವಿದ್ಯಾರ್ಥಿ ಕವಿಗಳಾದ ಅಭಿಲಾಷ ದೋಟ, ಶಮಿತಾ, ಶ್ರಾವ್ಯಾ, ನಮ್ರತಾ, ದಿವ್ಯ ತಂತಮ್ಮ PÀ«vÉ ವಾಚಿಸಿದರು. ವೈಷ್ಣವಿ ಹಾಗೂ ಶ್ರಾವ್ಯ ಇವರು ಕವನಗಳನ್ನು ಹಾಡಿದರು.ನಿವೃತ್ತ ಮುಖ್ಯಶಿಕ್ಷಕ ಭಾಸ್ಕರ ಅಡ್ವಳ ಮಕ್ಕಳ ಕವಿ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು.ಬಿ.ಆರ್.ಪಿ. ದೇವಕಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಇದರ ನಂತರ ನಡೆದ "ಮಾತು ಮತ್ತು ಓದು "ವಿದ್ಯಾರ್ಥಿ ವಿಚಾರಗೋಷ್ಠಿಯಲ್ಲಿ "ಕನ್ನಡ ಭಾಷೆ ಮತ್ತು ನಮ್ಮ ಸಾಹಿತ್ಯದ ಅಭಿರುಚಿಗಳು "ಕುರಿತಂತೆ ನಿಶಾಂತ್.ಬಿ ಹಾಗೂ "ಆಂಗ್ಲ ಭಾಷೆ ಮತ್ತು ನಮ್ಮ ಸಾಹಿತ್ಯದ ಅಭಿರುಚಿಗಳು "ಕುರಿತಂತೆ ದಿವಿತ್ ಯು.ರೈ ಇವರು ತಮ್ಮ ಅನಿಸಿಕೆಗಳನ್ನು ಮಂಡಿಸಿದರು. ಹಿರಿಯ ರಂಗಕರ್ಮಿ ಐ.ಕೆ.ಬೊಳುವಾರು ಈ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಬಿ.ಆರ್.ಪಿ.ಸವಿತಾ ಗುಜ್ರಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅಪರಾಹ್ನ ನಡೆದ ಸಮಾರೋಪ ಸಮಾರಂಭದಲ್ಲಿ ರಾಮಕೃಷ್ಣ ಪ್ರೌಢಶಾಲೆಯ ಶಿಕ್ಷಕಿ ರೂಪಕಲಾ ರೈ ಮಾತನಾಡಿ "ಶಾಲಾ ಚಟುವಟಿಕೆಗಳು ವಿದ್ಯಾರ್ಥಿಗಳ ಭಾವನಾತ್ಮಕ ಸ್ಪಂದನೆ ಮತ್ತು ವಿಕಾಸಕ್ಕೆ ಬೆಂಬಲವಾಗಿ ನಿಲ್ಲುತ್ತದೆ. ಹಾರಾಡಿ ಶಾಲೆಯಲ್ಲಿ ಇಂತಹ ಕೆಲಸಗಳು ಉತ್ತಮವಾಗಿ ನಡೆಯುತ್ತಿವೆ " ಎಂದರು.
ವೇದಿಕೆಯಲ್ಲಿ ಬಿ.ಆರ್.ಪಿ.ದಿನೇಶ್ ಮಾಚಾರ್, ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷೆ ಪ್ರತಿಮಾ ಯು.ರೈ, ನಿವೃತ್ತ ಶಿಕ್ಷಕಿ ವಿನಯಪ್ರಭಾ ಇವರು ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಸಾಹಿತ್ಯ ವೇದಿಕೆಯ ವತಿಯಿಂದ ನಡೆಸಿದ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಸಮ್ಮೇಳನದ ಸರ್ವಾಧ್ಯಕ್ಷೆ ಶಿಲ್ಪಾರನ್ನು ಗೌರವಿಸಲಾಯಿತು.