ಮಂಗಳೂರು :ಪಿಲಿಕುಳದ ಉದ್ಯಾನವನ ಬಳಿ ಬೆಂಕಿ
Update: 2016-02-28 18:38 IST
ಮಂಗಳೂರು,ಫೆ.28: ವಾಮಂಜೂರು ಪಿಲಿಕುಳದಲ್ಲಿರುವ ಜಿಲ್ಲಾ ಕ್ಷಯ ರೋಗ ಆಸ್ಪತ್ರೆಗೆ ಸೇರಿದ ಜಾಗದಲ್ಲಿ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ಹಿಂಭಾಗದಲ್ಲಿ ಇಂದು ಮಕ್ಕಳು ಸ್ವಚ್ಚತೆ ಮಾಡುವ ಸಂದರ್ಭದಲ್ಲಿ ಹಾಕಿದ ಬೆಂಕಿ ವ್ಯಾಪಕವಾಗಿ ಹಬ್ಬಿ ಮರಗಿಡಗಳು ಬೆಂಕಿಗಾಹುತಿಯಾಗಿದೆ.
ಬೆಂಕಿ ಬಿದ್ದ ಪ್ರದೇಶದಲ್ಲಿ ಹಲವು ಗಿಡಮರಗಳು , ಒಂದು ಹಳೆ ಶೆಡ್ ಇದ್ದು ಇವುಗಳು ಬೆಂಕಿಗಾಹುತಿಯಾಗಿದೆ. ಕದ್ರಿ ಅಗ್ನಿಶಾಮಕದಳದ ಸಿಬ್ಬಂದಿಗಳು ತಕ್ಷಣವೆ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ.