×
Ad

ಇಲ್ಲೊಬ್ಬ ಚ್ಯಾನೆಲ್ ಬದಲಿಸಿದ್ದಕ್ಕೆ ಪತ್ನಿಯ ವಿರುದ್ಧವೇ ಕೇಸು ಹಾಕಿದ!

Update: 2016-02-28 19:23 IST

ಇಸ್ತಾಂಬುಲ್: ಪತಿಪತ್ನಿಯರ ನಡುವೆ ಜಗಳ ಇದ್ದದ್ದೇ. ಆದರೆ ಇಸ್ತಾಂಬುಲ್‌ನಲ್ಲಿ ಅತ್ಯಾಶ್ಚರ್ಯಕಾರಿ ಪ್ರಕರಣವೊಂದುಬೆಳಕಿಗೆ ಬಂದಿದೆ. ಪತಿ ತನ್ನ ಪತ್ನಿ ಟಿವಿಚ್ಯಾನೆಲ್ ಬದಲಾಯಿಸುತ್ತಾಳೆ ಎಂದು ಪತಿಮಹಾಶಯ ಕೇಸು ಹಾಕಿದ್ದಾನೆ.
 ವರದಿಯಾಗಿರುವ ಪ್ರಕಾರ ಇಸ್ತಾಂಬುಲ್‌ನ ಈ ದಂಪತಿಗಳಲ್ಲಿ ಟಿವಿಕುರಿತು ಜಗಳ ಆರಂಭವಾಯಿತು. ಪತ್ನಿ ಟಿವಿಚ್ಯಾನಲ್‌ನಲ್ಲಿ ಪ್ರಸಾರವಾಗುತ್ತಿದ್ದ ಅಧ್ಯಕ್ಷರಿಗೆ ಸಂಬಂಧಿಸಿದ ಸುದ್ದಿಯನ್ನು ಬದಲಾಯಿಸಿ ಬೇರೆ ಚ್ಯಾನೆಲ್ ಇಟ್ಟಳು. ಟ್ರಕ್ ಚಾಲಕನಾದ ಅಲಿಗೆ ಇದು ಸಹಿಸಲು ಸಾಧ್ಯ ಆಗಲಿಲ್ಲ. ಈ ವಿಷಯವನ್ನೆತ್ತಿಕೊಂಡು ಆತ ಕೇಸು ದಾಖಲಿಸಿದ.
 ಅಲಿ ತನ್ನ ಪತ್ನಿ ಹಾಗೆ ಮಾಡಿದ್ದು ತನಗೆ ಅವಮಾನವಾಗಿದೆ ಎಂದಿದ್ದಾನೆ. ಅಧ್ಯಕ್ಷರ ಮಾತು ಮುಗಿದ ಮೇಲೆಚ್ಯಾನೆಲ್ ಬದಲಿಸಬೇಕಿತ್ತು ಎಂದು ಅವನು ಹೇಳುತ್ತಾನೆ. ಅಧ್ಯಕ್ಷರಿಗೆ ಸಂಬಂಧಿಸಿದ ವರದಿ ಟಿವಿಯಲ್ಲಿ ಬಂದರೆ ಆತ ಅದನ್ನು ತಪ್ಪಿಸಿಕೊಳ್ಳಲು ಸಿದ್ಧನಿಲ್ಲ. ಅಧ್ಯಕ್ಷರು ದೇಶ ಹಾಗೂ ಎಲ್ಲರ ಒಳಿತಿಗಾಗಿ ಮಾತಾಡುವರೆಂದು ಅವನ ನಂಬಿಕೆಯಾಗಿದೆ. ಅಧ್ಯಕ್ಷರ ಕುರಿತು ತನ್ನ ತಂದೆ ಈ ರೀತಿ ವರ್ತಿಸಿದರೆ ಅವರನ್ನೂ ನಾನು ಸಹಿಸುತ್ತಿರಲಿಲ್ಲ ಎಂದು ಅಲಿ ಹೇಳುತ್ತಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News